ಇಸ್ಲಾಂ ವಿರೋಧಿಗಳಿಗೆ ನಾನು ಟಾರ್ಗೆಟ್:ಝಾಕಿರ್ ನಾಯ್ಕ್
Team Udayavani, Dec 2, 2018, 12:20 PM IST
ಕಾಂಗರ್: ಉಗ್ರರಿಗೆ ಪ್ರೇರಣೆಯಾದ ಮತ್ತು ಹಣಕಾಸು ಅವ್ಯವಹಾರಗಳ ಆರೋಪ ಎದುರಿಸುತ್ತಿರುವ ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕಿರ್ ನಾಯ್ಕ್ ನಾನು ಭಾರತದ ಯಾವುದೇ ಕಾನೂನನ್ನು ಮುರಿದಿಲ್ಲ. ನನ್ನನ್ನು ಇಸ್ಲಾಂ ವಿರೋಧಿಗಳು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.
ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ 53 ರ ಹರೆಯದ ನಾಯ್ಕ್ ಉತ್ತರ ಮಲೇಷ್ಯಾದ ಕಾಂಗರ್ ಎಂಬಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಸಂದೇಶ ನೀಡುತ್ತಿದ್ದ ವೇಳೆ ಈ ಹೇಳಿಕೆ ನೀಡಿದ್ದಾನೆ.
ನಾನು ಶಾಂತಿಯನ್ನು ಹರಡುತ್ತಿದ್ದೇನೆ, ಶಾಂತಿ ಮೇಲುಗೈ ಸಾಧಿಸಲು ನಾನು ಮಾನವೀಯತೆಯ ಪರಿಹಾರವನ್ನು ನೀಡುತ್ತಿದ್ದೇನೆ, ಶಾಂತಿಯಿಂದ ಇರಲು ಯಾರು ಬಯಸುವುದಿಲ್ಲವೋ ಅವರು ನನ್ನನ್ನು ಇಷ್ಟಪಡುವುದಿಲ್ಲ ಎಂದಿದ್ದಾನೆ.
ಝಾಕಿರ್ ನಾಯ್ಕ್ ವಿರುದ್ಧ ಭಾರತದಲ್ಲಿ ತನಿಖೆಗಳು ಚುರುಕಾದಂತೆ ಆತ ಮಲೇಷ್ಯಾಗೆ ತೆರಳಿ ಖಾಯಂ ಆಶ್ರಯ ಪಡೆದಿದ್ದಾನೆ.