ವ್ಯಾಪಕ ಸಿದ್ಧತೆ; ತಪಾಸಣೆ, ಬಿಗಿ ಭದ್ರತೆ

ಎ. 13: ಮಂಗಳೂರಿಗೆ ಪ್ರಧಾನಿ ಮೋದಿ

Team Udayavani, Apr 11, 2019, 6:00 AM IST

1004mlr30

ಎಸ್‌ಪಿಜಿ ಉನ್ನತ ಅಧಿಕಾರಿಗಳು ಪ್ರಧಾನಿ ಮೋದಿ ಕಾರ್ಯಕ್ರಮ ನಡೆಯುವ ಸ್ಥಳ ಪರಿಶೀಲಿಸಿದರು.

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣ ಪ್ರಚಾರದ ಅಂಗವಾಗಿ ಎ. 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದು, ಭದ್ರತೆ ಸಂಬಂಧ ದ.ಕ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯಿಂದ ವ್ಯಾಪಕ ಸಿದ್ಧತೆ ನಡೆಸಲಾಗುತ್ತಿದೆ.

ಪ್ರಧಾನಿ ಭದ್ರತೆಯ ಉಸ್ತುವಾರಿ ವಹಿಸಿರುವ ಎಸ್‌ಪಿಜಿಯ ಉನ್ನತ ಅಧಿಕಾರಿಗಳು ಬುಧವಾರ ಬೆಳಗ್ಗೆ ಮೈದಾನದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೇಂದ್ರ ಮೈದಾನಕ್ಕೆ ಆಗಮಿಸುವ ರಸ್ತೆಯನ್ನು ಪೊಲೀಸ್‌ ಅಧಿಕಾರಿಗಳ ಜತೆಗೆ ವೀಕ್ಷಿಸಿದರು.

ಭದ್ರತೆಗೆ 1,472 ಪೊಲೀಸರು
5 ಎಸ್‌ಪಿ/ ಡಿಸಿಪಿ, 10 ಡಿವೈಎಸ್‌ಪಿ/ ಎಸಿಪಿ, 36 ಪಿಐಗಳು, 67 ಪಿಎಸ್‌ಐ, 147 ಎಎಸ್‌ಐ, 1207 ಎಚ್‌ಸಿ/ ಪಿಸಿ ಸೇರಿದಂತೆ ಒಟ್ಟು 1,472 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಯನ್ನು ನಿಯೋಜಿಸಲಾಗಿದೆ. 92 ಎಚ್‌ಐ, 5 ಕೆಎಸ್‌ಆರ್‌ಪಿ ತುಕಡಿ, 19 ಸಿಎಆರ್‌ ತುಕಡಿ ಮತ್ತು 2 ಸಿಆರ್‌ಪಿಎಫ್‌ ತುಕಡಿಗಳ ಅಧಿಕಾರಿ ಮತ್ತು ಸಿಬಂದಿ, 4 ಎಎಸ್‌ಸಿ ತಂಡ, 1 ಬಿಡಿಎಸ್‌ ತಂಡ, 30 ಡಿಎಫ್‌ಎಂಡಿ/ 30 ಎಚ್‌ಎಚ್‌ಎಂಡಿಯನ್ನು ಬಂದೋಬಸ್ತು ಕರ್ತವ್ಯದಲ್ಲಿ ಒಟ್ಟು 34 ಸೆಕ್ಟರ್‌ ಮೊಬೈಲ್‌ಗ‌ಳು ಹಾಗೂ 144 ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್‌ ಪಾಯಿಂಟ್‌ಗಳು ಕಾರ್ಯ ನಿರ್ವಹಿಸಲಿವೆ. ಸಿಸಿ ಕೆಮರಾ ಅಳವಡಿಸಲಾಗಿದೆ. ಹೊಟೇಲ್‌/ ಲಾಡ್ಜ್ ಗಳನ್ನು ತಪಾಸಣೆ ಮಾಡಲಾಗುತ್ತಿದೆ. ವಿಮಾನ, ರೈಲು ನಿಲ್ದಾಣಗಳಲ್ಲಿ ನಿಗಾ ಇಡಲಾಗಿದೆ.

ವಿಶೇಷ ಸೂಚನೆ
ಪ್ರಧಾನಿ ಸಂಚಾರ ಸಮಯದಲ್ಲಿ ಸಂಚಾರ ದಟ್ಟಣೆ ಗಮನಿಸಿ ವಾಹನಗಳನ್ನು ತಾತ್ಕಾಲಿಕವಾಗಿ ಬದಲಿ ದಾರಿಗಳಲ್ಲಿ ಕಳುಹಿಸಲಾಗುತ್ತದೆ. ಸಿಟಿ ಬಸ್‌ಗಳು, ಸರ್ವೀಸ್‌ ಬಸ್‌ಗಳು, ಸಿಸಿ ಬಸ್‌ಗಳು, ಅಂತರ್‌ ಜಿಲ್ಲಾ ಬಸ್‌ಗಳು ಎ. 13ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7ರ ವರೆಗೆ ಜ್ಯೋತಿ, ಮಂಗಳಾದೇವಿ ಮತ್ತು ನವಭಾರತ ಸರ್ಕಲ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಮರಳಲಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಂಪ್‌ವೆಲ್‌- ನಂತೂರು- ಕೆಪಿಟಿ- ಕುಂಟಿಕಾನದಿಂದ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ತಿರುಗಿಸಲಾಗಿದೆ.

ಎ. 13ರಂದು ಬೆಳಗ್ಗೆ 8 ಗಂಟೆಯಿಂದ ಪ್ರಧಾನಿ ನಿರ್ಗಮಿಸುವವರೆಗೆ ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದ ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳ
ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಸಂಚಾರ ಮಾರ್ಪಾಡು ಮಾಡಲಾಗಿದ್ದು, ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಲಾಗಿದೆ. ಉಡುಪಿ- ಮೂಲ್ಕಿ- ಸುರತ್ಕಲ್‌ ಮತ್ತು ಕಟೀಲು- ಬಜಪೆ- ಕಾವೂರು- ಕೂಳೂರು- ಕೊಟ್ಟಾರಚೌಕಿ ಮುಖಾಂತರ ಪ್ರವೇಶಿಸುವ ವಾಹನಗಳಿಗೆ (ಡ್ರಾಪಿಂಗ್‌ ಪಾಟಿಂಗ್‌- ನವಭಾರತ್‌ ಸರ್ಕಲ್‌) ಪಾರ್ಕಿಂಗ್‌ ಸ್ಥಳಗಳು: ಕರಾವಳಿ ಉತ್ಸವ ಮೈದಾನ, ಉರ್ವಾ ಮಾರ್ಕೆಟ್‌ ಗ್ರೌಂಡ್‌, ಲೇಡಿಹಿಲ್‌ ಚರ್ಚ್‌ ಗ್ರೌಂಡ್‌ ಮತ್ತು ಕೂಳೂರು ಗೋಲ್ಡ್‌ಫಿಂಚ್‌ ಸಿಟಿ ಗ್ರೌಂಡ್‌ಗಳು- ಬಸ್‌ಗಳು. ಮಣ್ಣಗುಡ್ಡೆ ಕೆನರಾ ಹೈಸ್ಕೂಲ್‌ ಮೈದಾನ- ಕಾರುಗಳು.

ಕಾರ್ಕಳ- ಮೂಡುಬಿದಿರೆ- ಸುಳ್ಯ- ಪುತ್ತೂರು-ಬೆಳ್ತಂಗಡಿ-ಬಂಟ್ವಾಳ- ಬಿ.ಸಿ. ರೋಡ್‌ನಿಂದ ನಂತೂರು ಮುಖಾಂತರ ಪ್ರವೇಶಿಸುವ ವಾಹನಗಳಿಗೆ (ಡ್ರಾಪಿಂಗ್‌ ಪಾಯಿಂಟ್‌- ಜ್ಯೋತಿ ಸರ್ಕಲ್‌) ಪಾರ್ಕಿಂಗ್‌ ಸ್ಥಳಗಳು: ಬಂಟ್ಸ್‌ ಹಾಸ್ಟೆಲ್‌ನ ರಾಮಕೃಷ್ಣ ಸ್ಕೂಲ್‌ ಗ್ರೌಂಡ್‌, ಮಲ್ಲಿಕಟ್ಟೆಯ ಕದ್ರಿ ಮೈದಾನ, ಪದವು ಹೈಸ್ಕೂಲ್‌ ಗ್ರೌಂಡ್‌ ಮತ್ತು ಆ್ಯಗ್ನೆಸ್‌ ಸ್ಕೂಲ್‌ ಗ್ರೌಂಡ್‌- ಬಸ್‌ಗಳು. ಬಲ್ಮಠದ ಶಾಂತಿನಿಲಯ ಗ್ರೌಂಡ್‌: ಕಾರುಗಳು.

ಉಳ್ಳಾಲ, ಕೊಣಾಜೆ, ದೇರಳಕಟ್ಟೆ, ಉಪ್ಪಳ, ಕಾಸರಗೋಡು ತೊಕ್ಕೊಟ್ಟಿನಿಂದ ಪಂಪ್‌ವೆಲ್‌- ಕಂಕನಾಡಿ- ಮಂಗಳಾದೇವಿ ಮುಖಾಂತರ ಪ್ರವೇಶಿಸುವ ವಾಹನಗಳಿಗೆ (ಡ್ರಾಪಿಂಗ್‌ ಪಾಯಿಂಟ್‌- ಮಂಗಳಾದೇವಿ) ಪಾರ್ಕಿಂಗ್‌ ಸ್ಥಳಗಳು: ಎಮ್ಮೆಕೆರೆ ಗ್ರೌಂಡ್‌ ಮತ್ತು ವಾಮನ ನಾಯ್ಕ ಗ್ರೌಂಡ್ಸ್‌, ನಂದಿಗುಡ್ಡೆ- ಬಸ್‌ಗಳು. ಮೋರ್ಗನ್‌ಗೆàಟ್‌ ಗ್ರೌಂಡ್ಸ್‌- ಕಾರುಗಳು.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.