ಶಾಶ್ವತ ನೀರಾವರಿ ಯೋಜನೆಗಳಿಗೆ ಮತ್ತೆ ಬರೆ!


Team Udayavani, Feb 9, 2019, 6:57 AM IST

sahsvata.jpg

ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ತನ್ನ ಎರಡನೇ ಚೊಚ್ಚಲ ಬಜೆಟ್‌ನಲ್ಲಿ ಜಿಲ್ಲೆಗೆ ತೀವ್ರ ನಿರಾಶೆ ಮೂಡಿಸಿದ್ದಾರೆ. ಬರದಿಂದ ತತ್ತರಿಸಿ ಬಾಯಾರಿದ ಜನತೆಗೆ ಶಾಶ್ವತ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡುವ ಮೂಲಕ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುತ್ತಾರೆಂಬ ಜನರ ನಿರೀಕ್ಷೆ ಮತ್ತೆ ಹುಸಿಯಾಗುವಂತಾಗಿ ಬರಡು ಜಿಲ್ಲೆಗೆ ದೋಸ್ತಿ ಬಜೆಟ್ ಬರೆ ಎಳೆದಿದ್ದು, ಒಂದಿಷ್ಟು ರೈತ ಪರ ಯೋಜನೆಗಳಿಗೆ ಮಾತ್ರ ಕುಮಾರ ಬಜೆಟ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಸಮಾಧಾನ: ಚುನಾವಣಾ ಪೂರ್ವದಲ್ಲಿ ಎಚ್. ಡಿ.ಕುಮಾರಸ್ವಾಮಿ ಘೋಷಿಸಿದ್ದ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನದ ಮಾತು ಬಜೆಟ್‌ನಲ್ಲಿ ಮಾಯವಾಗಿ ಮತ್ತೆ ಎತ್ತಿನಹೊಳೆ ಜಪ ಮಾಡಿರುವುದು ಸಹಜವಾಗಿಯೇ ಶಾಶ್ವತ ನೀರಾವರಿ ಹೋರಾಟಗಾರರಲ್ಲಿ ಅಸಮಾಧಾನ ತಂದಿದೆ. ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂ ಕದ ಜೊತೆಗೆ ನೀರಾವರಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿರುವ ಹೆಬ್ಟಾಳ, ನಾಗವಾರ ನೀರಾವರಿ ಯೋಜನೆಗಳ ತ್ಯಾಜ್ಯ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸುವ ಕುರಿತು ಬಜೆಟ್‌ನಲ್ಲಿ ಸಿಎಂ ಯಾವುದೇ ಪ್ರಸ್ತಾಪ ಮಾಡದಿರುವುದು ತೀವ್ರ ಆಶ್ಚರ್ಯ ತಂದಿದೆ.

100 ಕೋಟಿ ರೂ. ಮೀಸಲು: ಪರೋಕ್ಷವಾಗಿ ಎಚ್.ಎನ್‌ ವ್ಯಾಲಿ ಯೋಜನೆಗಳಿಗೆ ವಿರೋಧವಾಗಿ ರುವ ಕುಮಾರಸ್ವಾಮಿ ಮೂರನೇ ಹಂತದ ಶುದ್ಧೀಕರಣಕ್ಕೆ ಕ್ರಮ ವಹಿಸಬಹುದೆಂಬ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಆದರೆ ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುಧಾನ ಮೀಸಲಿಟ್ಟಿರುವುದು ಸಮಾಧಾನ ತಂದಿದೆ.

ಮೆಡಿಕಲ್‌ ಕಾಲೇಜು ಕನಸು ನುಚ್ಚುನೂರು: ಹಿಂದಿನ ಕಾಂಗ್ರೆಸ್‌ ಸರ್ಕಾರ 2015-16ನೇ ಆಯವ್ಯಯದಲ್ಲಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಮಂಜೂರು ಮಾಡಿದ ವೈದ್ಯಕಿಯ ಕಾಲೇಜಿಗೆ ಕುಮಾರ ಲೆಕ್ಕಾಚಾರದಲ್ಲಿ ಅನುದಾನ ಸಿಗದಿರುವುದು ಬೇಸರ ಮೂಡಿಸಿದೆ. ಜಿಲ್ಲೆಗೆ ಮೆಡಿಕಲ್‌ ಕಾಲೇಜು ಘೋಷಣೆಯಾಗಿ ಆರನೇ ವರ್ಷಕ್ಕೆ ಪಾದರ್ಪಾಣೆ ಮಾಡಿದರೂ ಮೆಡಿಕಲ್‌ ಕಾಲೇಜಿಗೆ ಯಾವುದೇ ಅನುದಾನ ನೀಡಿಲ್ಲ.

ಬಜೆಟ್‌ಗೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರರೆಡ್ಡಿ ಈ ಬಾರಿ ಬಜೆಟ್‌ನಲ್ಲಿ ಜಿಲ್ಲೆಯ ಮೆಡಿಕಲ್‌ ಕಾಲೇಜಿಗೆ ಸಿಎಂ ಅನುದಾನ ಕೊಡಲಿದ್ದಾರೆಂ ಎಂದಿದ್ದರು. ಇದೀಗ ಸಚಿವರ ಭರವಸೆ ಕೂಡ ಹುಸಿಯಾಗಿದೆ. ಆದರೆ ಜಿಲ್ಲೆಯಲ್ಲಿ ಮಹಿಳೆಯರ ಸ್ತನಕ್ಯಾನ್ಸರ್‌ ಪತ್ತೆಗೆ ಜಿಲ್ಲಾಸ್ಪತ್ರೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್‌ ಸ್ತನರೇಖೆ ಘಟಕ ತೆರೆಯುವುದಾಗಿ ಸಿಎಂ ಘೋಷಿಸಿದ್ದಾರೆ.

ಕೈಗಾರಿಕೆಗಳ ಬಗ್ಗೆ ಪ್ರಸ್ತಾಪವಿಲ್ಲ: ಆಶ್ಚರ್ಯದ ಸಂಗತಿಯೆಂದರೆ ಕಳೆದ ಜುಲೈ ತಿಂಗಳಲ್ಲಿ ತಾವೇ ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲೆಗೆ ಮೊಬೈಲ್‌ ಬಿಡಿಭಾಗಗಳ ಘಟಕ ಸ್ಥಾಪನೆ ಘೋಷಿಸಿದ್ದ ಕುಮಾರಸ್ವಾಮಿ ಈ ಬಾರಿ ಬಜೆಟ್‌ನಲ್ಲಿ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಅನುದಾನವು ಕೊಡದೇ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಲ್ಲಿ ನಿರಾಶೆ ಮೂಡಿಸಿದ್ದಾರೆ. ಇನ್ನೂ ಹೊಸದಾಗಿ ಜಿಲ್ಲೆಗೆ ಉದ್ಯೋಗ ನೀಡುವಂತಹ ಅದರಲ್ಲೂ ಕೃಷಿ ಆಧಾರಿತ ಕೈಗಾರಿಕೆಗಳ ಪ್ರವೇಶದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ ಜಿಲ್ಲೆಯ ನಿರುದ್ಯೋಗಿಗಳಿಗೆ ಕೈಗಾರಿಕೆ ಗಳು ಮತ್ತೆ ಜಿಲ್ಲೆಯಿಂದ ದೂರವಾಗಿರುವುದು ಬೇಸರ ಮೂಡಿಸಿವೆ.

ನಂದಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಬ್ರೇಕ್‌: ಐತಿಹಾಸಿಕ ನಂದಿಗಿರಿಧಾಮ ಹೊಂದಿರುವ ಚಿಕ್ಕಬಳ್ಳಾಪುರ ಬರಡು ಜಿಲ್ಲೆಯಾದರೂ ಪ್ರವಾಸೋದ್ಯಮಕ್ಕೆ ವಿಫ‌ುಲವಾದ ಅವಕಾಶಗಳು ಇವೆ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಅದರಲ್ಲೂ ಸಂಸದ ಎಂ.ವೀರಪ್ಪ ಮೊಯ್ಲಿ ಕನಸಿನ ಕೂಸಾದ ನಂದಿ ಅಭಿವೃದ್ಧಿ ಪ್ರಾಧಿಕಾರ ರಚನೆ ಬಗ್ಗೆ ಕೂಡ ಮುಖ್ಯಮಂತ್ರಿಗಳು ಒಲವು ತೋರದಿರುವುದು ಕುತೂಹಲ ಕೆರಳಿಸಿದೆ.

ತೋಟಗಾರಿಕೆ, ಅರಣ್ಯ ಹಾಗೂ ಪ್ರವಾಸೋದ್ಯಮ ಹೀಗೆ ವಿವಿಧ ಇಲಾಖೆಗಳಿಗೆ ಹಂಚಿ ಹೋಗಿರುವ ನಂದಿಗಿರಿಧಾಮವನ್ನು ಒಂದೇ ಸೂರಿನಡಿ ಅಭಿವೃದ್ಧಿ ಪಡಿಸುವ ಸಲುವಾಗಿ ನಂದಿ ಪ್ರಾಧಿಕಾರ ರಚನೆ ಅಗತ್ಯವಾಗಿತ್ತು. ಅದಲ್ಲೂ ಜಿಲ್ಲೆಯ ವಿವಿಧ ತಾಲೂಕು ಗಳ ಪ್ರವಾಸೋದ್ಯಮಕ್ಕೂ ನಂದಿ ಪ್ರಾಧಿಕಾರ ರಚನೆ ಅನಿರ್ವಾವಾಗಿತ್ತು. ಆದರೆ ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಈ ಬಗ್ಗೆ ಎಲ್ಲೂ ಪ್ರಸ್ತಾಪಿಸದೇ ಜಿಲ್ಲೆಯ ಪ್ರವಾಸಿಗರಲ್ಲಿ ತೀವ್ರ ಬೇಸರ ಮೂಡಿಸಿದ್ದಾರೆ.

ಒಟ್ಟಾರೆ ರಾಜ್ಯ ಸಮ್ಮಿಶ್ರ ಸರ್ಕಾರದ ಆಯವ್ಯಯ ಮಂಡನೆಯಲ್ಲಿ ಜಿಲ್ಲೆಯ ನಿರೀಕ್ಷಿತ ನೀರಾವರಿ ಯೋಜನೆಗಳಿಗೆ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಕಡೆಗೆ ಆಸಕ್ತಿ ತೋರದಿರುವುದು ಜಿಲ್ಲೆಯ ಜನತೆಯಲ್ಲಿ ಬೇಸರ ತಂದಿದ್ದರೂ ಹಲವು ರೈತಪರ ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ಕೊಟ್ಟಿರುವುದು ಅನ್ನದಾತದಲ್ಲಿ ಸಂತಸ ತಂದಿದೆ.

ವಿಶೇಷವಾಗಿ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಚೇಳೂರು ಹೋಬಳಿಯನ್ನು ತಾಲೂಕು ಮಾಡಿರುವುದಕ್ಕೆ, ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ಘಂಟಲಮ್ಮಲಮ್ಮ ಹಳ್ಳಕ್ಕೆ ಕಣಿವೆ ನಿರ್ಮಿಸಲು 20 ಕೋಟಿ ರೂ. ಅನುದಾನ ಕೊಟ್ಟಿರುವುದಕ್ಕೆ ಸಮಾಧಾನ ತಂದಿದೆ.

ಕುಮಾರ ಲೆಕ್ಕಾಚಾರದಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?
* ಜಿಲ್ಲೆಯ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗೆ 100 ಕೋಟಿ

* ಸ್ತನ ಕ್ಯಾನ್ಸರ್‌ ಪತ್ತೆಗೆ ಡಿಜಿಟಲ್‌ ಸ್ತನರೇಖೆನ ಘಟಕ

* ಚೇಳೂರು ಹೋಬಳಿ ಕೇಂದ್ರಕ್ಕೆ ತಾಲೂಕು ಸ್ಥಾನಮಾನ

* ಪಾತಪಾಳ್ಯದ ಘಂಟಮಲಮ್ಮ ಹಳ್ಳಕ್ಕೆ ಡ್ಯಾಂ ನಿರ್ಮಿಸಲು 20 ಕೋಟಿ

* ಚಿಕ್ಕಬಳ್ಳಾಪುರದಲ್ಲಿ ಹೊಸ ಕ್ರೀಡಾ ವಸತಿ ಶಾಲೆ ಸ್ಥಾಪನೆ

* ಎತ್ತಿನಹೊಳೆ ಯೋಜನೆ ತ್ವರಿತಗತಿಗೆ ಕ್ರಮ

* ಚಿಕ್ಕಬಳ್ಳಾಪುರ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ

ಕುಮಾರ ಬಜೆಟ್‌ನಲ್ಲಿ ಬಾಗೇಪಲ್ಲಿಗೆ ಬಂಪರ್‌
ಚಿ
ಕ್ಕಬಳ್ಳಾಪುರ:
ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರು ಶುಕ್ರವಾರ ಮಂಡಿಸಿದ ತಮ್ಮ ಎರಡನೇ ಆಯ ವ್ಯಯದಲ್ಲಿ ಜಿಲ್ಲೆಯ ಅತಿ ಹಿಂದುಳಿದ ತಾಲೂಕಾಗಿ ರುವ ಬಾಗೇಪಲ್ಲಿಗೆ ಬಂಪರ್‌ ಹೊಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿಗೆ ತುಸು ಸಮಾ ಧಾನ ತಂದರೆ ಉಳಿದ ಶಿಡ್ಲಘಟ್ಟ, ಚಿಂತಾ ಮಣಿ, ಗುಡಿಬಂಡೆ ಹಾಗೂ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರ ಗೌರಿಬಿದನೂರನ್ನು ನಿರ್ಲಕ್ಷಿಸಲಾಗಿದೆ.

20 ಕೋಟಿ ವೆಚ್ಚದಲ್ಲಿ ಡ್ಯಾಂ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ಘಂಟಮಲ್ಲಮ್ಮ ಹಳ್ಳಕ್ಕೆ ಬರೋಬ್ಬರಿ 20 ಕೋಟಿ ರೂ. ವೆಚ್ಚದಲ್ಲಿ ಡ್ಯಾಂ ನಿರ್ಮಿಸುವ ಮಹತ್ವಕಾಂಕ್ಷೆ ಕಾರ್ಯ ಕ್ರಮಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರು ವುದು ಪಾತಪಾಳ್ಯ ಹೋಬಳಿ ಜನರಲ್ಲಿ ಹರ್ಷ ತಂದಿದೆ.

ಸುಮಾರು 160 ಕ್ಕೂ ಹೆಚ್ಚು ಗ್ರಾಮ ಗಳಿಗೆ ಕುಡಿಯುವ ನೀರಿನ ಆಸರೆಯಾಗ ಲಿರುವ ಅದರಲ್ಲೂ ಪಾಪತಾಳ್ಯ, ನರೇ ಮುದ್ದೇಪಲ್ಲಿ ಮತ್ತಿತರ ಗ್ರಾಪಂಗಳಿಗೆ ಕುಡಿಯುವ ನೀರಿನ ಆಸರೆಯಾಗಲಿರುವ ಘಂಟಮ್ಮಲಮ್ಮನ ಹಳ್ಳಕ್ಕೆ ಡ್ಯಾಂ ನಿರ್ಮಿ ಸಲು ಶಾಸಕ ಸುಬ್ಟಾ ರೆಡ್ಡಿ ವಿಶೇಷ ಕಾಳಜಿ ವಹಿಸಿ ಬಜೆಟ್‌ನಲ್ಲಿ ಅನುದಾನ ತರುವಲ್ಲಿ ಯಶಸ್ವಿಯಾಗಿ ದ್ದಾರೆ.

ಸ್ತನರೇಖೆ ವಿಭಾಗ ಮಂಜೂರು: ಬಾಗೇಪಲ್ಲಿ ತಾಲೂಕು ಭಾಗವಾಗಿರುವ ದೂರದ ಚೇಳೂರು ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಿರು ವುದು ಆ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಹೊಸದಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಯಿಂದ ನೂತನವಾಗಿ ಕ್ರೀಡಾ ವಸತಿ ಶಾಲೆ ಮಂಜೂರಾದರೆ, ಜಿಲ್ಲಾ ಆಸ್ಪತ್ರೆ ಯಲ್ಲಿ ಮಹಿಳೆಯರ ಕ್ಯಾನ್ಸರ್‌ ಪತ್ತೆಗೆ ಅತ್ಯಾ ಧುನಿಕ ಸ್ತನರೇಖೆ ವಿಭಾಗ ಮಂಜೂ ರಾಗಿದೆ.

ಚಿಂತಾಮಣಿ ನಿರ್ಲಕ್ಷ್ಯ: ಚಿಕ್ಕಬಳ್ಳಾಪುರ ನಂದಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ, ಮೆಡಿಕಲ್‌ ಕಾಲೇಜಿಗೆ ಅನುದಾನ ಕೊಡಲು ಕುಮಾರಸ್ವಾಮಿ ಒಲವು ತೋರಿಲ್ಲ. ವಿಧಾನಸಭಾ ಉಪಸಭಾಧ್ಯ ಕ್ಷರ ಕ್ಷೇತ್ರವಾಗಿರುವ ಚಿಂತಾಮಣಿ ನಗ ರಕ್ಕೆ ಸಂಚಾರಿ ಠಾಣೆ ಸ್ಥಾಪನೆ ಆಗ ಬೇಕೆಂಬ ಬೇಡಿಕೆ ಈಡೇರಿಲ್ಲ. ಸರ್ಕಾರಿ ಪಾಲಿಟೆಕ್ನಿಕ್‌ ಎಂಜಿನಿಯರಿಂಗ್‌ ಕಾಲೇಜು ಆಗಿ ಮೇಲ್ದರ್ಜೇಗೇರಿಸುವ ಬೇಡಿಕೆಗೂ ಸ್ಪಂದಿಸಿಲ್ಲ.

ರೇಷ್ಮೆ ನಗರಿ ಶಿಡ್ಲಘಟ್ಟ ಕ್ಷೇತ್ರವನ್ನು ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸ ಲಾಗಿದೆ. ಅಲ್ಲಿನ ಶಾಸಕ ವಿ.ಮುನಿಯಪ್ಪ ಸದ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಯಾದರೂ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಜೆಟ್‌ನಲ್ಲಿ ಯಾವುದೇ ಕೊಡುಗೆ ಪಡೆಯುವಲ್ಲಿ ವಿಫ‌ಲರಾಗಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂ ಕಾಗಿರುವ ಗುಡಿಬಂಡೆಯನ್ನು ನಿರ್ಲಕ್ಷಿಸ ಲಾಗಿದೆ. ಅಲ್ಲಿ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಆಗ ಬೇಕೆಂಬ ಹೋರಾಟ ಮತ್ತೆ ಪ್ರಬಲ ಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ.

ಬಜೆಟ್‌ನಲ್ಲಿ ಕೈ ತಪ್ಪಿದ್ದೇನು?
* ಶಾಶ್ವತ ನೀರಾವರಿ ಯೋಜನೆಗಳಿಗೆ ಬರೆ

* ಮೆಡಿಕಲ್‌ ಕಾಲೇಜಿಗೆ ಸಿಗದ ಅನುದಾನ

* 3ನೇ ಹಂತದ ಶುದ್ಧೀಕರಣಕ್ಕೆ ಸಿಗದ ಭರವಸೆ

* ನಂದಿ ಅಭಿವೃದ್ಧಿ ಪ್ರಾಧಿಕಾರ ಕನಸು ಭಗ್ನ

* ಮಂಚೇನಹಳ್ಳಿ, ಸಾದಲಿಗೆ ಇಲ್ಲ ತಾಲೂಕು ಸ್ಥಾನ‌

* ಸರ್‌.ಎಂ.ವಿ ಹುಟ್ಟೂರು ಮೂಲೆಗುಂಪು

* ರೇಷ್ಮೆ ಹೈನುಗಾರಿಕೆ ಕ್ಷೇತ್ರಗಳ ನಿರ್ಲಕ್ಷ್ಯ

* ಜಿಲ್ಲೆಗೆ ಮರೀಚಿಕೆಯಾದ ಕೈಗಾರಿಕೆಗಳು

* ನೂತನ ಉತ್ತರ ವಿವಿಗೆ ಮತ್ತೆ ಅನಾಥ

ಜಿಲ್ಲೆಗೆ ವರವಾಗುವ ಯೋಜನೆಗಳು?
* ಬಯಲು ಸೀಮೆ ಅಭಿವೃದ್ಧಿಗೆ 95 ಕೋಟಿ

* ನಂಜುಂಡಪ್ಪ ವರದಿಯ ಹಿಂದುಳಿದ ಜಿಲ್ಲೆಗಳಿಗೆ 3010 ಕೋಟಿ

* ಕೋಲಾರದಲ್ಲಿ ಮಾವು, ಟೊಮೆಟೋ ಸಂಸ್ಕರಣಾ ಘಟಕ

* ದ್ರಾಕ್ಷಿ, ದಾಳಿಂಬೆ ಬೆಳೆಗಳಿಗೆ ಪ್ರೋತ್ಸಾಹ ದನ

* ಅತಿ ಅಂತರ್ಜಲ ಬಳಕೆ ಜಿಲ್ಲೆಗಳಲ್ಲಿ ಜಲ ಮರುಪೂರ್ಣ

* ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 10 ಸಾವಿರ ರೂ.

* ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ನಿಧಿ ಹೆಚ್ಚಳ

‘ರಸ್ತೆ ಅಭಿವೃದ್ಧಿ ಅನುದಾನ ಹಾಸನ ಜಿಲ್ಲೆಗೆ ಕೊಟ್ಟಿದ್ದಾರೆ’
ಚಿಕ್ಕಬಳ್ಳಾಪುರ:
ಸಿಎಂ ಕುಮಾರ ಸ್ವಾಮಿ ಅವರು ರೈತರನ್ನು ಮನಸಿ ನಲ್ಲಿಟ್ಟುಕೊಂಡು ರೈತರ ಪರವಾಗಿ ಬಜೆಟ್ ಮಂಡಿ ಸಿದ್ದಾರೆ. ಆದರೆ ನನಗೆ ವೈಯ ಕ್ತಿಕವಾಗಿ ತೀವ್ರ ನಿರಾಸೆ ಮೂಡಿ ಸಿದೆ. ಚಿಕ್ಕಬಳ್ಳಾಪುರದ ಮೆಡಿ ಕಲ್‌ ಕಾಲೇಜು ಸ್ಥಾಪನೆಗೆ ಹಣ ಕೊಟ್ಟಿಲ್ಲ. ಎತ್ತಿನಹೊಳೆ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಜಿಲ್ಲೆಗೆ ಹಣ ಕೊಡುವುದರ ಬದಲು ಹಾಸನ ಜಿಲ್ಲೆಗೆ ಕೊಟ್ಟಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್ ಕುರಿತು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಎತ್ತಿನಹೊಳೆ ಯೋಜನೆಗೂ ಸಮರ್ಪಕವಾಗಿ ಅನುದಾನ ಕೊಟ್ಟಿಲ್ಲ. ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಚಕಾರ ಎತ್ತಿಲ್ಲ. ಎತ್ತಿನಹೊಳೆ ಯೋಜನೆ ಫ‌ಲಾನುಭವಿಗಳು ನಾವು. ಜಿಲ್ಲೆಯ ರಸ್ತೆಗಳಿಗೂ ಅನುದಾನ ಕೊಡಬೇಕು. ಅದೆಲ್ಲವನ್ನು ಬಿಟ್ಟು ಹಾಸನಕ್ಕೆ ಕೊಡುವುದು ಎಷ್ಟು ಸರಿ ಎಂದು ಸುಧಾಕರ್‌ ಪ್ರಶ್ನಿಸಿದರು.

ಬಜೆಟ್ ಬಗ್ಗೆ ಅಂಕಿ, ಅಂಶಗಳು ನನ್ನ ಬಳಿ ಇಲ್ಲ. ಅಧಿವೇಶನದಲ್ಲಿ ಜಿಲ್ಲೆಗೆ ಆದ ಅನ್ಯಾಯದ ಬಗ್ಗೆ ಮಾತನಾಡುತ್ತೇನೆ. ಸಿಎಂ ಘೋಷಿಸಿದ್ದ ಮೊಬೈಲ್‌ ಬಿಡಿಭಾಗಗಳ ಘಟಕ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಹೆಬ್ಟಾಳ, ನಾಗವಾರ ನೀರಾವರಿ ಯೋಜನೆಯ ಮೂರನೇ ಹಂತದ ಶುದ್ಧೀಕರಣಕ್ಕೂ ಯಾವುದೇ ಪರಿಹಾರ ಸೂಚಿಲ್ಲ. ಈ ಬಜೆಟ್ ನನಗೆ ವೈಯಕ್ತಿಕವಾಗಿ ತೀವ್ರ ಬೇಸರ ತಂದಿದೆ ಎಂದು ಅತೃಪ್ತ ಶಾಸಕರು ಕಿಡಿಕಾರಿದರು.

* ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.