ಹೊಸ ವರ್ಷದ ಮೊದಲ ಟೆಸ್ಟ್ ನಿಂದ ರೋಹಿತ್ ಔಟ್..!
Team Udayavani, Dec 31, 2018, 10:03 AM IST
ಮುಂಬೈ: ಮೆಲ್ಬೋರ್ನ್ ಪಂದ್ಯ ಗೆದ್ದ ಖುಷಿಯಲ್ಲಿರುವ ರೋಹಿತ್ ಶರ್ಮಾಗೆ ಮತ್ತೊಂದು ಸಿಹಿ ಸುದ್ದಿ. ರೋಹಿತ್- ರಿತಿಕಾ ಜೋಡಿಗೆ ಮುದ್ದಾದ ಹೆಣ್ಣು ಮಗುವಾಗಿದ್ದು, ಈ ಸಂತೋಷದ ಕ್ಷಣಕ್ಕೆ ಪಾಲ್ಗೊಳ್ಳಲು ರೋಹಿತ್ ಮುಂಬೈ ಗೆ ವಾಪಸ್ಸಾಗಿದ್ದು, ಇದರಿಂದ ಬಾರ್ಡರ್- ಗಾವಸ್ಕರ್ ಸರಣಿಯ ಕೊನೆಯ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಬಿಸಿಸಿಐ ರೋಹಿತ್ ದಂಪತಿಗೆ ಶುಭಾಶಯ ಕೋರುತ್ತಾ, ಶರ್ಮ ಜನವರಿ 8ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಪ್ರಕಟಿಸಿದೆ.
ಕೊನೆಯ ಪಂದ್ಯಕ್ಕೆ ರೋಹಿತ್ ಸ್ಥಾನಕ್ಕೆ ಯಾವುದೇ ಬದಲಿ ಆಟಗಾರರನ್ನು ಆಯ್ಕೆ ಮಾಡಿಲ್ಲ. ಹಾರ್ದಿಕ್ ಪಾಂಡ್ಯ ಅಂತಿಮ ಪಂದ್ಯ ಸಾಧ್ಯತೆ ಇದೆ.