ಕಣ್ಣೀರ ಕಥೆ :ಹುತಾತ್ಮ ಯೋಧ 3 ತಿಂಗಳ ಮಗುವಿನ ಮುಖವನ್ನೇ ನೋಡಿಲ್ಲ
Team Udayavani, Feb 15, 2019, 3:01 PM IST
ಜೈಪುರ: ಆವಂತಿಪೋರಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 42 ಯೋಧರ ಕುಟುಂಬದ ಕಣ್ಣೀರ ಕಥೆ ಕೇಳಿದರೆ ಪ್ರತಿಯೊಬ್ಬರ ಕಣ್ಣುಗಳು ತೇವವಾಗುತ್ತಿದೆ.ದುರಂತವೆಂದರೆ ಯೋಧರೊಬ್ಬರು 3 ತಿಂಗಳ ಮಗಳ ಮುಖವನ್ನೇ ನೋಡದೆ ದೇಶಕ್ಕಾಗಿ ಹುತಾತ್ಮ ರಾಗಿದ್ದು ಎಲ್ಲರ ಕರುಳು ಹಿಂಡುವಂತಿದೆ.
ರಾಜಸ್ಥಾನದ ಜೈಪುರದ ಗೋವಿಂದಪುರದ ಸಿಆರ್ಪಿಎಫ್ ಯೋಧ ರೋಹಿತಾಷ್ ಲಾಂಬಾ(27) ಹುತಾತ್ಮರಾಗಿದ್ದು, ಇವರ ಪತ್ನಿ 3 ತಿಂಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ದೇಶಕ್ಕಾಗಿ ಪ್ರಾಣ ಪಣವಿಟ್ಟು ಕರ್ತವ್ಯ ಸಲ್ಲಿಸುತ್ತಿದ್ದ ವೀರ ಯೋಧ ಲಾಂಬಾ ಮಗುವಿನ ಮುಖವನ್ನೂ ನೋಡಿರಲಿಲ್ಲ. ಅವರ ಬಲಿದಾನದಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದು ಮಗುವನ್ನು ನೋಡಿದವರ ಮೈಯಲ್ಲಿ ಉಗ್ರರ ವಿರುದ್ಧ ರೋಷ ಉಕ್ಕೇರುತ್ತಿದೆ.