ಹಸಿರನ್ನೇ ಉಸಿರಾಗಿಸಿಕೊಂಡ ಶಾಲೆ 


Team Udayavani, Dec 10, 2018, 3:36 PM IST

10-december-15.gif

ಯಲಬುರ್ಗಾ: ಸುತ್ತಲೂ ಮರ-ಗಿಡಗಳಿಂದ ಕೂಡಿದ ವಾತಾವರಣ, ಹಲವು ಬಗೆಯ ಹೂವು, ಹಣ್ಣುಗಳ ಸಸ್ಯ ರಾಶಿ, ಇಲ್ಲಿ ಪ್ರವೇಶಿಸಿದರೆ ಮೈ ಮನಸ್ಸಿಗೆ ತಂಪಿನ ಅನುಭವ! ತಾಲೂಕಿನ ಹಗೇದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣವಿದು. ಈ ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಪರಿಸರ ಪ್ರೀತಿಗೆ ಸಾಕ್ಷಿಯಾಗಿ ಇಲ್ಲಿನ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಮಕ್ಕಳ ಕಲಿಕೆಗೆ ಹೇಳಿ ಮಾಡಿಸಿದ ತಾಣವಿದು. ಮಕ್ಕಳಲ್ಲಿ ವಿದ್ಯೆಯೊಂದಿಗೆ ಪರಿಸರ ಕಾಳಜಿ ಬೆಳಸುವುದು ಕಷ್ಟದ ಕೆಲಸವಲ್ಲ ಎಂಬುದಕ್ಕೆ ಈ ವಸತಿ ಶಾಲೆ ಸಾಕ್ಷಿಯಾಗಿದೆ.

ಉತ್ತಮ ಪರಿಸರ, ಹಸಿರು ಪರಿಸರ ಆರೋಗ್ಯದ ಮೂಲ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಈ ಶಾಲೆ ಹಸಿರುನಿಂದ ಕಂಗೊಳಿಸುತ್ತಿದ್ದು, ಒಳ ಪ್ರವೇಶಿಸಿದರೆ ಅಹ್ಲಾದಕರ ವಾತಾವರಣ ಸಿಗುತ್ತದೆ. ಆವರಣದೊಳಗಿನ ವಿಧ ವಿಧದ ಮರಗಳು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿವೆ. ಮರಗಳ ನೆರಳ ಕೆಳಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿಯುವ ಇಲ್ಲಿನ ವಿದ್ಯಾರ್ಥಿಗಳಲ್ಲಿ ಧನ್ಯತಾಭಾವ ಮೂಡಿದೆ.

ಶಾಲೆಯ ಒಳ ಆವರಣದಲ್ಲಿ ಗಿಡಗಳನ್ನು ಬೆಳೆಸಲಾಗಿದೆ. ಪೇರಲ, ಚಿಕ್ಕು, ಮಾವು, ತೆಂಗು, ಕರಿಬೇವು, ಲಿಂಬು, ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಬಗೆಯ ಅಲಂಕಾರಿಕ ಸಸ್ಯಗಳಿವೆ. ಶಾಲೆಯಲ್ಲಿ 173 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 8 ಜನ ಶಿಕ್ಷಕರಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಾಲಾ ಬಿಡುವಿನ ವೇಳೆ ಪರಿಸರ ರಕ್ಷಣೆ ಕುರಿತು ಪಾಠ ಮಾಡಲಾಗುತ್ತದೆ.

ಪಾಲಕರ ಸಹಕಾರ: ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆ ಎಂದರೆ ಪಾಲಕರು ತಮ್ಮ ಮಕ್ಕಳನ್ನು ವೈಯಕ್ತಿಕವಾಗಿ ಶಾಲೆ ಬಿಡಿಸುವುದು ಹೆಚ್ಚು. ಆದರೆ ಈ ಗ್ರಾಮದಲ್ಲಿ ಶಾಲೆಯ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ಒಬ್ಬ ವಿದ್ಯಾಥಿಯೂ ಗೈರು ಹಾಜರಿದ್ದ ಉದಾಹರಣೆಗಳು ಇಲ್ಲ. ಹಾಗೊಂದು ವೇಳೆ ವಿದ್ಯಾರ್ಥಿಗಳು ಶಾಲೆಗೆ ಬರದೇ ಹೋದರೆ ಸ್ವತಃ ಶಿಕ್ಷಕರೇ ಮನೆಗೆ ತೆರಳಿ ಕರೆತರುತ್ತಾರೆ. ಅದಕ್ಕೆ ಪಾಲಕರ ಸಹಕಾರವೂ ಇದೆ.

ಪಕ್ಷಿಗಳಿಗೆ ನೀರು: ಶಾಲೆಯ ಆವರಣದಲ್ಲಿರುವ ಗಿಡಗಳಿಗೆ ವೈಜ್ಞಾನಿಕ ಹೆಸರನ್ನು ಬರೆಯಿಸಲಾಗಿದೆ. ಶಾಲಾ ಆವರಣದೊಳಗೆ ಸುಂದರ ಪರಿಸರ ಹಿನ್ನೆಲೆಯಲ್ಲಿ ಅನೇಕ ತರಹದ ಪಕ್ಷಿಗಳು ಗಿಡಗಳಲ್ಲಿ ಗೂಡು ಕಟ್ಟಿ ವಾಸಿಸುತ್ತಿದ್ದು, ಇವುಗಳ ದಾಹ ತೀರಿಸಲು ಗಿಡಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಿರುವುದು ಇಲ್ಲಿಯ ಇನ್ನೊಂದು ವಿಶೇಷವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಗೃಹಗಳು ಇವೆ. ಗಿಡಮರಗಳಿಗೆ ನಿತ್ಯ ನೀರು ಹರಿಸುವುದು ಸೇರಿದಂತೆ ಇತರೆ ಕೆಲಸಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಮಾಡುತ್ತಾರೆ.

ಶಾಲೆಗೆ 2013-14ರಲ್ಲಿ ಕೊಪ್ಪಳ ಜಿಲ್ಲಾ ಹಸಿರು ಶಾಲಾ ಪ್ರಶಸ್ತಿ, 2017-18ನೇ ಸಾಲಿನ ಸ್ವಚ್ಚ ಭಾರತ ಮಿಷನ್‌ನ ಸ್ವತ್ಛ ಸರ್ವೇಕ್ಷಣ ಪ್ರಶಸ್ತಿಯೂ ಲಭಿಸಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಬಂಧ ಸೇರಿ ವಾರಕೊಮ್ಮೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಶಾಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಹಸಿರಿನಿಂದ ಕಂಗೊಳಿಸಲು ಶಾಲೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯಮನೂರಪ್ಪ ಪ್ರಭಣ್ಣನವರ, ವೀರಣ್ಣ ಬಂಡಿಹಾಳ ಶ್ರಮಿಸಿದ್ದಾರೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.

ಇಲ್ಲಿನ ಮಕ್ಕಳ ಇಂಗ್ಲಿಷ್‌‌ ಕಲಿಕೆಯನ್ನು ಗಮನಿಸಿದರೇ ಎಂತಹವರೂ ಬೆರಗಾಗುತ್ತಾರೆ. ಆಂಗ್ಲ ಭಾಷೆಯ ಪದ್ಯ, ಕತೆಗಳನ್ನು ಶಿಕ್ಷಕರು ಹೇಳಿಕೊಡುವತ್ತ ಹೆಚ್ಚಿನ ಕಾಳಜಿ ಹೊಂದಿದ್ದರಿಂದ ಈ ಶಾಲೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಬಲ್ಲದು ಎಂಬಷ್ಟರ,ಮಟ್ಟಿಗಿದೆ. ಶಾಲೆಯಲ್ಲಿ ಶಾಲಾ ಸಂಸತ್ತು ರಚನೆಯಾಗಿದೆ. ತೋಟಗಾರಿಕೆ ಮಂತ್ರಿಯಾಗಿರುವ ವಿದ್ಯಾರ್ಥಿ ಶಶಿಕುಮಾರ ಮಂಡಲಗೇರಿ, ಯಾರೇ ಶಾಲೆಗೆ ಬಂದರೂ ಅವರಿಗೆ ಆವರಣದಲ್ಲಿರುವ ಸಸಿಗಳನ್ನು ತೋರಿಸಿ ಅದರ ಬಗ್ಗೆ ವಿವರಿಸುವ ಮೂಲಕ ಉಪಯೋಗ ಕುರಿತು ತಿಳಿಸುತ್ತಾನೆ. ಆತನ ಪರಿಸರ ಕಾಳಜಿ ಎಲ್ಲರಿಗೂ ಮೆಚ್ಚುಗೆ ಗಳಿಸಿದೆ.

ಶಾಲೆಯ ಆವರಣದಲ್ಲಿ ಗಿಡಗಳನ್ನು ಪೋಷಿಸಲಾಗುತ್ತಿದೆ. ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರವೂ ಇದೆ. ಸ್ವಚ್ಚಂದ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಇದರಿಂದ ನೆಮ್ಮದಿಯ ವಾತಾವರಣ ಲಭಿಸುತ್ತದೆ.
 ಎಸ್‌.ಎ. ಕೋಡಿ, ಮುಖ್ಯಶಿಕ್ಷಕ

ಮಲ್ಲಪ್ಪ ಮಾಟರಂಗಿ

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.