ಇವಿಎಂ: ವಿಪಕ್ಷ ಹೋರಾಟ : ಮತಯಂತ್ರಗಳನ್ನು ಬಿಜೆಪಿ ಹ್ಯಾಕ್‌ ಮಾಡಿದೆ

Team Udayavani, Apr 15, 2019, 6:30 AM IST

evm

ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಮೇಲೆ ವಿಪಕ್ಷಗಳಿಗೆ ಮತ್ತೆ ಅನುಮಾನ ಹುಟ್ಟಿಕೊಂಡಿದೆ. ರವಿವಾರ ದಿಲ್ಲಿಯಲ್ಲಿ ಸಭೆ ಸೇರಿ ಚರ್ಚಿಸಿದ್ದು, ಇವಿಎಂ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಶೇ.50ರಷ್ಟು ಮತ ರಸೀದಿ ಗಳನ್ನು ಹೋಲಿಕೆ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಇನ್ನೊಮ್ಮೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿವೆ.

ರವಿವಾರ ದಿಲ್ಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಮ್‌ ಆದ್ಮಿ ಪಕ್ಷದ ಮುಖಂಡ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂ Ì ಸಹಿತ ವಿಪಕ್ಷಗಳ ಅನೇಕ ನಾಯಕರು ಉಪಸ್ಥಿತರಿದ್ದರು.

ಈ ಹಿಂದೆ ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ವಿಪಕ್ಷಗಳು ಭಾಗಶಃ ಯಶಸ್ಸು ಕಂಡಿದ್ದವು. ಪ್ರಸ್ತುತ ಚುನಾವಣ ಆಯೋಗ ಕೇವಲ ಒಂದು ವಿಧಾನಸಭೆ ಕ್ಷೇತ್ರಗಳಲ್ಲಿನ ಒಂದು ಮತಗಟ್ಟೆಯ ವಿವಿಪ್ಯಾಟ್‌ (ರಸೀದಿ) ಪರಿಶೀಲಿಸುತ್ತಿದ್ದು, ಅದರ ಪ್ರಮಾಣ ವನ್ನು ಹೆಚ್ಚಿಸುವಂತೆ
ಚುನಾ ವಣ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ವಾರದ ಹಿಂದಷ್ಟೇ ಸೂಚಿಸಿತ್ತು.

ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ ಎಂದು ವಿಪಕ್ಷಗಳು ಹೇಳಿವೆ.

ರಾಷ್ಟ್ರವ್ಯಾಪಿ ಅಭಿಯಾನ
ಮತ್ತೂಮ್ಮೆ ಸುಪ್ರೀಂಗೆ ಅರ್ಜಿ ಸಲ್ಲಿಸಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿಯೂ ಶೇ. 50ರಷ್ಟು ವಿವಿಪ್ಯಾಟ್‌ಗಳ ಮತಗಳನ್ನು ಇವಿಎಂನಲ್ಲಿನ ಮತಗಳೊಂದಿಗೆ ಹೋಲಿಕೆ ಮಾಡುವಂತೆ ಚುನಾವಣ ಆಯೋಗಕ್ಕೆ ಸೂಚಿಸ ಬೇಕೆಂದು ಕೋರುತ್ತೇವೆ. ಇವಿಎಂಗಳ ಲೋಪದ ಬಗ್ಗೆ ದೂರು ನೀಡಿದರೂ ಚುನಾವಣ ಆಯೋಗವು ನಿರ್ಲಕ್ಷಿಸುತ್ತಿದೆ. ನಾವು ಸುಮ್ಮನೆ ಕೂರುವುದಿಲ್ಲ. ವಿಪಕ್ಷಗಳು ಈ ವಿಚಾರವನ್ನೆತ್ತಿಕೊಂಡು ರಾಷ್ಟ್ರವ್ಯಾಪಿ ಅಭಿಯಾನ ಕೈಗೊಳ್ಳಲಿವೆ ಎಂದು ಕಾಂಗ್ರೆಸ್‌ ನಾಯಕ ಸಿಂ Ì ಹೇಳಿದ್ದಾರೆ.

ಆರೋಪಗಳ ಸುರಿಮಳೆ
ಆಂಧ್ರದಲ್ಲಿ ಒಂದು ಬೂತ್‌ನಲ್ಲಿ ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಒಂದೇ ಪಕ್ಷಕ್ಕೆ ಮತ ಬೀಳುತ್ತಿತ್ತು. ಬಿಜೆಪಿ ಇವಿಎಂಗಳನ್ನು ಹ್ಯಾಕ್‌ ಮಾಡಿದೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ದೇಶದ ಜನ ಇವಿಎಂ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸು ವಂತೆ ಮಾಡಿದೆ ಎಂದೂ ಹೇಳಿದ್ದಾರೆ. ವಿವಿಪ್ಯಾಟ್‌ ಡಿಸ್‌ಪ್ಲೇ 7 ಸೆಕೆಂಡ್‌ಗಳವರೆಗೆ ಮತ ಯಾರಿಗೆ ಹಾಕಿದ್ದಾರೆ ಎಂಬುದನ್ನು ತೋರಿಸಬೇಕು. ಆದರೆ ದೋಷಪೂರಿತ ಯಂತ್ರದಲ್ಲಿ 3 ಸೆಕೆಂಡ್‌ಮಾತ್ರವೇ ರಸೀದಿ ಕಾಣುತ್ತದೆ. ಶೇ. 20-25ರಷ್ಟು ಮತಯಂತ್ರಗಳು ಕೆಲಸ ಮಾಡುತ್ತಿಲ್ಲ. ಇಂಥ ದೋಷಪೂರಿತ ಇವಿಎಂ ಗಳಿಂದಾಗಿ ಜನ ಬೆಳಗಿನ ಜಾವ 4 ಗಂಟೆವರೆಗೂ ಮತ ಹಾಕ ಬೇಕಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಸೋಲನ್ನು ಒಪ್ಪಿಕೊಂಡ ವಿಪಕ್ಷಗಳು
ಇವಿಎಂ ಮೇಲೆ ಆರೋಪ ಹೊರಿಸುವ ಮೂಲಕ ವಿಪಕ್ಷಗಳು ತಮ್ಮ ಸೋಲಿಗೆ ನೆವ ಹುಡುಕಿವೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹ ರಾವ್‌ ವ್ಯಂಗ್ಯವಾಡಿದ್ದಾರೆೆ. ಈ ಚುನಾವಣೆಯಲ್ಲಿ ಬಿಜೆಪಿಯ ಎದುರು ಗೆಲ್ಲಲು ಸಾಧ್ಯವಾಗದೇ ಇರುವುದಷ್ಟೇ ಅಲ್ಲ, ವಿಪಕ್ಷವಾಗಿಯೂ ಅವರು ಸೋತಿದ್ದಾರೆ. ಬಹುತೇಕ ಪ್ರತ್ಯೇಕವಾಗಿ ಕಣಕ್ಕಿಳಿದಿರುವ ಈ ಪಕ್ಷಗಳಿಗೆ ಸೋಲುತ್ತೇವೆಂಬುದು ಖಚಿತವಾಗಿವೆ. ಅದಕ್ಕಾಗಿ ಹೀನಾಯ ಸೋಲಿಗೆ ಈ ಮೂಲಕ ನೆಪ ಹೇಳುತ್ತಿವೆ ಎಂದು ರಾವ್‌ ಟೀಕಿಸಿದ್ದಾರೆ.

ಆರೋಪಿಯನ್ನು ದೂರವಿಟ್ಟ ಆಯೋಗ
ಶನಿವಾರ ಚುನಾವಣ ಆಯೋಗವನ್ನು ಭೇಟಿ ಮಾಡಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ನಿಯೋಗದಲ್ಲಿ ಇವಿಎಂ ಕಳವು ಆರೋಪ ಹೊತ್ತಿರುವ ಸ್ವಯಂ ಘೋಷಿತ ತಾಂತ್ರಿಕ ಪರಿಣತರೊಬ್ಬರೂ ಇದ್ದುದಕ್ಕೆ ಚುನಾವಣ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಹರಿಪ್ರಸಾದ್‌ ವೇಮುರು ಎಂಬ ವ್ಯಕ್ತಿ 2011ರಲ್ಲಿ ಇವಿಎಂ ಹ್ಯಾಕ್‌ ಮಾಡಬಹುದು ಎಂಬುದನ್ನು ತೋರಿಸುವ ವೇಳೆ ಇವಿಎಂ ಕಳ್ಳತನ ಮಾಡಿದ್ದರು. ಅವರ ವಿರುದ್ಧ ಆಗ ದೂರು ದಾಖಲಾಗಿದೆ. ಹೀಗಾಗಿ ಅವರೊಂದಿಗೆ ಇವಿಎಂ ಸಮಸ್ಯೆಗಳ ಕುರಿತು ಚರ್ಚಿಸುವುದು ಸೂಕ್ತವಲ್ಲ ಎಂದು ಆಯೋಗ ಹೇಳಿದೆ. ಹೀಗಾಗಿ ಆರೋಪ ಇಲ್ಲದ ವ್ಯಕ್ತಿಯನ್ನು ಕಳುಹಿಸುವಂತೆ ಟಿಡಿಪಿಗೆ ಆಯೋಗ ಸೂಚಿಸಿದೆ. ಹರಿ ಪ್ರಸಾದ್‌ ಸದ್ಯ ಸಿಎಂ ನಾಯ್ಡುಗೆ ತಾಂತ್ರಿಕ ಸಲಹೆಗಾರರಾಗಿದ್ದಾರೆ. ಆಯೋಗದ ಸೂಚನೆಗೆ ತಿರುಗೇಟು ನೀಡಿರುವ ನಾಯ್ಡು, ನನ್ನ ಸಲಹೆಗಾರ ವೇಮುರು ಕಳ್ಳನಲ್ಲ, ಆತ ಮಾಹಿತಿದಾರ. 9 ವರ್ಷಗಳಲ್ಲಿ ಆತನ ವಿರುದ್ಧ ಯಾವುದೇ ಆರೋಪ ಪಟ್ಟಿ ದಾಖಲಾಗಿಲ್ಲ. 2011ರಲ್ಲಿ ದಿಲ್ಲಿಯಲ್ಲಿ ವಿವಿಪ್ಯಾಟ್‌ನ ಪ್ರಾಯೋಗಿಕ ಪರೀಕ್ಷೆಗೆ ವೇಮುರು ಅವರನ್ನು ಚುನಾವಣ ಆಯೋಗವೇ ದಿಲ್ಲಿಗೆ ಕರೆಸಿತ್ತು. ನನಗೂ ತಂತ್ರಜ್ಞಾನ ಗೊತ್ತಿದೆ. ನಾವು ತಂತ್ರಜ್ಞಾನದ ಮಾಸ್ಟರ್‌ಗಳಾಗಬೇಕೇ ವಿನಾ ಅದರ ಜೀತದಾಳು ಆಗಬಾರದು ಎಂದಿದ್ದಾರೆ.

ಟಾಪ್ ನ್ಯೂಸ್

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.