ಮಕ್ಕಳಿಗೆ ಬುದ್ಧಿವಾದ; ಪೋಷಕರಿಗೆ ಕಿವಿಮಾತು ಹೇಳಿದ ಕೋರ್ಟ್‌

Team Udayavani, Dec 1, 2018, 12:33 PM IST

highcourt4.jpg

ಬೆಂಗಳೂರು: ಸ್ಥಿರಾಸ್ತಿ ಮೇಲಿನ ಹಕ್ಕು ಸಾಧಿಸುವ ಪ್ರಕರಣವೊಂದರ ವಿಚಾರಣೆ ವೇಳೆ ಶುಕ್ರವಾರ ಮಕ್ಕಳಿಗೆ ಬುದ್ಧಿವಾದ ಹೇಳಿದ ಹೈಕೋರ್ಟ್‌ ಮಕ್ಕಳನ್ನು ಬೆಳೆಸುವ ರೀತಿ ಬಗ್ಗೆ ಪೋಷಕರಿಗೆ ಕಿವಿಮಾತು ಹೇಳಿತು. ಈ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಕ್ಕಳು ಹಾಗೂ ಪೋಷಕರ ನಡುವಿನ ಬಾಂಧವ್ಯಕ್ಕೆ ಪ್ರೀತಿ-ವಿಶ್ವಾಸವೇ ಸೇತುವೆ ಎಂದು ಅಭಿಪ್ರಾಯಪಟ್ಟಿತು.

ತನಗೆ ಬರೆದ ದಾನಪತ್ರವನ್ನು ತಾಯಿ ವಾಪಸ್‌ ಪಡೆದಿರುವ ಕ್ರಮವನ್ನು ಪ್ರಶ್ನಿಸಿ ಮೈಸೂರಿನ ಎನ್‌.ಡಿ. ವನಮಾಲಾ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಪೀಠ, 82 ವರ್ಷದ ವಿಧವೆ ತಾಯಿಯ ಪೋಷಣೆ ಬಗ್ಗೆ ಕಾಳಜಿ ವಹಿಸದೇ ಆಕೆಯ ಸ್ಥಿರಾಸ್ತಿ ಮೇಲೆ ಹಕ್ಕು ಸಾಧಿಸಲು ಹೊರಟ ಮಗಳ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿತು. ಅಲ್ಲದೇ ಮಗಳು ಸಲ್ಲಿಸಿದ ರಿಟ್‌ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿತು.

ವಿಚಾರಣೆ ನಡೆಸಿದ ನ್ಯಾಯಪೀಠ, ಆದೇಶದಲ್ಲಿ ಭಗವದ್ಗೀತೆಯ ಶ್ಲೋಕಗಳು ಮತ್ತು ಡಿ.ವಿ. ಗುಂಡಪ್ಪ ಅವರ ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಉಲ್ಲೇಖೀಸಿ “ದಯೆಗಿಂತ ದೊಡ್ಡದಾದ ಧರ್ಮ ಯಾವುದೂ ಇಲ್ಲ. ತಂದೆ-ತಾಯಿಗಿಂತ ದೊಡ್ಡ ದೇವರಿಲ್ಲ, ಕ್ರೋಧಕ್ಕಿಂತ ದೊಡ್ಡ ಶತ್ರು ಇನ್ನೊಂದಿಲ್ಲ. ಮರ್ಯಾದೆಗಿಂತ ದೊಡ್ಡ ಸಂಪತ್ತು ಮತ್ತೂಂದಿಲ್ಲ.

ಪೋಷಕರು ಇಲ್ಲದೇ ನಾವು ಈ ಭೂಮಿಯ ಮೇಲೆ ಹುಟ್ಟಿ ಬಂದಿಲ್ಲ. ಅವರು ನಮ್ಮನ್ನು ಸಾಕಿ, ಸಲುಹಿ, ಶಿಕ್ಷಣ ನೀಡಿ ಬೆಳೆಸಿದ್ದಾರೆ. ಮಕ್ಕಳು ಪೋಷಕರ ಗೌರವ ಕಳೆಯಬಾರದು. ಅವರ ಬಾಳಿನ ಇಳಿವಯಸ್ಸಿನಲ್ಲಿ ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದೆ.

ಇದೇ ವೇಳೆ “ಮಕ್ಕಳು ಈ ದೇಶದ ಆಸ್ತಿ. ಹಿರಿಯರ ಬಗ್ಗೆ ಗೌರವ, ಆದರ ಹಾಗೂ ಪ್ರೀತಿ ಸದಾ ರೂಢಿಸಿಕೊಳ್ಳುವಂತೆ ಅವರನ್ನು ಬೆಳೆಸುವಲ್ಲಿ ಪೋಷಕರು ನಿಗಾ ವಹಿಸಬೇಕು. ಅಂತೆಯೇ ಮಕ್ಕಳೂ ಪೋಷಕರ ತ್ಯಾಗವನ್ನು ಮರೆಯಬಾರದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿತು.

ಏನಿದು ಪ್ರಕರಣ?: ನಮ್ಮ ತಾಯಿ ನಮಗೆ ಬರೆದಿದ್ದ ದಾನಪತ್ರವನ್ನು ವಾಪಸು ಪಡೆದಿದ್ದಾರೆ. ಇದನ್ನು ಮೈಸೂರಿನ ಉಪವಿಭಾಗಧಿಕಾರಿ ನೀಡಿದ್ದ ಆದೇಶವನ್ನು ಜಿಲ್ಲಾಧಿಕಾರಿ ಮುಂದೆ ಪ್ರಶ್ನಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಕೂಡಾ ಹಿರಿಯ ನಾಗರಿಕರು ಹಾಗೂ ಪೋಷಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ2007ರ ಕಲಂ 23 (1)ರ ಪ್ರಕಾರ ನೀಡಲಾಗಿರುವ ಉಪವಿಭಾಗಾಧಿಕಾರಿಯವರ ಆದೇಶವನ್ನು ಎತ್ತಿ ಹಿಡಿದ್ದಾರೆ.

ಇದು ಕಾನೂನು ಬಾಹಿರ ಎಂದುಈ ಆದೇಶ ಎ.ಸಿ ಆದೇಶವನ್ನು ಎತ್ತಿ ಹಿಡಿದಿದ್ದಾರೆ. ಇದು ಕಾನೂನು ಬಾಹಿರ ಎಂದು ಆಕ್ಷೇಪಿಸಿ ಮೈಸೂರಿನ ಎನ್‌.ಡಿ.ವನಮಾಲಾ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಪೀಠ ವಜಾಗೊಳಿಸಿತು.

ಟಾಪ್ ನ್ಯೂಸ್

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Theft Case: ಅಕ್ಕನ ಮನೆಯಲ್ಲಿ 52 ಲಕ್ಷ, ಚಿನ್ನ ಕದ್ದ ತಂಗಿ

Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್‌ ಕದ್ದ ಆಟೋ ಡ್ರೈವರ್‌ ಬಂಧನ

Bengaluru: ಚಿನ್ನಾಭರಣ ಇರಿಸಿದ್ದ ಯುವಕನ ಬ್ಯಾಗ್‌ ಕದ್ದ ಆಟೋ ಡ್ರೈವರ್‌ ಬಂಧನ

Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ

Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

1-wqe-wewq

Cryptocurrency ವೆಬ್‌ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

1-wwewewqe

Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು

1-wqe-wq-ewqeqq

Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.