ಮಾದಕ ವಸ್ತು ಮಾರಾಟ: ಬಂಧನ

Team Udayavani, Mar 3, 2019, 6:46 AM IST

arrest3.jpg

ಬೆಂಗಳೂರು: ಅಕ್ರಮವಾಗಿ ನೆಲೆಸಿ, ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆ¿ೊಬ್ಬ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಬಲೆಗೆ ಬಿದ್ದಿದ್ದಾನೆ.

ಬಿ.ಜೋಸೆಫ್(29) ಬಂಧಿತ. ಆರೋಪಿ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಯನ್ನು ಮಾದಕ ವಸ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 3 ಲಕ್ಷ ರೂ. ಮೌಲ್ಯದ 20 ಗ್ರಾಂ ಕೊಕೇನ್‌, 9 ಗ್ರಾಂ ಎಂಡಿಎಂಎ ಮತ್ತು 12 ಗ್ರಾಂನ 36 ಎಕ್ಟಸಿ ಎಂಬ ಮಾದಕ ಮಾತ್ರೆಗಳು ಹಾಗೂ ಒಂದು ಬೈಕ್‌, ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಕೆಲ ವರ್ಷಗಳ ಹಿಂದೆ ವ್ಯವಹಾರ ವೀಸಾದಡಿ ಭಾರತಕ್ಕೆ ಬಂದಿರುವ ಜೋಸೆಫ್, ಕೆ.ಆರ್‌.ಪುರದಲ್ಲಿ ವಾಸವಾಗಿದ್ದ. ವೀಸಾ ಅವಧಿ ಮುಕ್ತಾಯಗೊಂಡರೂ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ 2018ರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರ ಬಂದಿದ್ದವನು ಜೀವನ ನಿರ್ವಹಣೆಗಾಗಿ ಆಫ್ರಿಕಾ ಮೂಲಕ ಮುಂಬೈ, ಗೋವಾ ಮಾರ್ಗವಾಗಿ ಮಾದಕ ವಸ್ತುಗಳ‌ನ್ನು ತರಿಸುತ್ತಿದ್ದ.

ನಂತರ ಅವುಗಳನ್ನು ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ನೈಜೀರಿಯಾ ಹಾಗೂ ಇತರೆ ವಿದೇಶಿ ಪ್ರಜೆಗಳಿಗೆ ಮಾರಾಟ ಮಾಡುತ್ತಿದ್ದ. ಈ ವಿದೇಶಿ ಪ್ರಜೆಗಳ ಮೂಲಕ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಕೆಲ ಮಾದಕ ವ್ಯಸನಿಗಳನ್ನು ಪರಿಚಯಿಸಿಕೊಂಡು ನೇರವಾಗಿ ಮಾರಾಟ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಟಾಪ್ ನ್ಯೂಸ್

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.