ಮೂಡುಬೆಳ್ಳೆ ಚರ್ಚ್‌ ಸಮುದಾಯ ಭವನ ಲೋಕಾರ್ಪಣೆ

Team Udayavani, Dec 3, 2018, 10:57 AM IST

shirva-church-2-12.jpg

ಶಿರ್ವ: ಮೂಡುಬೆಳ್ಳೆ ಸಂತ ಲಾರೆನ್ಸ್‌ ಚರ್ಚ್‌ನ ನೂತನ ಸಂತ ಲಾರೆನ್ಸ್‌ ಸೌಹಾರ್ದ ಸೌಧವನ್ನು ಆಗ್ರಾ ಧರ್ಮಪ್ರಾಂತದ ಆರ್ಚ್‌ ಬಿಷಪ್‌ ರೈ| ರೆ| ಡಾ| ಆಲ್ಬರ್ಟ್‌ ಡಿ’ಸೋಜಾ ಮತ್ತು ಉಡುಪಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ರವಿವಾರ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ಬಿಷಪ್‌ ಆಶೀರ್ವಚನ ನೀಡಿ, ಮೂಡುಬೆಳ್ಳೆ ಪರಿಸರದ ಸರ್ವರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ಸಮುದಾಯ ಭವನ ನಿರ್ಮಾಣಗೊಂಡಿದೆ. ಈ ಸಮುದಾಯ ಭವನವು ಬೆಳ್ಳೆ ಪರಿಸರದ ಜನರ ಪ್ರೀತಿಯ ಸಂಕೇತವಾಗಿದ್ದು, ಶಾಂತಿ ಸಾಮರಸ್ಯದ ತಾಣವಾಗಲಿ ಎಂದರು.

ದಾನಿಗಳಾದ ಕತಾರ್‌ನ ಉದ್ಯಮಿ ವಿಲಿಯಂ ಅರಾನ್ಹಾ, ದುಬಾೖಯ ರೊನಾಲ್ಡ್‌ ಸಾಬಿ ಡಿ’ಸೋಜಾ ಮತ್ತು ವಿಲ್ಫ್ರೆಡ್‌ ಮಿನೇಜಸ್‌ ಅವರನ್ನು ಬಿಷಪ್‌ ಸಮ್ಮಾನಿಸಿದರು. ತಾರಾ ಡಿ’ಸೋಜಾ ಮತ್ತು ಜೋಸ್ತಿನ್‌ ಮೆಂಡೋನ್ಸಾ ದಾನಿಗಳ ಪರಿಚಯ ಮಾಡಿದರು. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ವಾಸ್ತುಶಿಲ್ಪಿ ಎಲಿಯಾಸ್‌ ಡಿ’ಸೋಜಾ, ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ಕ್ಲೆಮೆಂಟ್‌ ಮಸ್ಕರೇನಸ್‌ ಮತ್ತು ಸಹಾಯಕ ಧರ್ಮಗುರು ರೆ| ಫಾ| ಲಾರೆನ್ಸ್‌ ಕುಟಿನ್ಹಾ ಅವರನ್ನು ಸಮ್ಮಾನಿಸಲಾಯಿತು. ಹೆನ್ರಿ ಫೆರ್ನಾಂಡಿಸ್‌ ಮತ್ತು ಜುಡಿತ್‌ ಲೋಬೋ ಪರಿಚಯಿಸಿದರು. ದಾನಿಗಳನ್ನು ಮತ್ತು ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಸಿ| ಐರಿನ್‌ ವೇಗಸ್‌ ದಾನಿಗಳ ವಿವರ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಆರ್ಚ್‌ ಬಿಷಪ್‌ ರೈ| ರೆ| ಡಾ| ಆಲ್ಬರ್ಟ್‌ ಡಿ’ಸೋಜಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಸಮುದಾಯ ಭವನವು ಸರ್ವಜನರ ಉಪಯೋಗಕ್ಕೆ ಬರಲಿ ಎಂದು ಹಾರೈಸಿದರು.

ಉಡುಪಿ ಧರ್ಮಪ್ರಾಂತದ ವಿಕಾರ್‌ ಜನರಲ್‌ ರೆ| ಡಾ| ಬ್ಯಾಪ್ಟಿಸ್ಟ್‌ ಮಿನೇಜಸ್‌, ಕುಲಪತಿಗಳಾದ ರೆ| ಫಾ| ವಲೇರಿಯನ್‌ ಮೆಂಡೊನ್ಸಾ, ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ಚರ್ಚ್‌ ಪಾಲನ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್‌ ಫೆರ್ನಾಂಡಿಸ್‌ ಮತ್ತು ಕಾರ್ಯದರ್ಶಿ ಲತಾ ಡಿಮೆಲ್ಲೊ ವೇದಿಕೆಯಲ್ಲಿದ್ದರು. ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್‌ ಡೇಸಾ, ರೆ| ಫಾ| ಫ್ರೆಡ್‌ ಮಸ್ಕರೇನಸ್‌, ರೆ| ಫಾ| ಎವುಜಿನ್‌ ಮಸ್ಕರೇನಸ್‌, ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು, ಜಿ.ಪಂ. ಸದಸ್ಯ ವಿಲ್ಸನ್‌ ರೊಡ್ರಿಗಸ್‌, ಮಾಜಿ ಜಿ.ಪಂ. ಸದಸ್ಯೆ ಐಡಾ ಗಿಬ್ಟಾ ಡಿ’ಸೋಜಾ, ಮಾಜಿ ತಾ.ಪಂ. ಅಧ್ಯಕ್ಷ ದೇವದಾಸ್‌ ಹೆಬ್ಟಾರ್‌, ತಾ.ಪಂ. ಸದಸ್ಯೆ ಸುಜಾತಾ ಸುವರ್ಣ, ಬೆಳ್ಳೆ ಗ್ರಾ.ಪಂ. ಸದಸ್ಯರು, ಚರ್ಚ್‌ ಪಾಲನ ಮಂಡಳಿಯ ಸದಸ್ಯರು, ಆರ್ಥಿಕ ಮಂಡಳಿಯ ಸದಸ್ಯರು, ಕಟ್ಟಡ ಸಮಿತಿಯ ಸದಸ್ಯರು, 23 ವಾರ್ಡ್‌ಗಳ ಗುರಿಕಾರರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಧಾನ ಧರ್ಮಗುರು ರೆ| ಫಾ| ಕ್ಲೆಮೆಂಟ್‌ ಮಸ್ಕರೇನಸ್‌ ಸ್ವಾಗತಿಸಿದರು. ಮರಿಯಾ ಬಬೋìಜಾ ಮತ್ತು ಆ್ಯನ್ಸಿಟಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಧರ್ಮಗುರು ರೆ|ಫಾ| ಲಾರೆನ್ಸ್‌ ಕುಟಿನ್ಹಾ ವಂದಿಸಿದರು.

ಮೂಡುಬೆಳ್ಳೆ ಮತ್ತು ಪಂಚ ಧರ್ಮಾದ್ಯಕ್ಷರು
ಸಂತ ಲಾರೆನ್ಸರ ಕಾರಣಿಕ ಕ್ಷೇತ್ರ ಮೂಡುಬೆಳ್ಳೆ ಧರ್ಮ ಕೇಂದ್ರಕ್ಕೆ ಸಂಬಂಧಿಸಿದ ಐವರು ಕ್ರೈಸ್ತ ಧರ್ಮಾಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಅವರಲ್ಲಿ ಕಟ್ಟಿಂಗೇರಿಯ ರೈ| ರೆ| ಡಾ| ಆಲ್ಬರ್ಟ್‌ ಡಿ’ಸೋಜಾ ಆಗ್ರಾದ ಆರ್ಚ್‌ ಬಿಷಪ್‌ ಆದರೆ ಅವರ ಸಹೋದರ ದಿ| ರೈ| ರೆ| ಡಾ| ಅಲ್ಫೋನ್ಸ್‌ ಡಿ’ಸೋಜಾ ರಾಯ್‌ಗಂಜ್‌ ಬಿಷಪ್‌ ಆಗಿದ್ದರು. ಬರಿಪುರ್‌ ಬಿಷಪ್‌ ರೈ| ರೆ| ಡಾ| ಸಾಲ್ವದೋರ್‌ ಲೋಬೊ ಮಟ್ಟಾರು ಸಮೀಪದವರು. ಕಲಬುರ್ಗಿಯ ಬಿಷಪ್‌ ರೈ| ರೆ| ಡಾ| ರಾಬರ್ಟ್‌ ಮಿರಾಂದಾ ಮತ್ತು ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಮೂಡುಬೆಳ್ಳೆ ಚರ್ಚ್‌ನಲ್ಲಿ ಪಾಲನ ಸೇವೆಗೈದವರಾಗಿದ್ದಾರೆ. ಒಂದೇ ಧರ್ಮ ಕೇಂದ್ರಕ್ಕೆ ಸಂಬಂಧಿಸಿದ ಐವರು ಧರ್ಮಾಧ್ಯಕ್ಷರಾಗಿರುವುದು ವಿಶೇಷ. ಜತೆಗೆ ಮೂಡುಬೆಳ್ಳೆ ಸಂಜಾತ ನೂರಾರು ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಪ್ರಪಂಚಾದ್ಯಂತ ಸೇವೆಗೈಯುತ್ತಿದ್ದಾರೆ.

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.