ಎನ್ನಾರೈ ಪೊಲೀಸ್ ಅಧಿಕಾರಿ ಹೀರೋ
Team Udayavani, Jan 10, 2019, 10:29 AM IST
ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ ಕೆಲ ದಿನಗಳ ಹಿಂದೆ ಹತ್ಯೆಗೀಡಾದ ಭಾರತೀಯ ಮೂಲದ ಪೊಲೀಸ್ ಅಧಿಕಾರಿ ರೊನಿಲ್ ರಾನ್ ಸಿಂಗ್ (33)ಅಮೆರಿಕದ ಹೀರೋ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಡಿ.26ರಂದು ಅಕ್ರಮ ವಲಸೆಗಾರರು ಸಿಂಗ್ ರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಸಿಂಗ್ ಕುಟುಂಬ ಸದಸ್ಯರ ಜತೆಗೆ ಭೇಟಿಯಾದಾಗ ಅವರು ಈ ಮಾತು ಹೇಳಿದ್ದಾರೆ. ಅಮೆರಿಕದ ಹೀರೋ ರೊನಿಲ್ರ ಜೀವ ತೆಗೆದವರಿಗೆ ದೇಶದಲ್ಲಿರುವ ಹಕ್ಕಿಲ್ಲ ಎಂದು ಗುಡುಗಿದ್ದಾರೆ.
ಕ್ರಿಸ್ಮಸ್ ವೇಳೆ ಇಂಥ ಘೋರ ದುರಂತ ನಡೆದದ್ದು ಖಂಡನೀಯ ಎಂದಿದ್ದಾರೆ. ಇದೇ ವೇಳೆ ಅಕ್ರಮ ವಲಸಿಗರನ್ನು ತಡೆಯಲು ಮೆಕ್ಸಿಕೋ ಗಡಿಯಲ್ಲಿ ತಡೆಗೋಡೆ ನಿರ್ಮಿಸಲು 4.17 ಲಕ್ಷ ಕೋಟಿ ರೂ. (5.7 ಬಿಲಿಯನ್ ಡಾಲರ್) ಬಿಡುಗಡೆ ಮಾಡುವಂತೆ ಡೆಮಾಕ್ರಾಟ್ ಸಂಸದರಿಗೆ ಅವರು ಮನವಿ ಮಾಡಿದ್ದಾರೆ.
ಮಾನವೀಯತೆ ಮತ್ತು ಭದ್ರತಾ ಸವಾಲು ನಿಯಂತ್ರಿಸಲು ಅದು ನೆರವಾಗಲಿದೆ ಎಂದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿ ಸಿದಂತೆ ಆರ್ಥಿಕ ಬಿಕ್ಕಟ್ಟು ಎದುರಾಗಿರುವಾಗಲೇ ಟ್ರಂಪ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್ ಇದ್ದಂತೆ…
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ