ರಿಕಿ ಪಾಂಟಿಂಗ್ಗೆ ಹಾಲ್ಆಫ್ ಫೇಮ್ ಗೌರವ
Team Udayavani, Dec 27, 2018, 6:40 AM IST
ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್ ದಂತಕಥೆ, ಮಾಜಿ ನಾಯಕ ರಿಕಿ ಪಾಂಟಿಂಗ್ಗೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ) ವತಿಯಿಂದ ಬುಧವಾರ ಹಾಲ್ಆಫ್ ಫೇಮ್ ಗೌರವ ನೀಡಲಾಯಿತು.
ಭಾರತ -ಆಸ್ಟ್ರೇಲಿಯ ನಡುವಿನ 3ನೇ ಟೆಸ್ಟ್ ಪಂದ್ಯದ ಮೊದಲ ದಿನದ ಆಟದ ವೇಳೆ ಪಾಂಟಿಂಗ್ಗೆ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ತಮ್ಮ ಕುಟುಂಬ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಗೌರವ ಸ್ವೀಕರಿಸಿದರು. ಒಟ್ಟಾರೆ 168 ಟೆಸ್ಟ್ ಪಂದ್ಯ ಆಡಿದ್ದ ಪಾಂಟಿಂಗ್ 41 ಶತಕ, 62 ಅರ್ಧಶತಕ ಸೇರಿದಂತೆ ಒಟ್ಟು 13,378 ರನ್ ಬಾರಿಸಿದ್ದಾರೆ. 257 ರನ್ ವೈಯಕ್ತಿಕ ಶ್ರೇಷ್ಠ ಬ್ಯಾಟಿಂಗ್.