ಟಿವಿ ವೀಕ್ಷಿಸುತ್ತಿದ್ದ ಗರ್ಭಿಣಿ ತಾಯಿಗೆ ಗುಂಡು ಹೊಡೆದ 4 ವರ್ಷದ ಮಗ!
Team Udayavani, Feb 5, 2019, 4:34 AM IST
ವಾಷಿಂಗ್ಟನ್: ಟಿವಿ ನೋಡುತ್ತಿದ್ದ ಗರ್ಭಿಣಿ ತಾಯಿ ಮೇಲೆ ನಾಲ್ಕು ವರ್ಷದ ಪುಟಾಣಿ ಮಗ ಆಕಸ್ಮಿಕವಾಗಿ ಹ್ಯಾಂಡ್ ಗನ್ ನಿಂದ ಗುಂಡು ಹಾರಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ತಿಂಗಳ ಗರ್ಭಿಣಿ ತಾಯಿ ಹಾಗೂ ಆಕೆಯ ಬಾಯ್ ಫ್ರೆಂಡ್ ಜೊತೆ ಬೆಡ್ ಮೇಲೆ ಕುಳಿತುಕೊಂಡು ಟಿವಿ ನೋಡುತ್ತಿದ್ದರು. ಈ ಸಂದರ್ಭದಲ್ಲಿ ಕೋಣೆಯೊಳಗೆ ಬಂದ ಮಗುವಿಗೆ ಹ್ಯಾಂಡ್ ಗನ್ ಅನ್ನು ನೋಡಿದ್ದ. ಅದನ್ನು ಕೈಗೆತ್ತಿಕೊಂಡು ತಾಯಿಯ ಮುಖಕ್ಕೆ ಗುರಿಯಿಟ್ಟು ಹೊಡೆದು ಬಿಟ್ಟಿದ್ದ ಎಂದು ಕಿಂಗ್ಸ್ ಕೌಂಟಿ ಷರೀಫ್ಸ್ ಕಚೇರಿಯ ವಕ್ತಾರ ಸಾರ್ಜೆಂಟ್ ರೈಯಾನ್ ಅಬ್ಬೊಟ್ಟ ಮಾಹಿತಿ ನೀಡಿದ್ದಾರೆ.
ಮಾರಣಾಂತಿಕವಾಗಿ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಧ್ಯಮದ ವರದಿ ವಿವರಿಸಿದೆ. ಬಾಯ್ ಫ್ರೆಂಡ್ ಮಗುವಿನ ತಂದೆಯಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ