ಕೆಎಂಎಫ್‌ನಿಂದ ಬೇಸಿಗೆ ಕಾಲಕ್ಕೆ ವಿಶೇಷ ಉತ್ಪನ್ನಗಳ ಬಿಡುಗಡೆ

Team Udayavani, Mar 17, 2019, 12:40 AM IST

2-asdsa.jpg

ಬೆಂಗಳೂರು: ದೇಶದ 2ನೇ ಅತಿ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿ (ಕೆಎಂಎಫ್‌) ಬೇಸಿಗೆಯಲ್ಲಿ ಗ್ರಾಹಕರನ್ನು ತಂಪಾಗಿರಿಸಲು ಲಾಂಗ್‌ಲೈಫ್‌ ಮಜ್ಜಿಗೆ ಜತೆ 83 ಐಸ್‌ಕ್ರೀಂಗಳನ್ನು ಪರಿಚಯಿಸಿದೆ. ಈಗ ಮತ್ತಷ್ಟು 22 ವೆರೈಟಿ ಐಸ್‌ ಕ್ರೀಂ ಪರಿಚಯಿಸಲಿದೆ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ ಟಿ. ಕುಲಕರ್ಣಿ ತಿಳಿಸಿದರು.

ಶನಿವಾರ ಕೆಎಂಎಫ್‌ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿನಿತ್ಯ 76 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು ಸುಮಾರು 18 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ. ರೈತರಿಂದ ಶೇಖರಿಸುತ್ತಿರುವ ಹಾಲಿನಲ್ಲಿ ಪ್ರತಿನಿತ್ಯ 35 ಲಕ್ಷ ಲೀಟರ್‌ ಹಾಲನ್ನು ಸ್ಯಾಶೆ ರೂಪದಲ್ಲಿ ಹಾಗೂ 6.5 ಲಕ್ಷ ಲೀ. ಯುಎಚ್‌ಟಿ ಹಾಲಿ ರೂಪದಲ್ಲಿ ಹಾಗೂ 6.5 ಲಕ್ಷ ಲೀ. ಮೊಸರಿನಲ್ಲಿ ಮಾರಾಟವಾಗುತ್ತಿದೆ.

ನಂದಿನ ಬ್ರಾÂಂಡ್‌ನ‌ಡಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲಿನ ಪೊಟ್ಟಣಗಳು, ದೀರ್ಘ‌ ಬಳಕೆಯ ಗುಡ್‌ಲೈಫ್‌ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಬೆಣ್ಣೆ, ಸುವಾಸಿತ ಹಾಲು,ಯೋಗರ್ಟ್‌, ಪನ್ನೀರ್‌, ಚೀಸ್‌, ನಂದಿನಿ ಕ್ರೀಮ್‌ ಹಾಗೂ 20ಕ್ಕೂ ಅಧಿಕ ಹಾಲಿನ ಸಿಹಿ ಉತ್ಪನ್ನಗಳಾದ ಮೈಸೂರು ಪಾಕ್‌, ಪೇಡ, ಧಾರವಾಡ ಪೇಡ, ಕೇಸರ್‌ ಪೇಡ, ಏಲಕ್ಕಿ ಪೇಡ, ಬಾದಾಮ್‌ ಬರ್ಫಿ, ಕ್ಯಾಶು ಬರ್ಫಿ, ಡ್ರೈಫ್ರೂಟ್ಸ್‌ ಬರ್ಫಿ,, ಕೋಕೊನೆಟ್‌ಬರ್ಫಿ, , ಚಾಕೋಲೆಟ್‌ ಬರ್ಫಿ, ಇನ್‌ಸ್ಟಂಟ್‌ ಪಾಯಸ ಮಿಕ್ಸ್‌, ಜಾಮೂನ್‌, ರಸಗುಲ್ಲಾಗಳನ್ನು ಒದಗಿಸಲಾಗುತ್ತಿದೆ. ಸಿಹಿ ತಿಂಡಿಗಳ ಜತೆಯಲ್ಲಿ ಖಾರಾ ತಿಂಡಿಗಳಾದ ಬೆಣ್ಣೆ ಮುರುಕು, ಖಾರ ಬೂಂದಿ ಹಾಗೂ ಮಸಾಲ ಕೊಡುಬಳೆಯನ್ನು ಪರಿಚಯಿಸಲಾಗಿದೆ. ಅಲ್ಲದೆ, 200 ಎಂಎಲ್‌, 500 ಎಂಎಲ್‌, 1 ಲೀಟರ್‌ ಹಾಗೂ 2 ಲೀಟರ್‌ ನಂದಿನಿ ಆ್ಯಕ್ವಾ ನೀರಿನ ಬಾಟಲ್‌ಗ‌ಳನ್ನು ಬಿಡುಗಡೆ ಮಾಡಲಾಗಿದೆ.

ಲಾಂಗ್‌ಲೈಫ್‌ ಮಜ್ಜಿಗೆ/ಬಫೆಲೋ ಮಿಲ್ಕ್: ಬೇಸಿಗೆಯಲ್ಲಿ ಐಸ್‌ಕ್ರೀಂ, ಮೊಸರಿನ ಜತೆ ಮಜ್ಜಿಗೆಗೆ ಬಹಳ ಬೇಡಿಕೆ ಬರುತ್ತಿರುವುರಿಂದ 200 ಎಂಎಲ್‌ ಸ್ಯಾಶೆ ಮಜ್ಜಿಗೆ ಜತೆ ಟೆಟ್ರಾ ಪ್ಯಾಕ್‌ನಲ್ಲಿ ಲಾಂಗ್‌ಲೈಫ್‌ ಮಜ್ಜಿಗೆ ಹಾಗೂ ಲಾಂಗ್‌ಲೈಫ್‌ ಬಫೆಲೋ ಮಿಲ್ಕ್ ಅನ್ನು ಬಿಡುಗಡೆ ಮಾಡಿದ್ದೇವೆ.

ಈ ಮಜ್ಜಿಗೆಗೆ ಐಟಿ, ಬಿಟಿ ಕ್ಷೇತ್ರದಲ್ಲಿ ಬಹಳ ಬೇಡಿಕೆಯಿದ್ದು, ಕೇವಲ 7 ರೂ.ನಲ್ಲಿ ಮಾರಾಟ ಮಾಡಲಾಗುತ್ತಿದೆ. ನಂದಿನಿ ಹಾಲು, ಮೊಸರು ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌, ವಿಜಯ ವಾಡ, ಗೋವಾ ನಗರಗಳಲ್ಲಿ ಪ್ರತಿದಿನ ಸರಾಸರಿ 2.5 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿ ರುವುದು ಸಂತಸದ ಸಂಗತಿ ಎಂದರು.

ಪೆಟ್‌ ಬಾಟಲ್‌/ಐಸ್‌ಕ್ರೀಂ ಘಟಕ: ಸುವಾಸಿತ ಹಾಲು ಉತ್ಪಾದನೆಗೆ ಹಾಸನ ಡೇರಿಯಲ್ಲಿ ಅತ್ಯಾಧುನಿಕ ಫುಡ್‌ ಗ್ರೇಡ್‌ ಪ್ಲಾಸ್ಟಿಕ್‌ ಪೆಟ್‌ ಬಾಟಲ್‌ ಘಟಕ ತೆರೆಯಲಾಗುತ್ತಿದೆ. 150 ಕೋಟಿ ರೂ.ವೆಚ್ಚದಲ್ಲಿ ತಯಾರಾಗುತ್ತಿರುವ ಈ ಘಟಕದಲ್ಲಿ ನಿತ್ಯ 5 ಲಕ್ಷ ಬಾಟಲ್‌ಗ‌ಳು ತಯಾರಾಗಲಿವೆ. ಅಲ್ಲದೆ, ಇಲ್ಲಿ 20 ಸಾವಿರ ಲೀಟರ್‌ ಐಸ್‌ಕ್ರೀಂ ತಯಾರಿಕಾ ಘಟಕ ಕೂಡ ಸ್ಥಾಪಿಸಲಾಗಿದೆ.

ಸೈನಿಕರಿಗೆ ಗುಡ್‌ಲೈಫ್‌: ರಕ್ಷಣಾ ಇಲಾಖೆಯೊಂದಿಗೆ ಕೆಎಂಎಫ್‌ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ ಪ್ರತಿನಿತ್ಯ 18 ಸಾವಿರ ಲೀಟರ್‌ ನಂದಿನಿ ಗುಡ್‌ಲೈಫ್‌ (ಯುಎಚ್‌ಟಿ) ಹಾಲನ್ನು ಸಿಯಾಚಿನ್‌ ಹಾಗೂ ಕಾರ್ಗಿಲ್‌ ಗಡಿಯ ಸೈನಿಕರಿಗೆ ತಲುಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಲಿದೆ. ಅದೇ ರೀತಿ ಹಿಂದುಸ್ಥಾನ್‌ ಲೀವರ್‌ ಲಿ., ಅವರಿಗೆ 600 ಮೆಟ್ರಿಕ್‌ ಟನ್‌ ನಂದಿನಿ ಕೆನೆರಹಿತ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ 14 ಲಕ್ಷ ಕೆಜಿ ನಂದಿನಿ ತುಪ್ಪ ಸರಬರಾಜಿನ ಒಪ್ಪಂದವಾಗಿದ್ದು ಅದರ ಪ್ರಕಾರ ಮೊದಲ ಹೊರೆ ತುಪ್ಪ ಇಂದು ಕಳುಹಿಸಲಾಗಿದೆ.

ಬರಲಿರುವ ಉತ್ಪನ್ನಗಳು: ನಂದಿನಿ ಚೆಡ್ಡಾರ್‌ ಚೀಸ್‌, ಚೀಸ್‌ ಸ್ಲೆ$çಸಸ್‌, ಪ್ರೊಸೆಸ್ಸಡ್‌ ಚೀಸ್‌ ಮತ್ತಿತರ ರುಚಿಕರ ಚೀಸ್‌ಸ್‌ಪ್ರೈಡ್‌, ಮೊಜ್‌ಹಾರೆಲ್ಲಾ ಚೀಸ್‌ ಇತ್ಯಾದಿಗಳು ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿವೆ. ಈ ಸಂದರ್ಭದಲ್ಲಿ ಜಾಹಿರಾತು ವಿಭಾಗದ ಅಪರ ನಿರ್ದೇಶಕ ರಘುನಂದನ್‌ ಹಾಗೂ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.