3ನೇ ಏಕದಿನ: ಕ್ಲೀನ್ ಸ್ವೀಪ್ ತಪ್ಪಿಸಿಕೊಂಡ ಭಾರತ ಮಹಿಳಾ ತಂಡ
Team Udayavani, Mar 1, 2019, 12:30 AM IST
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ, ಇಂಗ್ಲೆಂಡನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶ ತಪ್ಪಿಸಿಕೊಂಡಿದೆ. ಮೊದಲೆರಡು ಏಕದಿನ ಪಂದ್ಯವನ್ನು ಅತ್ಯುತ್ತಮವಾಗಿಯೇ ಗೆದ್ದಿದ್ದ ಭಾರತೀಯರು, ಅಂತಿಮ ಪಂದ್ಯವನ್ನು 2 ವಿಕೆಟ್ನಿಂದ ಸೋತು ಹೋಗಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ಮಹಿಳೆಯರು, 48.5 ಓವರ್ಗಳಲ್ಲಿ ಸರಿಯಾಗಿ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದರು. ಭಾರತದ ಪರ ಸ್ಮತಿ ಮಂಧನ 66, ಪೂನಂ ರಾವತ್ 56 ರನ್ ಗಳಿಸಿ, ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.