ಟಿ20: ಅಫ್ಘಾನಿಸ್ಥಾನ ವಿಶ್ವದಾಖಲೆ: ಟಿ20ಯಲ್ಲಿ ಸರ್ವಾಧಿಕ ರನ್
Team Udayavani, Feb 24, 2019, 12:30 AM IST
ಡೆಹ್ರಾಡೂನ್: ಅಫ್ಘಾನಿಸ್ಥಾನ ಟಿ20 ಅಂತಾ ರಾಷ್ಟ್ರೀಯ ಪಂದ್ಯದಲ್ಲಿ ಸರ್ವಾಧಿಕ ರನ್ ಪೇರಿಸಿದ ವಿಶ್ವದಾಖಲೆ ನಿರ್ಮಿಸಿದೆ. ಐರ್ಲೆಂಡ್ ವಿರುದ್ಧದ ಮುಖಾಮುಖೀಯಲ್ಲಿ ಅಫ್ಘಾನ್ 3 ವಿಕೆಟಿಗೆ 278 ರನ್ ಗಳಿಸಿ ಈ ದಾಖಲೆ ಸ್ಥಾಪಿಸಿತು.
2016ರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯ 3 ವಿಕೆಟಿಗೆ 263 ರನ್ ಬಾರಿಸಿದ ದಾಖಲೆ ಪತನಗೊಂಡಿತು.
ಅಫ್ಘಾನ್ ಪರ ಆರಂಭಕಾರ ಹಜ್ರತುಲ್ಲ ಜಜಾಯ್ ಅಜೇಯ 162 ರನ್ ಬಾರಿಸಿದರು (62 ಎಸೆತ, 11 ಬೌಂಡರಿ, 16 ಸಿಕ್ಸರ್). ಇದು ಟಿ20 ಇತಿಹಾಸದ 2ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. ಕಳೆದ ವರ್ಷ ಜಿಂಬಾಬ್ವೆ ವಿರುದ್ಧದ ಹರಾರೆ ಪಂದ್ಯದಲ್ಲಿ ಆಸ್ಟ್ರೇ ಲಿಯದ ಆರಂಭಕಾರ ಆರನ್ ಫಿಂಚ್ 172 ರನ್ ಬಾರಿಸಿದ್ದು ವಿಶ್ವದಾಖಲೆಯಾಗಿದೆ.
ಆದರೆ ಹಜ್ರತುಲ್ಲ ಜಜಾಯ್ ಇನ್ನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಬರೆ ದರು. 2013ರ ಇಂಗ್ಲೆಂಡ್ ಎದುರಿನ ಸೌತಾಂಪ್ಟನ್ ಪಂದ್ಯದಲ್ಲಿ ಫಿಂಚ್ ಬಾರಿಸಿದ 14 ಸಿಕ್ಸರ್ಗಳ ದಾಖಲೆ ಪತನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ