ಶಶಿಕುಮಾರ್ ಬಿಗ್ ಬಾಸ್
Team Udayavani, Jan 28, 2019, 6:35 AM IST
ಬೆಂಗಳೂರು: ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ 6ನೇ ಆವೃತ್ತಿ ಮುಕ್ತಾಯವಾಗಿದ್ದು, ಆಧುನಿಕ ರೈತ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದ ಶಶಿಕುಮಾರ್ ವಿಜೇತರಾಗಿ ಆಯ್ಕೆಯಾಗಿದ್ದಾರೆ.
ಮತ್ತೊಬ್ಬ ಸ್ಪರ್ಧಿ ನವೀನ್ ಸಜ್ಜು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ವಿಜೇತ ಶಶಿಕುಮಾರ್ 50 ಲಕ್ಷ ನಗದು ಮತ್ತು ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡರು. ಬಿಗ್ ಬಾಸ್ ಬಹುಮಾನ ಮೊತ್ತವನ್ನು ಹಣವನ್ನು ರೈತರ ಕಲ್ಯಾಣ ಕಾರ್ಯಗಳಿಗೆ ಬಳಸುವುದಾಗಿ ಶಶಿಕುಮಾರ್ ತಿಳಿಸಿದ್ದಾರೆ.