ಕಥೆ ಇಷ್ಟವಾದರಷ್ಟೇ ರೀಮೇಕ್‌: ಶಿವಣ್ಣ

ಭಾವ ಕವಚ

Team Udayavani, Mar 29, 2019, 6:00 AM IST

28

“ಅಂಧನಾಗಿ ಪಾತ್ರ ಮಾಡುವಾಗ ಕಣ್ಣಿಲ್ಲದವರೇ ಗ್ರೇಟ್‌ ಅನಿಸಿ ಬಿಡ್ತು’
– ಹೀಗೆ ಹೇಳಿ ಒಂದು ಕ್ಷಣ ಮೌನವಾದರು ಶಿವರಾಜಕುಮಾರ್‌. ಅಂಧರ ಬಗ್ಗೆ ಶಿವಣ್ಣ ಮಾತನಾಡಲು ಕಾರಣ “ಕವಚ’ ಚಿತ್ರ. ಶಿವರಾಜಕುಮಾರ್‌ “ಕವಚ’ ಚಿತ್ರದಲ್ಲಿ ನಟಿಸಿರೋದು ನಿಮಗೆ ಗೊತ್ತೇ ಇದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಅವರು ಅಂಧನಾಗಿ ನಟಿಸಿದ್ದಾರೆ. ಈ ಪಾತ್ರ ಮಾಡುವಾಗ ಶಿವಣ್ಣ ತುಂಬಾ ಭಾವುಕರಾದರಂತೆ. “ಅಪ್ಪಾಜಿ ಹೋಗುವಾಗ ನೇತ್ರದಾನ ಮಹಾದಾನ ಅಂತಾ ಇಬ್ಬರಿಗೆ ಕಣ್ಣು ಕೊಟ್ಟು ಹೋದರು, ಆ ಎಮೋಶನ್‌, ಕಮಿಟ್‌ಮೆಂಟ್‌ ಈ ಪಾತ್ರದಲ್ಲಿದೆ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, “ಚಿತ್ರದಲ್ಲಿ ಮಗು ಪಾತ್ರ ಮಾಡಿರುವ ಮೀನಾಕ್ಷಿಯ ಅಭಿನಯವನ್ನೂ ನೋಡಿ ಕಲಿತಿದ್ದೀನಿ. ಎಲ್ಲರೂ ರಾಜಕುಮಾರ್‌, ರಜನೀಕಾಂತ್‌, ಅಮಿತಾಬಚ್ಚನ್‌ ಆಗಲಿಕ್ಕಾಗಲ್ಲ. 33 ವರ್ಷಗಳಿಂದ ಜನ ನನ್ನ ಸಿನಿಮಾ ನೋಡುತ್ತಿದ್ದರೂ, ಈಗಲೂ ನನ್ನ ಸಿನಿಮಾ ನೋಡಬೇಕು ಎಂದು ಬಯಸುತ್ತಾರಲ್ಲ ಅದೇ ನನ್ನ ಪುಣ್ಯ’ ಎಂದರು.

ಈ ಚಿತ್ರದಲ್ಲಿ ಅಂಧನ ಪಾತ್ರಕ್ಕಾಗಿ ಶಿವರಾಜಕುಮಾರ್‌ ಅವರಿಗೆ ಅಂಧರ ಶಾಲೆಯ ಶಿಕ್ಷಕರು 2-3 ದಿನ ಅಂಧರು ಸ್ಟಿಕ್‌ ಬಳಸುವುದು, ಕಣ್ಣು ಗುಡ್ಡೆ ಮೇಲೆ ಮಾಡುವುದನ್ನು ಹೇಳಿಕೊಟ್ಟರಂತೆ. “ಕಣ್ಣು ಗುಡ್ಡೆ ಮೇಲೆ ಮಾಡಿದಾಗ ಕೆಲವೊಮ್ಮೆ ತಲೆನೋವು ಬರುತ್ತಿತ್ತು. ಭಾವನೆಗಳ ಜೊತೆಗೆ ಎಷ್ಟರ ಮಟ್ಟಿಗೆ ಅಟ್ಯಾಚ್‌ಮೆಂಟ್‌ ಇರುತ್ತೆ ಅನ್ನುವ ಕಾರಣಕ್ಕಾಗಿ ಈ ಸಿನಿಮಾ ಒಪ್ಪಿಕೊಂಡೆ’ ಎಂದರು. “ತುಂಬಾ ವರ್ಷದಿಂದ ರಿಮೇಕ್‌ ಚಿತ್ರ ಮಾಡಿರಲಿಲ್ಲ. ಮಲಯಾಳಂನ ಮೋಹನ್‌ಲಾಲ್‌ ಚಿತ್ರ ಎಂಬ ಕಾರಣಕ್ಕೆ ಮಾಡಿದೆವು, ಚಿತ್ರದಲ್ಲಿನ ಎಲ್ಲ ಪಾತ್ರಗಳು ಚಿಕ್ಕದಾಗಿದ್ದರೂ ಸಿನಿಮಾಗೆ ಬೇಕು ಎಂಬ ಕಾರಣಕ್ಕೆ ಮಾಡಿಸಲಾಗಿದೆ. ಅಪಾರ್ಟ್‌ ಮೆಂಟ್‌ ಕೂಡ ಇಲ್ಲಿ ಪಾತ್ರವಾಗಿದೆ’ ಎಂದು ಹೇಳಿದರು. ಒಳ್ಳೆಯ ಸಿನಿಮಾ ಬಂದರೆ ಮುಂದೆ ಕೂಡ ರೀಮೇಕ್‌ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ. ಹಾಗೆಂದು ಅದನ್ನೇ ಮುಂದುವರೆಸುವುದಿಲ್ಲ ಎನ್ನುವುದು ಶಿವಣ್ಣ ಮಾತು.

ಹಾಡುಗಳ ಬಗ್ಗೆ ಮಾತನಾಡಿದ ಶಿವಣ್ಣ, “ಅರ್ಜುನ್‌ ಜನ್ಯ ಈ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದ ಚಿತ್ರಗಳೆಲ್ಲಾ ಯಶಸ್ಸಾಗಿದೆ. ಈ ಚಿತ್ರದಲ್ಲೂ ಕಣ್ಣೀರ ಒರೆಸೋಕೆ ಎಂಬ ಅದ್ಭುತವಾದ ಹಾಡೊಂದಿದೆ, ಅದನ್ನು ಮುಂದಿನ ವಾರ ಲಾಂಚ್‌ ಮಾಡುತ್ತೇವೆ’ ಎಂದು ಹೇಳಿದರು. ಚಿತ್ರ ಡಿಸೆಂಬರ್‌ನಲ್ಲೇ ಬಿಡುಗಡೆಯಾಗಬೇಕಿತ್ತು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಏ.5ರಂದು ಬೇವು-ಬೆಲ್ಲ ತಿನ್ನುವ ಯುಗಾದಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.

ನಟಿ ಕೃತಿಕ ಜಯಕುಮಾರ್‌ ಮಾತನಾಡಿ, “”ಕವಚ’ ಸಿನಿಮಾ ಭಾವನೆಗಳಿಗೆ ಹತ್ತಿರವಾಗಿದೆ. ಶಿವಣ್ಣ ಜೊತೆಗೆ ಸಿನಿಮಾ ಮಾಡುವ ಅವಕಾಶ ದೊರೆತಿದ್ದು, ನನ್ನ ಭಾಗ್ಯ. ಹೀಗಾಗಿ ಕವಚ ನನಗೆ ವಿಶೇಷ ಸಿನಿಮಾ ಎನಿಸಿದೆ ಎಂದು ಹೇಳಿದರು. ನಟ ವಸಿಷ್ಠ ಸಿಂಹ, ನಿರ್ದೇಶಕ ಜಿವಿಆರ್‌ ವಾಸು ಮಾತನಾಡಿದರು.

ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

ಇಂಡಿಯಾ ಒಕ್ಕೂಟಕ್ಕೆ ನಾಯಕರೂ ಇಲ್ಲ, ನೇತೃತ್ವವೂ ಇಲ್ಲ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.