ಎಲ್ಲೆಲ್ಲೂ ತಿವಿಮಾತು


Team Udayavani, Apr 11, 2019, 6:00 AM IST

g-35

ಲೋಕಸಭೆ ಚುನಾವಣ ಕಣ ರಂಗೇರುತ್ತಿದ್ದು, ಪ್ರಚಾರದ ಅಬ್ಬರವೂ ಜೋರಾಗಿದೆ. ರಾಜ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ ಅಲ್ಲಲ್ಲಿ ಪ್ರಚಾರ ನಡೆಸಿದ್ದರೆ, ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಾಕ್ಸಮರವನ್ನೇ ನಡೆಸಿದ್ದಾರೆ. ಇವೆಲ್ಲದರ ಝಲಕ್‌ ಇಲ್ಲಿದೆ.

ಇಷ್ಟೊಂದು ಸುಳ್ಳು ಏಕೆ?
ಏಕೆ ಅವರು (ರಾಹುಲ್‌) ಈ ಪರಿಯ ಸುಳ್ಳು ಹೇಳುತ್ತಿದ್ದಾರೆ?. ಆ ನಾಯಕರಿಗೆ ಅವರ ತಂದೆ ಮಾಡಿದ ಬೊಫೋರ್ಸ್‌ ಪಾಪದ ಹೊರೆಯ ನೆನಪಾಗಿರ ಬೇಕು. ಹೀಗಾಗಿಯೇ ಅವರು ಮತ್ತೂಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. 15 ವರ್ಷಗಳ ಬಳಿಕ ಅವರ ಪಕ್ಷದ ನಾಯಕರಿಗೆ ರಾಜ್ಯದ ಅಧಿಕಾರ ಸಿಕ್ಕಿದೆ. ಸರಕಾರ ರಚಿಸಿ ಕೆಲವೇ ಸಮಯವಾಗಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಅವರು ಎಷ್ಟೊಂದು ಪ್ರಮಾಣದ ಹಣ ಲೂಟಿ ಹೊಡೆದಿದ್ದಾರೆ ನೋಡಿ. ಇದು ತುಘಲಕ್‌ ರಸ್ತೆಗೆ ನಂಟು ಇರುವ ಹಗರಣ.
ನರೇಂದ್ರ ಮೋದಿ ಪ್ರಧಾನಮಂತ್ರಿ

ಮೋದಿಯಿಂದ 2 ಭಾರತ
ಮೋದಿ ಎರಡು ಭಾರತಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಒಂದು ನೀರವ್‌ ಮೋದಿ ಮತ್ತು ಅನಿಲ್‌ ಅಂಬಾನಿ ಅವರ ಭಾರತ. ಮತ್ತೂಂದು ಬಡ ರೈತರ‌ ಭಾರತ. ಮೋದಿ ಅವರು ಹಣವನ್ನೆಲ್ಲ ನೀರವ್‌ ಮೋದಿ, ಅನಿಲ್‌ ಅಂಬಾನಿಯಂಥವರ ಬ್ಯಾಂಕ್‌ ಅಕೌಂಟ್‌ಗೆ ಹಾಕುತ್ತಾರೆ. ನಾವು ಬಡವರು ಮತ್ತು ಪ್ರಾಮಾಣಿಕರ ಬ್ಯಾಂಕ್‌ ಅಕೌಂಟ್‌ ಗಳಿಗೆ 72 ಸಾವಿರ ರೂ. ಹಾಕುತ್ತೇವೆ. ಚೌಕಿದಾರ ಕಳ್ಳ ಎನ್ನುವುದು ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಸಾಬೀತಾಗಿದೆ. ಮಾತ್ರ  ವಲ್ಲ ಭ್ರಷ್ಟಾಚಾರ ನಡೆ ದಿದೆ ಎನ್ನುವುದನ್ನು ಕೋರ್ಟ್‌ ಕೂಡ ಸಮ್ಮತಿಸಿದಂತಾಗಿದೆ.
ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ

ಮೋದಿ ಮತ್ತೆ ಪ್ರಧಾನಿಯಾಗಲ್ಲ
ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. 60 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿರುವ ನನಗೆ ಯಾವ ಯಾವ ರಾಜ್ಯಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದು ಗೊತ್ತಿದೆ. ಕರ್ನಾಟಕದಲ್ಲಿ ರಾಹುಲ್‌ ಗೆಲ್ಲಲು ದೇವೇಗೌಡ ಬಿಡಲ್ಲ. ಅವರಿಗೆ ಒಕ್ಕಲಿಗರು ಓಟು ಹಾಕುವುದಿಲ್ಲ ಎಂದು ಕೇರಳಕ್ಕೆ ಕಳುಹಿಸಿದ್ದಾರೆಂದು ತಲೆಬುಡ ವಿಲ್ಲದ ಆರೋಪವನ್ನು ಮೋದಿ ಮಾಡಿದ್ದಾರೆ. ಆದರೆ ಒಕ್ಕಲಿಗರು ಚಿಕ್ಕಮಗಳೂರು ಕ್ಷೇತ್ರದಿಂದ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಗೆಲ್ಲಿ ಸಿಲ್ಲವೇ? ಬಳ್ಳಾರಿ ಯಿಂದ ಸೋನಿಯಾ ಅವ ರನ್ನು ಜನತೆ ಆರಿಸಿಲ್ಲವೇ?
ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಕಾರ್ಯಕರ್ತರ ಕೆರಳಿಸಬೇಡಿ
ಮಾಧ್ಯಮಗಳು ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿಲ್ಲ. ಬಿಜೆಪಿ ಮಾಡುವ ಕಾರ್ಯಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಇದರಿಂದ ಮಾಧ್ಯಮದವರ ಮೇಲೇನಾದರೂ ಹಲ್ಲೆ ನಡೆದರೆ ಅದಕ್ಕೆ ನನ್ನನ್ನು ಹೊಣೆ ಮಾಡಬೇಡಿ. ಸ್ಥಳೀಯ ಕಾರ್ಯಕರ್ತರನ್ನು ಕೆರಳಿಸುವಂತೆ ಸುದ್ದಿ ಮಾಡಬೇಡಿ. ಅವರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ. ಇದರಿಂದ ನಿಮ್ಮ ಮೇಲೇನಾದರೂ ಹಲ್ಲೆ ನಡೆದರೆ ಸಂಪಾದಕರನ್ನು ಪ್ರೇರೇಪಿಸಿ ನನ್ನ ಮೇಲೆ ಗೂಬೆ ಕೂರಿಸಬೇಡಿ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್‌ ಅಭ್ಯರ್ಥಿ ಪರವಾಗಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ

ಎಲ್ಲಿದೆ ಉದ್ಯೋಗ?
ಆಡಿದ ಮಾತನ್ನು ಉಳಿಸಿಕೊಳ್ಳುವ ಯೋಗ್ಯತೆ ಮೋದಿಗಿಲ್ಲ. ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂದು ಹೇಳಿ 15 ನಯಾಪೈಸೆ ಹಾಕಲಿಲ್ಲ. ಯುವಕರಿಗಾಗಿ ಕೋಟ್ಯಂತರ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ ಮೋದಿ, ಈಗ ಪಕೋಡ ಮಾರಿ ಎಂದು ಯುವಕರನ್ನು ಗೇಲಿ ಮಾಡಿದ್ದಾರೆ. ಮೋದಿ ಕೇವಲ ಸುಳ್ಳಿನ ಚೌಕಿದಾರ ಹೊರತು ಜನರ ಹಿತ ಕಾಯುವ ಕಾವಲುಗಾರರಲ್ಲ. ಬಿಜೆಪಿಗೆ ಸಾಮಾಜಿಕ ನ್ಯಾಯ, ಪ್ರಜಾತಂತ್ರ, ಸಂವಿಧಾನ ಬಗ್ಗೆ ಗೌರವವಿಲ್ಲ. ಅವರು ಮತ್ತೆ ಪ್ರಧಾನಿ ಆದರೆ ಸಂವಿಧಾನ ನಾಶವಾಗುತ್ತದೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಮೊಮ್ಮಕ್ಕಳ ಕಾಟ
ಇದುವರೆಗೂ ಅಪ್ಪ-ಮಕ್ಕಳು-ಸೊಸೆಯಂದಿರು ರಾಜಕೀಯ ಮಾಡುತ್ತಿದ್ದರು. ಈಗ ತಮ್ಮ ಮೊಮ್ಮಕ್ಕಳನ್ನು ಕಟ್ಟಿಕೊಂಡು ದೇವೇಗೌಡ ದಬ್ಟಾಳಿಕೆ ನಡೆಸುತ್ತಿದ್ದಾರೆ. ಇವರ ದೌರ್ಜನ್ಯವನ್ನು ಜಿಲ್ಲೆಯ ಜನತೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವ ಮೂಲಕ ಅಂತ್ಯ ಕಾಣಿಸಬೇಕಾಗಿದೆ. ಕಳೆದ ಹತ್ತು ತಿಂಗಳುಗಳಿಂದ ಸಮ್ಮಿಶ್ರ ಸರಕಾರ ಆಡಳಿತ ನಡೆ ಸುತ್ತಿದ್ದು ಅಭಿವೃದ್ಧಿ ಕಾಮಗಾರಿಗಳ ಕಡೆ ಗಮನ ಹರಿಸದೆ ವರ್ಗಾ ವಣೆ ದಂಧೆಯಲ್ಲಿ ತೊಡಗಿ ಲಕ್ಷಾಂ ತರ ರೂ. ಲೂಟಿ ಮಾಡುತಿದ್ದಾರೆ. ಇದುವರೆಗೂ ಯಾವ ರೈತರ ಸಾಲವನ್ನೂ ಮನ್ನಾ ಮಾಡಿಲ್ಲ.
ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.