ಭರ್ಜರಿ ಓಪನಿಂಗ್ ಪಡೆದ ಕೆಜಿಎಫ್
Team Udayavani, Dec 22, 2018, 11:25 AM IST
ನಟ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಫ್’ ಶುಕ್ರವಾರ (ಡಿ.21) ಅದ್ಧೂರಿಯಾಗಿ ತೆರೆಗೆ ಕಂಡಿದೆ. ಇನ್ನು “ಕೆಜಿಎಫ್’ ಬಿಡುಗಡೆಯಾಗಿರುವ ಕೆ.ಜಿ.ರೋಡ್ನಲ್ಲಿರುವ ಮುಖ್ಯ ಚಿತ್ರಮಂದಿರವಾದ ನರ್ತಕಿಯಲ್ಲಿ 72 ಅಡಿ ಎತ್ತರದ ಯಶ್ ಅವರ ಬೃಹತ್ ಕಟೌಟ್ ನಿಲ್ಲಿಸಲಾಗಿದ್ದು, ಚಿತ್ರದ ಮೊದಲ ಪ್ರದರ್ಶನಕ್ಕೂ ಮುನ್ನ ಹೆಲಿಕಾಪ್ಟರ್ ಮೂಲಕ ಈ ಕಟೌಟ್ಗೆ ಪುಷ್ಪವೃಷ್ಟಿ ಮಾಡಲಾಯಿತು.
ಬೆಳಗ್ಗೆ ಸುಮಾರು 9.30ರ ಸಮಯಕ್ಕೆ ನರ್ತಕಿ ಚಿತ್ರಮಂದಿರದ ಮೇಲ್ಭಾಗದಲ್ಲಿ ಹಾರಾಡಿದ ಹೆಲಿಕಾಪ್ಟರ್ ಮೂಲಕ ಥಿಯೇಟರ್ ಮುಂಭಾಗದಲ್ಲಿದ್ದ ಯಶ್ ಅವರ ಕಟೌಟ್ಗೆ ಪುಷ್ಪ ಸಿಂಚನ ಮಾಡಲಾಯಿತು. ಇನ್ನು ಥಿಯೇಟರ್ ಬಳಿ ಹೆಲಿಕಾಪ್ಟರ್ ಆಗಮಿಸುತ್ತಿದ್ದಂತೆಯೇ, ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಅಂದಹಾಗೆ, ಅಖೀಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಮತ್ತು ಅಖೀಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘದ ವತಿಯಿಂದ ಪುಷ್ಪವೃಷ್ಟಿ ನಡೆದಿದ್ದು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ನಾಯಕ ನಟನೊಬ್ಬನ ಕಟೌಟ್ಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದ್ದು, ಗಾಂಧಿನಗರದ ಮಂದಿ ಬೆರಗಾಗಿ ನೋಡುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…