ದಕ್ಷಿಣ ಆಫ್ರಿಕಾ ತಂಡದಲ್ಲಿ ನೋರ್ಜೆ
ವಿಯಾನ್ ಮುಲ್ಡರ್, ರೀಝ ಹೆಂಡ್ರಿಕ್ಸ್ಗೆ ಜಾಗವಿಲ್ಲ
Team Udayavani, Apr 19, 2019, 9:36 AM IST
ಜೊಹಾನ್ಸ್ ಬರ್ಗ್: ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾ ವಳಿಗೆ ದಕ್ಷಿಣ ಆಫ್ರಿಕಾ ತಂಡ ಅಂತಿಮಗೊಂಡಿದೆ. ಸದ್ಯ ಗಾಯಾಳಾಗಿರುವ ವೇಗಿ ಅನ್ರಿಚ್ ನೋರ್ಜೆ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಲ್ರೌಂಡರ್ ವಿಯಾನ್ ಮುಲ್ಡರ್ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ರೀಝ ಹೆಂಡ್ರಿಕ್ಸ್ ಅವರನ್ನು ಕೈಬಿಡಲಾಗಿದೆ.
ಅನುಭವಿ ಬ್ಯಾಟ್ಸ್ಮನ್, ಆದರೆ ಇತ್ತೀಚೆಗೆ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಹಾಶಿಮ್ ಆಮ್ಲ ಮೇಲೆ ಆಯ್ಕೆ ಸಮಿತಿ ವಿಶ್ವಾಸವಿರಿಸಿದೆ. ಫೆಬ್ರವರಿ 2018ರಿಂದೀಚೆ ಆಮ್ಲ ಏಕದಿನದಲ್ಲಿ ಕೇವಲ 3 ಅರ್ಧ ಶತಕ ಹಾಗೂ ಒಂದು ಶತಕ ಹೊಡೆದಿದ್ದಾರೆ.
ತಂಡದ ಇಬ್ಬರು ಪ್ರಮುಖ ಆಲ್ರೌಂಡರ್ಗಳೆಂದರೆ ಆ್ಯಂಡಿಲ್ ಫೆಲುಕ್ವಾಯೊ ಮತ್ತು ಡ್ವೇನ್ ಪ್ರಿಟೋರಿಯಸ್. ವೇಗಿಗಳ ವಿಭಾಗದಲ್ಲಿ ರಬಾಡ, ಸ್ಟೇನ್ ಮತ್ತು ಎನ್ಗಿಡಿ ಇದ್ದಾರೆ.
ದಕ್ಷಿಣ ಆಫ್ರಿಕಾ ತಂಡ
ಫಾ ಡು ಪ್ಲೆಸಿಸ್ (ನಾಯಕ), ಜೆಪಿ ಡ್ಯುಮಿನಿ, ಡೇವಿಡ್ ಮಿಲ್ಲರ್, ಡೇಲ್ ಸ್ಟೇನ್, ಆ್ಯಂಡಿಲ್ ಫೆಲುಕ್ವಾಯೊ, ಇಮ್ರಾನ್ ತಾಹಿರ್, ಕಾಗಿಸೊ ರಬಾಡ, ಡ್ವೇನ್ ಪ್ರಿಟೋರಿಯಸ್, ಕ್ವಿಂಟನ್ ಡಿ ಕಾಕ್, ಅನ್ರಿಚ್ ನೋರ್ಜೆ, ಲುಂಗಿ ಎನ್ಗಿಡಿ, ಐಡನ್ ಮಾರ್ಕ್ರಮ್, ರಸ್ಸಿ ವಾನ್ ಡರ್ ಡುಸೆನ್, ಹಾಶಿಮ್ ಆಮ್ಲ, ತಬ್ರೈಜ್ ಶಂಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?