ಮಂಗನ ಕಾಯಿಲೆ: ಮಹಿಳೆ ಸಾವು
Team Udayavani, Jan 19, 2019, 12:45 AM IST
ಸಾಗರ: ಮಂಗನ ಕಾಯಿಲೆಗೆ ತುತ್ತಾಗಿದ್ದ ತಾಲೂಕಿನ ಅರಳಗೋಡು ಗ್ರಾ.ಪಂ. ವ್ಯಾಪ್ತಿಯ ದೊಂಬೆಕೈ ಲಕ್ಷ್ಮೀದೇವಿ (78) ಶುಕ್ರವಾರ ಮೃತಪಟ್ಟಿದ್ದಾರೆ. ಇದರಿಂದ ಕಾಯಿಲೆಗೆ ಸಾಗರ ತಾಲೂಕಿನಲ್ಲಿ ಒಟ್ಟು 8 ಮಂದಿ ಮೃತಪಟ್ಟಂತಾಗಿದೆ.
ಶಂಕಿತ ಮಂಗನ ಕಾಯಿಲೆ ಬಾಧಿತ ರಾಗಿದ್ದ ಲಕ್ಷ್ಮೀದೇವಿ ಜ. 14ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳಿಂದ ಅವರ ಸ್ಥಿತಿ ಗಂಭೀರ ವಾಗಿತ್ತು. ಶುಕ್ರವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಇವರಿಗೆ ಕೆಎಫ್ಡಿ ವೈರಸ್ ತಗಲಿರುವು ದನ್ನು ಆಸ್ಪತ್ರೆಯ ವರದಿ ದೃಢ ಪಡಿಸಿದ್ದರೂ ಕೆಎಫ್ಡಿ ನಿಯಂ ತ್ರಣ ವಿಭಾಗ ನಡೆಸಿದ ರಕ್ತ ಪರೀಕ್ಷೆಯ ವರದಿ ಈವರೆಗೆ ಲಭ್ಯ ವಾಗಿಲ್ಲ ಎನ್ನ ಲಾಗಿದೆ.