ಹರ್ಟ್ಸ್ ಬರ್ಗರ್ ಹ್ಯಾಟ್ರಿಕ್ ನೆದರ್ಲೆಂಡ್ 7-0 ಜಯಭೇರಿ
Team Udayavani, Dec 2, 2018, 6:30 AM IST
ಭುವನೇಶ್ವರ: ಸ್ಟ್ರೈಕರ್ ಜೆರೋನ್ ಹರ್ಟ್ಸ್ ಬರ್ಗರ್ ಅವರ ಅಮೋಘ ಹ್ಯಾಟ್ರಿಕ್ ಗೋಲುಗಳ ಸಾಹಸದಿಂದ ಮಲೇಶ್ಯ ವಿರುದ್ಧ ಶನಿವಾರ ನಡೆದ ಮೊದಲ ವಿಶ್ವಕಪ್ ಹಾಕಿ ಪಂದ್ಯದಲ್ಲಿ ನೆದರ್ಲೆಂಡ್ 7-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ.
212 ಪಂದ್ಯಗಳ ಅನುಭವಿ ಹರ್ಟ್ಸ್ ಬರ್ಗರ್ ಪಂದ್ಯದ 11ನೇ, 29ನೇ ಹಾಗೂ 60ನೇ ನಿಮಿಷದಲ್ಲಿ ಗೋಲು ಸಿಡಿಸಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು. ಇದು ಪ್ರಸಕ್ತ ವಿಶ್ವಕಪ್ನಲ್ಲಿ ದಾಖಲಾದ ಮೊದಲ ಹ್ಯಾಟ್ರಿಕ್ ಸಾಧನೆಯಾಗಿದೆ. ಹರ್ಟ್ಸ್ ಬರ್ಗರ್ ಅವರಿಗೆ ಮಿರ್ಕೊ ಪ್ರುಯಿಸರ್, ಮಿಂಕ್ ವಾನ್ ಡರ್ ವೀರ್ಡೆನ್, ರಾಬರ್ಟ್ ಕೆಂಪರ್ಮ್ಯಾನ್ ಮತ್ತು ಥಿಯರಿ ಬ್ರಿಂಕ್ಮ್ಯಾನ್ ಉತ್ತಮ ಬೆಂಬಲವಿತ್ತು ಒಂದೊಂದು ಗೋಲು ದಾಖಲಿಸಿದರು. ಕೆಂಪರ್ಮ್ಯಾನ್ ಪಾಲಿಗೆ ಇದು 200ನೇ ಪಂದ್ಯದ ಸಂಭ್ರಮವಾಗಿತ್ತು.
ವಿಶ್ವದ 4ನೇ ರ್ಯಾಂಕಿಂಗ್ ತಂಡವಾಗಿರುವ, ಯುರೋಪಿಯನ್ ಚಾಂಪಿಯನ್ ಖ್ಯಾತಿಯ ನೆದರ್ಲೆಂಡ್ ಪಂದ್ಯದ ಪ್ರತಿಯೊಂದು ಕ್ವಾರ್ಟರ್ನಲ್ಲೂ ಗೋಲು ಸಿಡಿಸುತ್ತ ಹೋಯಿತು. ಡಚ್ಚರ ಹಾರಾಟದ ಮುಂದೆ ಮಲೇಶ್ಯ ಪೆಚ್ಚಾಯಿತು. ಲಭಿಸಿದ ಎಲ್ಲ ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸಿದ್ದೇ ಆದರೆ ನೆದರ್ಲೆಂಡ್ ಗೆಲುವಿನ ಅಂತರ ಇನ್ನಷ್ಟು ಹೆಚ್ಚುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ