ಬಿಜೆಪಿ ಪೋಸ್ಟರ್‌ಗಳಲ್ಲಿ ಅಭಿನಂದನ್‌ ಭಾವ ಚಿತ್ರಕ್ಕೆ ಸರ್ವತ್ರ ಟೀಕೆ


Team Udayavani, Mar 10, 2019, 8:40 AM IST

abhinandan-10-3.jpg

ನವದೆಹಲಿ: ಸೇನಾ ಸಂಬಂಧಿತ ಫೊಟೋಗಳನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳದಿರುವಂತೆ ಭಾರತೀಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಈತನ್ಮಧ್ಯೆ ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಚಾರದ ಪೋಸ್ಟರ್‌ ಗಳಲ್ಲಿ ಭಾರತೀಯ ವಾಯುಪಡೆಯ ಪೈಲಟ್‌ ಅಭಿನಂದನ್‌ ವರ್ತಮಾನ್‌ ಅವರ ಭಾವಚಿತ್ರಗಳನ್ನು ಬಳಸಿರುವುದು ಇದೀಗ ದೇಶದ ಪ್ರಜ್ಞಾವಂತ ನಾಗರೀಕರನ್ನು ಕೆರಳಿಸಿದೆ. ಈ ಕುರಿತಾಗಿ ಹಲವರು ಟ್ವಿಟ್ಟರಿಗರು ಟ್ವೀಟ್‌ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.


ನವದೆಹಲಿ ಭಾಗದಲ್ಲಿ ಹಾಕಿರುವ ಪೋಸ್ಟರ್‌ ಒಂದರಲ್ಲಿ ಅಮಿತ್‌ ಶಾ, ನರೇಂದ್ರ ಮೋದಿ ಮತ್ತು ಇತರೇ ಬಿ.ಜೆ.ಪಿ. ಅಭ್ಯರ್ಥಿಗಳ ಭಾವಚಿತ್ರದ ಜೊತೆಗೆ ವೀರ ಯೋಧ ಅಭಿನಂದನ್‌ ಅವರ ಭಾವಚಿತ್ರವನ್ನೂ ಹಾಕಲಾಗಿದೆ. ಮಾತ್ರವಲ್ಲದೇ ‘ಮೋದಿ ಹೈ ತೋ ಮುಮ್ಕಿನ್‌ ಹೈ’ ‘ಮತ್ತು ನಮೋ ಅಗೈನ್‌’ ಎಂಬ ಬರಹಗಳನ್ನು ಬರೆಯಲಾಗಿದೆ.


ಭಾರತೀಯ ಸೇನೆ ಮತ್ತು ಇತ್ತೀಚೆಗೆ ಭಾರತೀಯ ವಾಯುಪಡೆ ಪಾಕ್‌ ಕೃಪಾಪೋಷಿತ ಉಗ್ರಗಾಮಿ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿಗಳನ್ನು ಬಿ.ಜೆ.ಪಿ.ಯು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡಿದ್ದವು. ಇನ್ನು ತನ್ನ ಪೋಸ್ಟರ್‌ ಗಳಲ್ಲಿ ಅಭಿನಂದನ್‌ ಭಾವಚಿತ್ರವನ್ನು ಬಳಕೆ ಮಾಡಿರುವುದಕ್ಕೆ ಟ್ವಿಟ್ಟರಿಗರು ಗರಂ ಆಗಿದ್ದಾರೆ. ಮತ್ತು ಕೇಸರಿ ಪಕ್ಷದ ಈ ಕ್ರಮವನ್ನು ‘ನಾಚಿಕೆಗೇಡು’ ಎಂದು ಬಣ್ಣಿಸಿದ್ದಾರೆ.


ಇನ್ನು ಹಲವಾರು ಪತ್ರಕರ್ತರೂ ಸಹ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಮತ್ತು ಇದರ ಕುರಿತಾಗಿರುವ ನೈತಿಕತೆ ಮತ್ತು ಕಾನೂನು ಅಂಶಗಳ ಕುರಿತಾಗಿಯೂ ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ಭಾರತೀಯ ವಾಯುಪಡೆಯು ತನ್ನ ಸ್ಟಷ್ಟನೆಯನ್ನು ನೀಡಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಇನ್ನು ಚಳುವಳಿಗಾರ ಯೋಗೇಂದ್ರ ಯಾದವ್‌ ಅವರು ಈ ಪೋಸ್ಟರ್‌ ಕುರಿತಾಗಿ ಭಾರತೀಯ ಚುನಾವಣಾ ಆಯೋಗದ ನಿಲುವೇನು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹುದ್ದೆಯಲ್ಲಿರುವ ಯೋಧನೊಬ್ಬನ ಭಾವಚಿತ್ರವನ್ನು ಚುನಾವಣಾ ಪ್ರಚಾರದ ಉದ್ದೇಶಕ್ಕಾಗಿ ಬಳಸುವುದಕ್ಕೆ ಅನುಮತಿಯಿದೆಯೇ ಎಂದು ಅವರು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ. ಭಾರತೀಯ ಸೇನೆಯನ್ನು ಮತ್ತು ಅದರ ಚಟುವಟಿಕೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸುವುದನ್ನು ನಿಲ್ಲಿಸುವಂತೆ ಸೇನೆಯ ನಿವೃತ್ತ ಅಧಿಕಾರಿ ಮೇಜರ್‌ ಡಿ.ಪಿ. ಸಿಂಗ್‌ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.


ಇನ್ನು ಬಿ.ಜೆ.ಪಿ.ಯ ಈ ಚುನಾವಣಾ ತಂತ್ರವನ್ನು ಕೆಲವು ಟ್ಟಿಟ್ಟರಿಗರು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರಂತಹ ಸಮರ್ಥ ನಾಯಕತ್ವ ಇದ್ದ ಕಾರಣದಿಂದಲೇ ನಮ್ಮ ಸೇನೆಗೆ ವಾಯುದಾಳಿ ನಡೆಸಲು ಸಾಧ್ಯವಾಗಿದೆ, ಆದುದರಿಂದ ಇದರ ಲಾಭವನ್ನು ಬಿ.ಜೆ.ಪಿ. ಪಡೆದುಕೊಂಡರೆ ತಪ್ಪೇನು? ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಒಟ್ಟಿನಲ್ಲಿ ಇತ್ತೀಚೆಗಿನ ಪುಲ್ವಾಮ ದಾಳಿ ಮತ್ತು ಆ ಬಳಿಕದ ಏರ್‌ ಸ್ಟ್ರೈಕ್‌ ವಿಷಯಗಳು ಇದೀಗ ವಿವಿಧ ಪಕ್ಷಗಳ ನಾಯಕರ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವುದಂತೂ ವಿಪರ್ಯಾಸವೇ ಸರಿ.

ಟಾಪ್ ನ್ಯೂಸ್

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.