ಅಗಸ್ಟಾ ಹೆಲಿಕಾಪ್ಟರ್ ಡೀಲ್: ED ಯಿಂದ ಕ್ರಿಶ್ಚಿಯನ್ ಮೈಕೆಲ್ ಬಂಧನ
Team Udayavani, Dec 22, 2018, 3:53 PM IST
ಹೊಸದಿಲ್ಲಿ : ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಡೀಲ್ನಲಿ ಮಧ್ಯವರ್ತಿಯಾಗಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಯುಎಇಯಿಂದ ಭಾರತಕ್ಕೆ ಗಡೀಪಾರುಗೊಂಡಿರುವ ಕ್ರಿಶ್ಚಿಯನ್ ಮೈಕೆಲ್ ನನ್ನು ಜಾರಿ ನಿರ್ದೇಶನಾಲಯ ಇಂದು ಶನಿವಾರ ಬಂಧಿಸಿದೆ. ಇದಕ್ಕೆ ಮೊದಲು ಮೈಕೆಲ್ ನನ್ನು ದಿಲ್ಲಿ ಕೋರ್ಟಿನಲ್ಲಿ ಹಾಜರುಪಡಿಸಲಾಗಿತ್ತು.
ಮೈಕೆಲ್ ನನ್ನು ಹಾಜರುಪಡಿಸಲಾಗಿದ್ದ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರಲ್ಲಿ ಜಾರಿ ನಿರ್ದೇಶನಾಲಯ ತನಗೆ ಮೈಕೆಲ್ ನನ್ನು ಪ್ರಶ್ನಿಸಲು ಆತನನ್ನು 15 ದಿನಗಳ ಅವಧಿಗೆ ಕಸ್ಟಡಿಗೆ ಕೊಡಬೇಕೆಂದು ಕೇಳಿಕೊಂಡಿತ್ತು. ಆ ಪ್ರಕಾರ ನ್ಯಾಯಾಧೀಶರು ED ಕೋರಿಕೆಯನ್ನು ಮನ್ನಿಸಿದರು.
ಮೈಕೆಲ್ ಅವರನ್ನು ಕಳೆದ ಡಿ.4ರಂದು ಯುಎಇ ಯಿಂದ ಭಾರತಕ್ಕೆ ಗಡೀಪಾರು ಮಾಡಿತ್ತು. ಮರುದಿನವೇ ಆತನನನ್ನು ಕೋರ್ಟಿಗೆ ಹಾಜರು ಪಡಿಸಲಾಗಿ ಸಿಬಿಐ ನಿಂದ ಪ್ರಶ್ನಿಸಲ್ಪಡುವುದಕ್ಕಾಗಿ ಐದು ದಿನಗಳ ಕಸ್ಟಡಿಗೆ ಒಪ್ಪಿಸಲಾಗಿತ್ತು. ಅದಾಗಿ ಮತ್ತೆ ಆತನ ಕಸ್ಟಡಿ ಮತ್ತೆ ಐದು ದಿನಗಳ ಅವಧಿಗೆ ವಿಸ್ತರಿಸಿತ್ತು.
ಮೈಕೆಲ್ನ ಜಾಮೀನು ಅರ್ಜಿಯ ಮೇಲಿನ ಆದೇಶವನ್ನು ಕೋರ್ಟ್ ಡಿ.19ಕ್ಕೆ ಕಾಯ್ದಿರಿಸಿ, ಡಿ.28ರ ತನಕದ ಅವಧಿಗೆ ಆತನನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ