‘ಕ್ರಿಸ್ಮಸ್‌ ಶಾಂತಿ, ಸಹಬಾಳ್ವೆಯ ಬದುಕಿಗೆ ಪ್ರಚೋದನೆಯಾಗಲಿ’


Team Udayavani, Dec 25, 2018, 1:30 AM IST

bethany-24-12.jpg

ಕೊಕ್ಕಡ: ಸುಮಾರು 2,000 ವರ್ಷಗಳ ಹಿಂದೆ ಸರಳ ಜೀವನಕ್ಕೆ ಬಹುದೊಡ್ಡ ಮಾದರಿಯಾಗಿ ಹಟ್ಟಿಯಲ್ಲಿ ಹುಟ್ಟಿ ಮನುಕುಲದ ಉದ್ಧಾರಕ್ಕೆ ಆಗಮಿಸಿದ ಪ್ರಭು ಯೇಸುಕ್ರಿಸ್ತರ ಜನನದ ಆಚರಣೆಯೇ ಕ್ರಿಸ್ಮಸ್‌. ಸಿಹಿ ಹಂಚುತ್ತಾ ಮನೆ ಮನೆಗೆ ತಿರುಗುವ ಸಾಂತಾಕ್ಲಾಸ್‌ ಪ್ರೀತಿಯ ಸಂಕೇತ. ಹಬ್ಬಗಳೆಂದರೆ ಬರೇ ಆಡಂಬರಗಳೇ ಆಗದೆ ಪ್ರೀತಿ ಸಂತೋಷಗಳನ್ನು ಹಂಚುವಂತಾಗಲಿ. ಕ್ರಿಸ್ಮಸ್‌ ಶಾಂತಿ ಸಹಬಾಳ್ವೆಯ – ಪ್ರೀತಿ, ಸಂತೋಷದ ಬದುಕಿಗೆ ಪ್ರಚೋದನೆಯಾಗಲಿ ಎಂದು ಮಲಂಕರ ಕ್ಯಾಥೋಲಿಕ್‌ ಪುತ್ತೂರು ಧರ್ಮ ಪ್ರಾಂತ್ಯದ ವಿಕಾರ್‌ ಜನರಲ್‌ ವಂ| ಡಾ| ಎಲ್ದೋ ಪುತ್ತನ್‌ಕಂಡತ್ತಿಲ್‌ ಹೇಳಿದರು. ಬೆಥನಿ ಸಮೂಹ ಸಂಸ್ಥೆಗಳಾದ ಜ್ಞಾನೋದಯ ಪದವಿಪೂರ್ವ ಕಾಲೇಜು, ಎಸ್‌.ಬಿ. ಕಾಲೇಜು ನೆಲ್ಯಾಡಿ, ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನೆಲ್ಯಾಡಿ ಬೆಥನಿಯ ಸಿಲ್ವರ್‌ ಜೂಬಿಲಿ ಆಡಿಟೋರಿಯಂನಲ್ಲಿ ನಡೆದ ಕಿಸ್ಮಸ್‌ ಆಚರಣೆ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಸಂಚಾಲಕ ವಂ| ಡಾ| ವರ್ಗೀಸ್‌ ಕೈಪನಡುಕ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮೇರಿಕನ್‌ ಲೀಡರ್‌ಶಿಪ್‌ ಬೋರ್ಡಿಂದ ಸಮ್ಮಾನಿಲ್ಪಟ್ಟ ಸಂಸ್ಥೆಯ ಸಂಚಾಲಕರಾದ ವಂ| ಡಾ| ವರ್ಗೀಸ್‌ ಕೈಪನಡುಕ್ಕ ಅವರನ್ನು ನೆಲ್ಯಾಡಿ ಗ್ರಾ.ಪಂ. ವತಿಯಿಂದ ಅಭಿನಂದಿಸಲಾಯಿತು. ಸಂಸ್ಥೆಯ ಬರ್ಸಾರ್‌ ವಂ| ಐಸಕ್‌ ಸ್ಯಾಮುವೇಲ್‌ ಒಐಸಿ, ನೆಲ್ಯಾಡಿ ಗ್ರಾ.ಪಂ. ಸದಸ್ಯ, ಕೆ.ಪಿ. ಆಬ್ರಹಾಂ, ಬೆಥನಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಸಜಿ ಕೆ. ತೋಮಸ್‌ ಕ್ರಿಸ್ಮಸ್‌, ಸಾಂತಾಕ್ಲಾಸ್‌ ವೇಷಧಾರಿ ವಿದ್ಯಾರ್ಥಿ ನಿಖಿಲ್‌ ಉಪಸ್ಥತ ರಿದ್ದು ಶುಭ ಹಾರೈಸಿದರು.

ಮಕ್ಕಳಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಐಟಿಐ ವಿದ್ಯಾರ್ಥಿ ಸುಕೃತ್‌ ಸ್ವಾಗತಿಸಿ, ದಿವ್ಯಾ ಎಂ.ವಿ. ವಂದಿಸಿ, ಕುಮಾರಿ ಆಪ್ತ ಶೆಟ್ಟಿ ಮತ್ತು ತಂಡದವರು ಪೂಜಾನೃತ್ಯಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಒಂದಾಗಿ ಬಾಳೋಣ
ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಭಗವಾನ್‌ ಶ್ರೀಕೃಷ್ಣ ಹಾಗೂ ಪ್ರಭು ಯೇಸು ಕ್ರಿಸ್ತರ ಜನನ ಪೂರ್ವನಿರ್ಧಾರದಂತೆ ಆಗಿದೆ. ಧರ್ಮ ಸಂಸ್ಥಾಪನೆಯೇ ಇವರಿಬ್ಬರ ಜನನದ ಉದ್ದೇಶ. ಇಂತಹ ಆಚರಣೆಗಳಿಂದ ಯಾವುದೇ ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಪ್ರೀತಿ ಶಾಂತಿ ನೆಮ್ಮದಿಯಿಂದ ಬಾಳೋಣ ಎಂದರು.

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.