ಆಧಾರ್, ಪ್ಯಾನ್, ಪಾಸ್ ಪೋರ್ಟ್ ಪಡೆಯುತ್ರಿರುವ ರೊಹಿಂಗ್ಯಾಗಳು ?
Team Udayavani, Dec 12, 2018, 7:20 PM IST
ಹೊಸದಿಲ್ಲಿ : ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾ ಮುಸ್ಲಿಮರಲ್ಲಿ ಕೆಲವರು ವಂಚನೆ ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ರಾಜ್ಯಸಭೆಗೆ ಇಂದು ತಿಳಿಸಲಾಯಿತು.
ಅಕ್ರಮ ವಲಸಿಗರು ಯಾವುದೇ ಕಾನೂನು ಬದ್ಧ ಪ್ರಯಾಣ ದಾಖಲೆ ಪತ್ರಗಳಿಲ್ಲದೆ ಕದ್ದು ಮುಚ್ಚಿ ಭಾರತ ಪ್ರವೇಶಿಸುತ್ತಾರೆ. ಇವರ ನಿಖರ ಸಂಖ್ಯೆ, ಮಾಹಿತಿಗಳು ಇಲ್ಲ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಅವರಿಂದು ರಾಜ್ಯಸಭೆಯಲ್ಲಿ ಹೇಳಿದರು.
ಭಾರತದಲ್ಲಿ ಅಕ್ರಮವಾಗಿ ವಾಸಿಸಿಕೊಂಡಿದ್ದು ವಂಚನೆ ಮೂಲಕ ಆಧಾರ್, ಪ್ಯಾನ್, ಪಾಸ್ ಪೋರ್ಟ್ ಪಡೆದಿರುವ ರೊಹಿಂಗ್ಯಾ ಮುಸ್ಲಿಮರನ್ನು ಗುರುತಿಸಿ ಅವರ ಈ ಗುರುತು ಪತ್ರಗಳನ್ನು ರದ್ದು ಪಡಿಸಬೇಕು ಎಂದು ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ರಿಜಿಜು ಹೇಳಿದರು.
ಅಕ್ರಮ ವಲಸಿಗ ರೊಹಿಂಗ್ಯಾ ಮುಸ್ಲಿಮರು ಜಮ್ಮು ಕಾಶ್ಮೀರ, ತೆಲಂಗಾಣ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ದಿಲ್ಲಿ, ರಾಜಸ್ಥಾನ, ತಮಿಳು ನಾಡು, ಪಶ್ಚಿಮ ಬಂಗಾಲ, ಅಸ್ಸಾಂ, ಕರ್ನಾಟಕ ಮತ್ತು ಕೇರಳದಲ್ಲಿ ನೆಲೆಸಿದ್ದಾರೆ ಎಂದವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ