ವ್ಯಾಸ ವಾಲ್ಮೀಕಿಯಷ್ಟೇ ಭೈರಪ್ಪ ಜನಪ್ರಿಯ 

Team Udayavani, Jan 20, 2019, 1:30 AM IST

190119kpn54.jpg

ಮೈಸೂರು: ಬ್ರಿಟಿಷರ ಇಂಗ್ಲಿಷ್‌ ಶಿಕ್ಷಣ ಒಪ್ಪಿಕೊಂಡು ಪಶ್ಚಿಮಕ್ಕೆ ಮರುಳಾದ ಭಾರತೀಯ ಬರಹಗಾರರ ಅಸ್ಮಿತೆ ಮರೆಯಾಗಿ ಕೀಳರಿಮೆ ಕಾಡುತ್ತಿತ್ತು. ಆದರೆ, ಕುವೆಂಪು ಮತ್ತು ಭೈರಪ್ಪ ತಮ್ಮ ಕಾದಂಬರಿಗಳ ಮೂಲಕವೇ ಬದಲಾವಣೆ ತಂದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ನಗರದ ಕಲಾಮಂದಿರದಲ್ಲಿ ಡಾ.ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಖ್ಯಾತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಸಾಹಿತ್ಯೋತ್ಸವ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರ ರಾಮಾಯಣ ದರ್ಶನಂ, ಭೈರಪ್ಪನವರ ವಂಶವೃಕ್ಷ ಮತ್ತಿತರ ಕೃತಿಗಳು ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದವು. ಭಾರತೀಯರ ಮುಖ್ಯ ಪ್ರಕಾರ ಕಥನ ಶೈಲಿಯಾಗಿದ್ದು, ಭೈರಪ್ಪನವರ ಒಂದೊಂದೂ ಕಾದಂಬರಿಯೂ ಒಂದೊಂದು ಕಥನವಾಗಿದೆ. ಭೈರಪ್ಪನವರು ಇವೇ ಮೊದಲಾದ ಕಾರಣಗಳಿಂದ ದೇಶ ಅಲ್ಲದೆ ವಿದೇಶದಲ್ಲೂ ಓದುಗ ಅಭಿಮಾನಿಗಳನ್ನು ಹೊಂದಿದ್ದಾರೆ. ವ್ಯಾಸ, ವಾಲ್ಮೀಕಿಯಷ್ಟೇ ಜನಪ್ರಿಯತೆ, ಸಮಾನ ಖ್ಯಾತಿ ಹೊಂದಿದ್ದಾರೆಂದು ಅಭಿಪ್ರಾಯಪಟ್ಟರು.

ಭೈರಪ್ಪನವರಲ್ಲಿ ನಾಟಕೀಯತೆ ಇಲ್ಲ. ಭಾಷೆ ಬಗ್ಗೆ ಅವರು ಎಷ್ಟು ತೀವ್ರವಾದ ಕಳಕಳಿ ಉಳ್ಳವರಾಗಿದ್ದಾರೆಂದರೆ, ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಜಾರಿಗೆ ತರಬೇಕೆಂದು ಹೊರಟಾಗ ಮೊಟ್ಟ ಮೊದಲುಪ್ರತಿಕ್ರಿಯೆ ವ್ಯಕ್ತಪಡಿಸಿದವರು ಅವರೇ ಎಂದರು. ನವ್ಯ ಕಾಲದಲ್ಲಿ ನವ್ಯರನ್ನು ಎದುರಿಸುವುದು ಸಾಮಾನ್ಯದ ಮಾತಾಗಿರಲಿಲ್ಲ. ಭೈರಪ್ಪನವರು ಅಂಥ ಕಾಲದಲ್ಲೂ ನವ್ಯರನ್ನು ಸಮರ್ಥವಾಗಿ ಎದುರಿಸಿದರು.

ಭೈರಪ್ಪ ಅವರು ಈಗ ಅಷ್ಟೊಂದು ಜನಪ್ರಿಯತೆ ಹೊಂದಿದ್ದಾರೆ. ನಾನು ಕೇಂದ್ರಸಾಹಿತ್ಯ ಅಕಾಡೆಮಿ ಅಧ್ಯಕ್ಷನಾದ ಮೇಲೆ ಹೋದೆಡೆಯಲ್ಲೆಲ್ಲ ಭೈರಪ್ಪನವರ ಬಗ್ಗೆ ಕೇಳುತ್ತಾರೆ. ಅವರು ನಿಮ್ಮ ರಾಜ್ಯದವರಂತೆ, ಮೈಸೂರಿನವರಂತೆ ಅನ್ನುತ್ತಾರೆ. ದೇಶದ ಅನೇಕ ಭಾಷೆಗಳಲ್ಲೂ ಭೈರಪ್ಪ ಜನಪ್ರಿಯತೆ ಹೊಂದಲು ಕಾದಂಬರಿಗಳೇ ಕಾರಣ ಎಂದರು. ಅವರ ಬಗ್ಗ ನನಗೆ ಅಪಾರ ಗೌರವವಿದೆ. ಅವರಷ್ಟು ನಿಖರವಾಗಿ, ಖಚಿತವಾಗಿ ವಿಷಯ ಮಂಡನೆ ಮಾಡಲು ನನಗೆ ಸಾಧ್ಯವಿಲ್ಲ ಎಂದು ಕಂಬಾರರು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಭೈರಪ್ಪನವರ ಕೃತಿಗಳಲ್ಲಿ ನನ್ನನ್ನು ಅತಿಯಾಗಿ ಕಾಡಿದ್ದು ಪರ್ವ. ಪಂಪ ಭಾರತದಲ್ಲಿ ಅರ್ಜುನನ ಬಗ್ಗೆ, ಕುಮಾರವ್ಯಾಸ ಭಾರತದಲ್ಲಿ ಕೃಷ್ಣನ ಬಗ್ಗೆ ಹೇಳಿದರು. ಪರ್ವದಲ್ಲಿ ಭೈರಪ್ಪನವರು ಭಾರತವನ್ನು ವಿಶಿಷ್ಟವಾಗಿನೋಡಿದ್ದಾರೆ ಎಂ ದರು.

ತಾವು ಹಂಪಿ ವಿವಿ ಕುಲಪತಿಯಾಗಿದ್ದಾಗ ಪ್ರವಾಹ ಬಂದು ಗ್ರಂಥಾಲಯದ ಪುಸ್ತಕಗಳೆಲ್ಲ ಕೊಚ್ಚಿ ಹೋದಾಗ, ನೀರಿನಿಂದ ತೊಯ್ದಾಗ ಬಟ್ಟೆ ಒಣಗಿ ಹಾಕುವಂತೆ ಅವನ್ನೆಲ್ಲ ಬಿಸಿಲಿನಲ್ಲಿ ಹಾಕಿದ್ದೆ. ಅಲ್ಲಿಗೆ ಧಾವಿಸಿದ ಭೈರಪ್ಪ ಆ ವೇಳೆ ಎಂಟು ದಿನ ಅಲ್ಲಿಯೇ ಇದ್ದು ಎಲ್ಲವನ್ನೂ ನೋಡಿಕೊಂಡರೆಂದು ಕಂಬಾರರು ಸ್ಮರಿಸಿದರು. ಭೈರಪ್ಪನವರ ಮುಂದೆ ನಾನು ಮಾತನಾಡೋದು ಸ್ವಲ್ಪ ಕಷ್ಟ. ನಾನು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಏನು ಮಾತನಾಡಬೇಕೆಂದು ಅಂದುಕೊಂಡಿದ್ದೆನೋ ಆ ರೀತಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕಂಬಾರರು ಮಧ್ಯೆ ನಕ್ಕು ನುಡಿದರು. ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ, ಭಾಷಾ ಶಾಸOಉಜ್ಞ ಡಾ. ಪ್ರಧಾನ ಗುರುದತ್ತ, ಶತಾವಧಾನಿ ಗಣೇಶ್‌ ಇತರರಿದ್ದರು.

ಭೈರಪ್ಪ ಬರಹದಲ್ಲಿದೆ ಅಧ್ಯಯನ
ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರ ಬರಹದಲ್ಲಿ ವ್ಯಾಪಕ ಅಧ್ಯಯನ, ಆಳವಾದ ಸಂಶೋಧನೆ,
ಗಹನವಾದ ಚಿಂತನೆ, ಪೂರ್ವಗ್ರಹರಹಿತ ಗ್ರಹಿಕೆ, ಐತಿಹಾಸಿಕ ಪರಿಪೇಕ್ಷ ಎಂಬ ಐದು ಅಂಶಗಳು
ಪ್ರಧಾನವಾಗಿವೆ ಎಂದು ಲೇಖಕ, ಭಾಷಾ ಶಾಸOಉಜ್ಞ ಡಾ. ಪ್ರಧಾನ ಗುರುದತ್ತ ವಿಶ್ಲೇಷಿಸಿದರು.
ಎಸ್‌.ಎಲ್‌. ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನವನ್ನು
ಬಿಡುಗಡೆ ಮಾಡಿ ಮಾತನಾಡಿದರು. ಭೈರಪ್ಪನವರು ಹಿಂದುತ್ವವಾದಿ ಎಂದು ಹೇಳುವವರು, ಪ್ಲೇಟೋನನ್ನು ಸರಿಯಾಗಿ ಓದಿಕೊಂಡಿಲ್ಲ. ಓದಿಕೊಂಡಿದ್ದರೂ ಅರ್ಥ ಮಾಡಿಕೊಂಡಿಲ್ಲ. ತಪ್ಪಾಗಿ ಅರ್ಥೈಸಿದ್ದಾರೆ. ಅವರು ಬ್ರಿಟಿಷ್‌ ಸಾಹಿತಿಗಳಂತೆ ನಕಾರಾತ್ಮಕವಾಗಿ ಚಿಂತಿಸುತ್ತಾರೆ. ಅವರ ಅವಿವೇಕಕ್ಕೆ ಏನು ಹೇಳಬೇಕು? ಎಂದು ಭೈರಪ್ಪನವರು ಪ್ರಶ್ನಿಸುತ್ತಾರೆ. ಇಂಥವರಿಗೆ ಭೈರಪ್ಪನವರು ಉತ್ತರ ಕೊಡಲು ಹೋಗಿಲ್ಲ. ಉತ್ತರ ಕೊಡಲು ಹೋಗಿದ್ದರೆ ನನ್ನ ಬರವಣಿಗೆಯ ಸತ್ವ ಹೋಗುತ್ತಿತ್ತು . ಆದ್ದರಿಂದ ಸಂಪೂರ್ಣವಾಗಿ ಅಲಕ್ಷಿಸಿದೆ ಎಂದು ಭೈರಪ್ಪನವರೇ ತಿಳಿಸಿದ್ದಾರೆ. 16 ಮಂದಿ ಲೇಖಕರು ಭೈರಪ್ಪನವರನ್ನು ಸಂದರ್ಶಿಸಿರುವ ಚಿಂತನ ಮಂಥನ ಕೃತಿಯನ್ನು ಡಾ. ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು.

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.