ಪ್ರಧಾನಿ ಮೋದಿ ಪೇಟಾ, ಶಾಲ್‌ ಮಂಗಳೂರಿಗೆ!

ಬಿಡ್‌ನ‌ಲ್ಲಿ ಖರೀದಿಸಿದ ಇಬ್ಬರು ಮಂಗಳೂರು ಮಹಿಳೆಯರು

Team Udayavani, Apr 23, 2019, 6:25 AM IST

modi-peta

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶ ಪ್ರವಾಸಗಳಲ್ಲಿ ದೊರೆತ ಉಡುಗೊರೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಿದ್ದು, ಎರಡು ಪೇಟಾ ಹಾಗೂ ಎರಡು ಶಾಲುಗಳು ಮಂಗಳೂರಿಗರ ಪಾಲಾಗಿದೆ.

ನಗರದ ಖಾಸಗಿ ಕಂಪೆನಿ ಉದ್ಯೋಗಿ ಕೊಡಿಯಾಲ್‌ ಬೈಲ್‌ನ ದೀಪಾ ಶೆಣೈ ಹಾಗೂ ಮಮತಾ ಶೆಣೈ ಪೇಟಾ ಮತ್ತು ಶಾಲುಗಳನ್ನು ಖರೀದಿಸಿದವರು. ಹರಾಜು ಪ್ರಕ್ರಿಯೆ ಬಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಗಮನಿಸಿ ಬಿಡ್‌ನ‌ಲ್ಲಿ ಭಾಗಿಯಾಗಿದ್ದರು. ಆ ರೀತಿ ಖರೀದಿಸಿರುವ ಪೇಟಾ ಹಾಗೂ ಬಾಂದನಿ ಶಾಲುಗಳು ದೀಪಾ ಮತ್ತು ಮಮತಾರ ಕೈ ಸೇರಿವೆೆ.

ದಿಲ್ಲಿಯ ಆರ್ಟ್‌ ಗ್ಯಾಲರಿಯಲ್ಲಿ ಜನವರಿ ಯಲ್ಲಿ ಉಡುಗೊರೆಯಾಗಿ ಸಿಕ್ಕ ಕಲಾಕೃತಿಗಳು, ವಾಸ್ತುಶಿಲ್ಪಗಳು, ಶಾಲು, ಜಾಕೆಟ್‌, ಸಂಗೀತ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಹರಾಜು ಹಾಕಲಾಗಿತ್ತು. ಆ ಬಳಿಕವೂ ಉಳಿದವುಗಳನ್ನು ಇ- ಹರಾಜು ಪ್ರಕ್ರಿಯೆ ಮೂಲಕ ಮಾರಲಾಗಿತ್ತು.

ಉದ್ದೇಶಕ್ಕೆ ಆಕರ್ಷಿತರಾದ ಮಹಿಳೆಯರು
ಹರಾಜಿನಿಂದ ಬಂದ ಹಣವನ್ನು ಗಂಗಾ ನದಿ ಸ್ವತ್ಛಗೊಳಿಸುವ ಕೇಂದ್ರ ಸರಕಾರದ ನವಾಮಿ ಗಂಗೆ ಯೋಜನೆಗೆ ಬಳಸುವ ಉದ್ದೇಶ ಅರಿತ ಮಮತಾ ಅವರು, ತಮ್ಮ ಸಹೋದ್ಯೋಗಿ ದೀಪಾ ಅವರಲ್ಲೂ ಹಂಚಿಕೊಂಡರು. ಬಳಿಕ ಇಬ್ಬರೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಹಲವು ವಸ್ತುಗಳಿಗೆ ಬಿಡ್‌ ಮಾಡಿದರೂ ಎಲ್ಲವುಗಳ ಬೆಲೆ ಸಾವಿರದಿಂದ ಲಕ್ಷದವರೆಗೆ ಏರಿತು. ಕೊನೆಗೆ ಇವರ ಕಣ್ಣಿಗೆ ಬಿದ್ದದ್ದು ಪೇಟಾ ಹಾಗೂ ಬಾಂದಿನಿ ಶಾಲು. ದೀಪಾ ಅವರು ಆಯ್ಕೆ ಮಾಡಿದ ಪೇಟಾದ ಮೂಲ ಬೆಲೆ 800 ರೂ. ಇತ್ತು. ಬಿಡ್ಡಿಂಗ್‌ ಆದ ಬಳಿಕ 1600 ಕ್ಕೆ ಏರಿತು. ಕೂಡಲೇ ದೀಪಾ ಅದನ್ನು ಖರೀದಿಸಿ ದರು. 200 ರೂ. ಕೊರಿಯರ್‌ ಚಾರ್ಜ್‌, 94 ರೂ. ವಿಮೆ ಎಲ್ಲವೂ ಸೇರಿ ಒಟ್ಟು 1894 ರೂ. ಗೆ ಪೇಟಾ ದೊರೆತಿದೆ. ಮಮತಾ ಅವರು ಎರಡು ಬಾಂದಿನಿ ಶಾಲು ಹಾಗೂ ಒಂದು ಪೇಟಾವನ್ನು ಸುಮಾರು 7,000 ರೂ. ಬೆಲೆ ಕೊಟ್ಟು ಖರೀದಿಸಿದರು. ಬಿಡ್‌ ಪ್ರಕ್ರಿಯೆ ಪೂರ್ಣಗೊಂಡ ತಿಂಗಳೊಳಗೆ ವಸ್ತುಗಳು ಇವರ ಕೈ ಸೇರಿವೆ. ಇದರೊಂದಿಗೆ ಶುಭಾಶಯ ಕೋರುವ ಸರ್ಟಿಫಿಕೇಟ್‌ನೂ° ನೀಡಲಾಗಿದೆ.

ಪೇಟಾದಿಂದ ದುಪ್ಪಟ್ಟಾ
ಹಲವು ಬಣ್ಣಗಳ ಮಿಶ್ರಿತ ಸುಮಾರು 8 ಮೀಟರ್‌ ಉದ್ದದ ಪೇಟಾವನ್ನು ಇಬ್ಬರೂ ಮೂರು ದುಪ್ಪಟ್ಟಾಗಳಾಗಿ ಮಾರ್ಪಡಿಸಿದ್ದಾರೆ. ಒಂದೆಡೆ ಮೋದಿ ಅವರು ಬಳಸಿದ ವಸ್ತು ಎಂಬ ಹೆಮ್ಮೆ. ಇನ್ನೊಂದೆಡೆ ಯಾವುದೇ ಬಣ್ಣದ ಕುರ್ತಾಗಳಿಗೆ ಒಪ್ಪುತ್ತದೆ ಎನ್ನುವ ಖುಷಿ ಎನ್ನುತ್ತಾರೆ ಅವರಿಬ್ಬರೂ.

ಗಂಗಾ ನದಿ ಸ್ವತ್ಛತೆಗೆ ಹಣ ಕೊಟ್ಟ ತೃಪ್ತಿ
ಪತ್ರಿಕೆಯಲ್ಲಿ ಆನ್‌ಲೈನ್‌ ಪ್ರಕ್ರಿಯೆ ಮೂಲಕ ಪ್ರಧಾನಿ ಮೋದಿ ಅವರ ವಸ್ತುಗಳು ಮಾರಾಟಕ್ಕಿವೆ ಎಂಬುದು ತಿಳಿದ ತತ್‌ಕ್ಷಣ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಪೇಟಾ, ಶಾಲು ಖರೀದಿಸಿದೆವು. ಗಂಗಾನದಿ ಸ್ವತ್ಛತೆಗೆ ಹಣ ನೀಡಿದ ತೃಪ್ತಿ ಇದೆ.
– ಮಮತಾ ಶೆಣೈ, ಮಂಗಳೂರು

ಸಮಾವೇಶಕ್ಕೆ ಅದೇ ಶಾಲು ಧಾರಣೆ
ಮೋದಿ ಅವರ ಉದ್ದೇಶವೇ ಇಷ್ಟವಾಗಿ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಪೇಟಾ ಖರೀದಿಸಿದೆ. ಅದನ್ನು ಶಾಲು ಮಾಡಿ ಧರಿಸಿ. ಎ. 13 ರಂದು ನಡೆದ ಮೋದಿ ಸಮಾವೇಶದಲ್ಲಿ ಭಾಗವಹಿಸಿದ್ದೆವು.
– ದೀಪಾ ಶೆಣೈ, ಮಂಗಳೂರು

  • ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.