ಧ್ರುವ ಸರ್ಜಾ ನಿಶ್ಚಿತಾರ್ಥ ಜೋರು
Team Udayavani, Dec 10, 2018, 5:09 PM IST
ನಟ ಧ್ರುವಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರ ಜೊತೆ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಬೆಂಗಳೂರಿನ ಬನಶಂಕರಿ ಧರ್ಮಗಿರಿ ದೇವಸ್ಥಾನದಲ್ಲಿ ಇಂದು ಇಬ್ಬರ ಕುಟುಂಬ ವರ್ಗ, ಗೆಳೆಯರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತು.
ವಿಶೇಷವೆಂದರೆ, ನಿಶ್ಚಿತಾರ್ಥ ನೆರವೇರಿಸಲು ತಿರುಪತಿಯ ಪುರೋಹಿತರ ತಂಡ ಆಗಮಿಸಿದ್ದು ವಿಶೇಷವಾಗಿತ್ತು. ಇದಷ್ಟೇ ಅಲ್ಲ, ಹುಳಿಮಾವು ಭಗವತಿ ದೇವಸ್ಥಾನದಿಂದ 21 ಜನ ಪುರೋಹಿತರು, ತಿರುಮಲ ದೇವಾಲಯದಿಂದ 15 ಜನ ಪುರೋಹಿತರು ಸೇರಿದಂತೆ ಅನೇಕರು ಪೂಜೆಯಲ್ಲಿ ಭಾಗವಹಿಸಿದ್ದರು.
ಗೋ ಪೂಜೆಯೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ನಿರ್ದೇಶಕರು, ನಿರ್ಮಾಪಕರು, ನಟ, ನಟಿಯರು, ಗೆಳೆಯರು ಭಾಗವಹಿಸಿದ್ದರು. ಇನ್ನು, ಅದ್ಧೂರಿಯಾಗಿ ನೆರವೇರಿದ ಈ ನಿಶ್ಚಿತಾರ್ಥ
ಕಾರ್ಯಕ್ರಮದಲ್ಲಿ ಆಕರ್ಷಣೆಯಾಗಿದ್ದು, ತೆಂಗಿನ ಗರಿ ಚಪ್ಪರ. ದೇಸಿ ಸೊಗಡಿನ ವಾತಾವರಣ ನಿರ್ಮಾಣ ಮಾಡಿ, ಅದ್ಧೂರಿಯಾಗಿಯೇ ನಿಶ್ಚಿತಾರ್ಥ ನೆರವೇರಿಸಲಾಗಿದೆ. ಇವರಿಬ್ಬರ ವಿವಾಹ ಏಪ್ರಿಲ್ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.