ಸಿದ್ಧಗಂಗಾ ಶ್ರೀ ಚೇತರಿಕೆಗೆ ವಿಶೇಷ ಪ್ರಾರ್ಥನೆ


Team Udayavani, Jan 19, 2019, 7:28 AM IST

bell-1.jpg

ಹೊಸಪೇಟೆ: ತುಮಕೂರು ಸಿದ್ಧಗಂಗಾ ಮಠದ ಸಿದ್ಧಗಂಗಾ ಮಹಾಸ್ವಾಮೀಜಿಯವರಿಗೆ ಈಗಾಗಲೇ ಭಾರತ ರತ್ನ ಗೌರವ ಸಲ್ಲಬೇಕಿತ್ತು. ಆದರೆ, ಕೇಂದ್ರ ಸರ್ಕಾರ ವಿಳಂಬ ಮಾಡಿದೆ. ಇನ್ನಾದರೂ ಶ್ರೀಗಳಿಗೆ ಭಾರತ ರತ್ನ ನೀಡಬಹುದು ಎಂಬ ಭರವಸೆ ನನಗಿದೆ ಎಂದು ಹೊಸಪೇಟೆ ಶ್ರೀಕೊಟ್ಟೂರುಸ್ವಾಮಿ ಮಠದ ಜಗದ್ಗುರು ಡಾ| ಸಂಗನ ಬಸವ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಸಮಾಜಕ್ಕೆ ರತ್ನಪ್ರಾಯರು, ಕಳಸಪ್ರಿಯರು, ಮಹಾತಪಸ್ವಿ ಸಿದ್ಧಗಂಗಾ ಶ್ರೀಗಳ ವೈರಾಗ್ಯ ತ್ಯಾಗ, ಸಮಾಜ ಪ್ರೇಮವನ್ನ ಎಲ್ಲಾ ಸ್ವಾಮೀಜಿಗಳು ಅನುಸರಿಸಬೇಕಿದೆ. ಶ್ರೀಗಳಿಂದ ಎಲ್ಲಾ ಮಠ ಮಾನ್ಯಗಳಿಗೆ ಶಕ್ತಿ ಬಂದಿದೆ. ಶ್ರೀಗಳು ಇಚ್ಛಾಮರಣಿಗಳು. ಅವರಿಗೆ ಯಾವಾಗ ಇಷ್ಟವಾಗುತ್ತೆ ಅಂದು ಅವರು ಲಿಂಗೈಕ್ಯರಾಗ್ತಾರೆ. ನೂರು ವರ್ಷದ ನಂತರ ಯಾರಿಗೂ ಶಸ್ತ್ರ ಚಿಕಿತ್ಸೆ ಮಾಡಲು ಬರುವುದಿಲ್ಲ. ಶ್ರೀಗಳ ಆರೋಗ್ಯ ವಿಜ್ಞಾನಕ್ಕೆ ಒಂದು ಸವಾಲಾಗಿದೆ. ಚಿಕಿತ್ಸೆ ನೀಡುವ ವೈದ್ಯರಿಗೆ ಒಂದು ಆಶ್ಚರ್ಯವಾಗಿದೆ. ಮಹಾಸ್ವಾಮಿಗಳ ಆರೋಗ್ಯ ಸುಧಾರಣೆಯಾಗಬೇಕೆಂದು ನಾಡಿನ ಕೋಟ್ಯಂತರ ಭಕ್ತರು ಬೇಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಶ್ರೀಗಳಿಗೆ ಎಷ್ಟು ನಮನ ಸಲ್ಲಿಸಿದರು ಸಾಲದು. 1930ರಿಂದ ಪ್ರಾರಂಭವಾದ ದಾಸೋಹದಲ್ಲಿ ಇಂದಿಗೂ ಪ್ರತಿದಿನ 8 ರಿಂದ 10 ಸಾವಿರ ಭಕ್ತರು ಪ್ರಸಾದ ತೆಗೆದುಕೊಳ್ಳುತ್ತಿದ್ದಾರೆ. ಅಂದಿನಿಂದ ಇಂದಿನವರೆಗೆ ಕೋಟ್ಯಂತರ ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ ದಾರಿ ತೋರಿಸಿದ್ದಾರೆ. ಸಿದ್ಧಗಂಗಾ ಶ್ರೀಗಳಿಗೂ, ಕೊಟ್ಟೂರುಸ್ವಾಮಿ, ಹಾಲಕೇರಿ ಮಠಕ್ಕೂ ಒಂದು ಆಧ್ಯಾತ್ಮ ಸಂಬಂಧವಿತ್ತು. ನಮ್ಮ ಮಠಗಳಿಗೆ ಶ್ರೀಗಳು ಆಗಮಿಸಿ ಆಶೀರ್ವಾದ ಮಾಡಿದ್ದರು.ಅವರ ಅಂತಃಕರಣ ನಮ್ಮ ಮೇಲೆ ದೊಡ್ಡದಾಗಿತ್ತು ಎಂದು ಸ್ಮರಿಸಿದರು.

• ಶ್ರೀಗಳ ಆರೋಗ್ಯ ವೃದ್ಧಿಗೆ ಸಿರುಗುಪ್ಪ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ

• ಹಡಗಲಿ ಭಕ್ತರಿಂದ ಗೋಣಿ ಬಸವೇಶ್ವರನಿಗೆ ವಿಶೇಷ ಪೂಜೆ

• ಭಾರತ ರತ್ನ ನೀಡಲು ಜನಾಗ್ರಹ

ಡಾ| ಶಿವಕುಮಾರ ಶ್ರೀಗಳಿಗೆ ಭಾರತರತ್ನ ಕೊಡಿ
ಹಗರಿಬೊಮ್ಮನಹಳ್ಳಿ :
ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಂಘಟನೆಯ ಅಧ್ಯಕ್ಷ ಟಿ.ಮಹೇಂದ್ರ ಮಾತನಾಡಿ, ನಡೆದಾಡುವ ದೇವರು ಶತಾಯುಷಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರ ತ್ಯಾಗ, ಸೇವಾ ಮನೋಭಾವ ಪರಿಗಣಿಸಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಶೈಕ್ಷಣಿಕ, ಧಾರ್ಮಿಕ ವಲಯದಲ್ಲಿ ಉನ್ನತ ಸಾಧನೆಗೈದು ಸಮಾಜಮುಖೀಯಾದ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನಿಯವರು ಕೂಡಲೇ ಘೋಷಿಸಬೇಕು. ಪ್ರಧಾನಿಯವರು ಸ್ವಾಮೀಜಿಗೆ ಭಾರತ ರತ್ನ ನೀಡಿ ಕನ್ನಡಿಗರ ಮನ ಗೆಲ್ಲಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ದೇವರಮನಿ ನೀಲಪ್ಪ, ವರಲಹಳ್ಳಿ ಶಿವಕುಮಾರ, ಕೆ.ಮಹೇಶ್‌, ಆನಂದೇವನಹಳ್ಳಿ ಪ್ರಭು ಇತರರಿದ್ದರು.

ಗೋಣಿಬಸವೇಶ್ವರಗೆ ವಿಶೇಷ ಪೂಜೆ
ಹೂವಿನಹಡಗಲಿ:
ನಡೆದಾಡುವ ದೇವರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ವೃದ್ಧಿಗಾಗಿ ಪಟ್ಟಣದ ಗೋಣಿಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸ್ವಾಮೀಜಿಗಳ ಆಯುಷ್ಯ ವೃದ್ಧಿ ಹಾಗೂ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಲೆಂದು ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಶತನಾಮಾವಳಿ, ಮಹಾಮಂಗಳಾರತಿ ನಡೆಸಲಾಯಿತು. ದೇವಸ್ಥಾನ ಸಮಿತಿಯವರು, ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು, ದೈವಸ್ಥರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.