“ಚಂಬಲ್’ ಟೀಸರ್ಗೆ ಧನುಷ್ ಸಾಥ್: Watch
Team Udayavani, Dec 20, 2018, 6:10 PM IST
ಕಾಲಿವುಡ್ನ ಸ್ಟಾರ್ ನಟ ಧನುಷ್, ಕನ್ನಡದ “ಚಂಬಲ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ನೀನಾಸಂ ಸತೀಶ್ ಅವರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಯಕನಾಗಿ ನೀನಾಸಂ ಸತೀಶ್, ನಾಯಕಿಯಾಗಿ ಸೋನು ಗೌಡ ನಟಿಸುತ್ತಿದ್ದಾರೆ. ಬುಧವಾರ ಸಂಜೆ ಚೆನ್ನೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಧನುಷ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ಕಿಶೋರ್, ಪವನ್ ಕುಮಾರ್, ರೋಜರ್ ನಾರಾಯಣ ಅಭಿನಯಿಸಿದ್ದು, ಇದೊಂದು ವಿಶೇಷವಾದ ಕಥಾಹಂದರವನ್ನೊಳಗೊಂಡಿದೆ. ಅಲ್ಲದೇ ಈ ಚಿತ್ರದ ಮೂಲಕ ತಾನು ಬೇರೆ ಭಾಷೆಗಳ ಮಾರುಕಟ್ಟೆಗೂ ಹೋಗಲಿದ್ದೇನೆಂದು ನಟ ನೀನಾಸಂ ಸತೀಶ್ ಹೇಳಿಕೊಂಡಿದ್ದರು.
ಚಿತ್ರದ ಒನ್ಲೈನ್ ಸ್ಟೋರಿ ಹಾಗೂ ದೃಶ್ಯಗಳನ್ನು ನೋಡಿ ಧನುಷ್ ಟೀಸರ್ ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡು ಅವರೇ ಪುಟ್ಟ ಕಾರ್ಯಕ್ರಮ ಆಯೋಜಿಸಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ “ಇದೊಂದು ವಿಶೇಷವಾದ ಕತೆಯನ್ನು ಒಳಗೊಂಡಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆನನಗೆ ಖುಷಿ ಆಗುತ್ತಿದೆ’ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal ಪಣೋಲಿಬೈಲು: 23 ಸಾವಿರ ಕೋಲ ಸೇವೆಗಳ ಬುಕ್ಕಿಂಗ್
Rae Bareli ಯಲ್ಲಿ ಗೆಲ್ಲಲು ಯತ್ನಿಸಿ: ವಿವಾದ ತಂದ ರಷ್ಯಾದ ಕ್ಯಾಸ್ಪರೋವ್ ಸಲಹೆ
Missing ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ