ದುನಿಯಾ ವಿಜಯ್‌ ಈಗ ಸಲಗ


Team Udayavani, Dec 26, 2018, 11:20 AM IST

viji.jpg

ದುನಿಯಾ ವಿಜಯ್‌ ಅವರ ನಟನೆ ಮತ್ತು ನಿರ್ಮಾಣದಲ್ಲಿ “ಕುಸ್ತಿ’ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ಜೋರಾಗಿಯೇ ಇತ್ತು. ಅದಕ್ಕೆ ಅವರ ಮತ್ತು ಅವರ ಪುತ್ರನ ತಯಾರಿಯೂ ಜೋರಾಗಿತ್ತು. ಆದರೆ, ಅದೇಕೋ ದುನಿಯಾ ವಿಜಯ್‌ ಮಾತ್ರ ಅಖಾಡಕ್ಕೆ ಇಳಿಯುವ ಮುನ್ಸೂಚನೆಯೇ ಬರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ದುನಿಯಾ ವಿಜಯ್‌ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಆ ಚಿತ್ರಕ್ಕೆ “ಸಲಗ’ ಎಂದು ನಾಮಕರಣ ಮಾಡಿದ್ದಾರೆ.

ಇನ್ನು, “ಕುಸ್ತಿ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದ ರಾಘು ಶಿವಮೊಗ್ಗ, “ಸಲಗ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಹಾಗಾದರೆ, “ಕುಸ್ತಿ’ ಪ್ರದರ್ಶನವಿಲ್ಲವೇ? ಈ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತೆ. ಆದರೆ, “ಕುಸ್ತಿ’ ನಿಂತಿಲ್ಲ. ನಿಲ್ಲಲ್ಲ. ಮುಂದಕ್ಕೆ ಹೋಗಿದೆ ಎಂಬುದು ನಿರ್ದೇಶಕ ರಾಘು ಶಿವಮೊಗ್ಗ ಅವರ ಮಾತು. “ಸಲಗ’ ಮಾರ್ಚ್‌ನಲ್ಲಿ ಶುರುವಾಗಲಿದೆ. ಈ ಚಿತ್ರದ ಕಥೆ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ರಾಘು ಶಿವಮೊಗ್ಗ, “ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಸಾಗುವ ಚಿತ್ರ.

ದುನಿಯಾ ವಿಜಯ್‌ ಅವರಿಗೆ ಇಲ್ಲಿ ಮೂರು ವಿಶೇಷ ಗೆಟಪ್‌ಗ್ಳಿವೆ. ಈವರೆಗೆ ನೋಡದಂತಹ ಎರಡು ಗೆಟಪ್‌ನಲ್ಲಿ ದುನಿಯಾ ವಿಜಯ್‌ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಬೇರೆಯದ್ದೇ ರೀತಿಯ ಕಥೆ ಎನ್ನುವ ನಿರ್ದೇಶಕರು, ಇದು ಸಂಪೂರ್ಣ ಮಾಸ್‌ ಚಿತ್ರ. ವಿಜಯ್‌ ಅಭಿಮಾನಿಗಳಿಗಷ್ಟೇ ಅಲ್ಲ, ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಅಂಶಗಳಿರುವ ಚಿತ್ರವಿದು. ಭರ್ಜರಿ ಆ್ಯಕ್ಷನ್‌ ಪ್ಯಾಕೇಜ್‌ ಇಲ್ಲಿದೆ.

ಸಮಾಜದ ಪರ ಮತ್ತು ಭ್ರಷ್ಟರ ವಿರುದ್ಧ ಹೋರಾಡುವ ನಾಯಕನೊಬ್ಬನ ಕಥೆ. “ಸಲಗ’ ಅಂದರೆ, ಇಲ್ಲಿ ವಿಜಯ್‌ ಅವರು ಒನ್‌ ಮ್ಯಾನ್‌ ಆರ್ಮಿಯಂತೆ ಒಬ್ಬರೇ ಹೋರಾಡುತ್ತಾರೆ. ಎಲ್ಲರಿಗೂ “ಸಲಗ’ ಅಂದರೆ, ಕಾಡಲ್ಲಿ ನಡೆಯೋ ಕಥೆ ಇರಬಹುದಾ ಎಂಬ ಪ್ರಶ್ನೆ ಮೂಡುತ್ತೆ. ಆದರೆ, ಇದು ಸಂಪೂರ್ಣ ಸಿಟಿಯಲ್ಲಿ ನಡೆಯುವ ಕಥೆ. ಜೊತೆಗೆ ಒಂದು ಹಳ್ಳಿಯಲ್ಲೂ ಕಥೆ ಸಾಗಲಿದೆ.

ಕಥೆ, ಚಿತ್ರಕಥೆ ಸಂಭಾಷಣೆ ಜೊತೆಗೆ ನಿರ್ದೇಶನ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ವಿವರ ಕೊಡುವ ರಾಘು ಶಿವಮೊಗ್ಗ, ದುನಿಯಾ ಟಾಕೀಸ್‌ ಬ್ಯಾನರ್‌ನಲ್ಲಿ ಚಿತ್ರ ತಯಾರಾಗುತ್ತಿದೆ ಎನ್ನುತ್ತಾರೆ. ಸದ್ಯಕ್ಕೆ ದುನಿಯಾ ವಿಜಯ್‌ ಇಲ್ಲಿ ಹೀರೋ. ಉಳಿದಂತೆ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ನವೀನ್‌ ಸಜ್ಜು ಸಂಗೀತವಿದೆ. ಶಾಂತಿ ಸಾಗರ್‌ ಛಾಯಾಗ್ರಹಣವಿದೆ. ಪ್ರಕಾಶ್‌ ಅವರು ಸಂಕಲನ ಮಾಡಲಿದ್ದಾರೆ.

ಟಾಪ್ ನ್ಯೂಸ್

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.