ಮುಂಬೈ ನೆರವಿಗೆ ಯಾದವ್‌, ಪಾಂಡ್ಯ


Team Udayavani, Apr 4, 2019, 6:00 AM IST

c-11

ಮುಂಬಯಿ: ತವರಿನ “ವಾಂಖೇಡೆ ಸ್ಟೇಡಿಯಂ’ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್‌, ಬುಧವಾರದ ಐಪಿಎಲ್‌ ಹಣಾಹಣಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟಿಗೆ 170 ರನ್‌ ಗಳಿಸಿ ಸವಾಲೊಡ್ಡಿದೆ.

ಸೂರ್ಯಕುಮಾರ್‌ ಯಾದವ್‌ ಮತ್ತು ಕೃಣಾಲ್‌ ಪಾಂಡ್ಯ ಅವರ ಜವಾಬ್ದಾರಿಯುತ ಆಟ ಮುಂಬೈ ನೆರವಿಗೆ ಬಂತು. ಯಾದವ್‌ 43 ಎಸೆತಗಳಿಂದ ಸರ್ವಾಧಿಕ 59 ರನ್‌ ಬಾರಿಸಿದರು. ಇದರಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಕೃಣಾಲ್‌ 32 ಎಸೆತ ಎದುರಿಸಿ 42 ರನ್‌ ಹೊಡೆದರು. ಸಿಡಿಸಿದ್ದು 5 ಬೌಂಡರಿ ಹಾಗೂ ಒಂದು ಸಿಕ್ಸರ್‌.

ಡೆತ್‌ ಓವರ್‌ಗಳಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಕೈರನ್‌ ಪೊಲಾರ್ಡ್‌ ಸಿಡಿದು ನಿಂತಿದ್ದರಿಂದ ಮುಂಬೈ ಮೊತ್ತ 170ಕ್ಕೆ ಏರಿತು. ಇವರಿಬ್ಬರು ಸೇರಿಕೊಂಡು ಕೊನೆಯ 2 ಓವರ್‌ಗಳಲ್ಲಿ 45 ರನ್‌ ಸೂರೆಗೈದರು. ಹಾರ್ದಿಕ್‌ 8 ಎಸೆತಗಳಿಂದ 25 ರನ್‌ (1 ಬೌಂಡರಿ, 3 ಸಿಕ್ಸರ್‌) ಮತ್ತು ಪೊಲಾರ್ಡ್‌ 7 ಎಸೆತ ಎದುರಿಸಿ 17 ರನ್‌ ಬಾರಿಸಿದರು (2 ಸಿಕ್ಸರ್‌). ಬ್ರಾವೊ ಪಾಲಾದ ಅಂತಿಮ ಓವರಿನಲ್ಲಿ 29 ರನ್‌ ಸೋರಿ ಹೋಯಿತು!

ಕ್ವಿಂಟನ್‌ ಡಿ ಕಾಕ್‌ (4) ಮತ್ತು ನಾಯಕ ರೋಹಿತ್‌ ಶರ್ಮ (13) ಅವರಿಂದ ಮುಂಬೈ ನಿಧಾನ ಗತಿಯ ಆರಂಭ ಪಡೆಯಿತು. ಇಬ್ಬರೂ ಕುಂಟುತ್ತ ಆಡಿದ ಪರಿಣಾಮ 8ನೇ ಓವರ್‌ ಆರಂಭಕ್ಕೆ 2 ವಿಕೆಟಿಗೆ ಕೇವಲ 45 ರನ್‌ ಮಾಡಿತು. 9ನೇ ಓವರಿನಲ್ಲಿ 50 ರನ್‌ ಆದಾಗ ಯುವರಾಜ್‌ ಸಿಂಗ್‌ (4) ವಿಕೆಟ್‌ ಬಿತ್ತು.

ಈ ಹಂತದಲ್ಲಿ ಜತೆಗೂಡಿದ ಸೂರ್ಯಕುಮಾರ್‌ ಯಾದವ್‌ ಮತ್ತು ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಚೆನ್ನೈ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸತೊಡಗಿದರು. ಮುಂಬೈ ಸರದಿಯನ್ನೂ ಬೆಳೆಸತೊಡಗಿದರು. ಸ್ಕೋರ್‌ 112ರ ತನಕ ಏರಿತು. ಆಗ ಕೃಣಾಲ್‌ ವಿಕೆಟ್‌ ಹಾರಿಸಿದ ಮೋಹಿತ್‌ ಶರ್ಮ ಚೆನ್ನೈಗೆ ದೊಡ್ಡ ಬ್ರೇಕ್‌ ಒದಗಿಸಿದರು. ಚೆನ್ನೈ ಪರ ಶಾದೂìಲ್‌ ಠಾಕೂರ್‌ ಹೊರತುಪಡಿಸಿ ಉಳಿದವರೆಲ್ಲ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಜಾಧವ್‌ ಬಿ ಚಹರ್‌ 4
ರೋಹಿತ್‌ ಶರ್ಮ ಸಿ ಧೋನಿ ಬಿ ಜಡೇಜ 13
ಸೂರ್ಯಕುಮಾರ್‌ ಯಾದವ್‌ ಸಿ ಜಡೇಜ ಬಿ ಬ್ರಾವೊ 59
ಯುವರಾಜ್‌ ಸಿಂಗ್‌ ಸಿ ರಾಯುಡು ಬಿ ತಾಹಿರ್‌ 4
ಕೃಣಾಲ್‌ ಪಾಂಡ್ಯ ಸಿ ಜಡೇಜ ಬಿ ಮೋಹಿತ್‌ 42
ಹಾರ್ದಿಕ್‌ ಪಾಂಡ್ಯ ಔಟಾಗದೆ 25
ಕೈರನ್‌ ಪೊಲಾರ್ಡ್‌ ಔಟಾಗದೆ 17

ಇತರ 6
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 170
ವಿಕೆಟ್‌ ಪತನ: 1-8, 2-45, 3-50, 4-112, 5-125.

ಬೌಲಿಂಗ್‌:
ದೀಪಕ್‌ ಚಹರ್‌ 3-0-21-1
ಶಾರ್ದುಲ್‌ ಠಾಕೂರ್‌ 4-0-37-0
ಮೋಹಿತ್‌ ಶರ್ಮ 3-0-27-1
ಇಮ್ರಾನ್‌ ತಾಹಿರ್‌ 4-0-25-1
ರವೀಂದ್ರ ಜಡೇಜ 2-0-10-1
ಡ್ವೇನ್‌ ಬ್ರಾವೊ 4-0-49-1

ಟಾಪ್ ನ್ಯೂಸ್

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.