ಐಎಸ್ಎಸ್ಎಫ್ ವಿಶ್ವಕಪ್: ಭಾರತಕ್ಕೆ ಅಗ್ರಸ್ಥಾನ
Team Udayavani, Apr 29, 2019, 12:11 PM IST
ಬೀಜಿಂಗ್: ಭಾರತೀಯ ಶೂಟರ್ಗಳು 3 ಚಿನ್ನ, ಒಂದು ಬೆಳ್ಳಿ ಸೇರಿದಂತೆ ಒಟ್ಟು 4 ಪದಕ ಗೆದ್ದು ಅಗ್ರಸ್ಥಾನದೊಂದಿಗೆ “ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್’ ಕೂಟವನ್ನು ಮುಗಿಸಿದ್ದಾರೆ.
ದಿವ್ಯಾಂಶ್ ಪನ್ವಾರ್ ಮತ್ತು ಅಂಜುಮ್ ಮೌದ್ಗಿಲ್ 10 ಮೀ. ಏರ್ ರೈಫಲ್ ಮಿಕ್ಸೆಡ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಅನಂತರ ಯುವ ಶೂಟರ್ಗಳಾದ ಮನು ಬಾಕರ್-ಸೌರಭ್ ಚೌಧರಿ ಜೋಡಿ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.
ಶುಕ್ರವಾರದ ಸ್ಪರ್ಧೆಯಲ್ಲಿ 17 ವರ್ಷದ ಶೂಟರ್ ದಿವ್ಯಾಂಶ್ 10 ಮೀ. ಏರ್ ರೈಫಲ್ನಲ್ಲಿ ಬೆಳ್ಳಿ ಪದಕ ಗೆದ್ದು ಒಲಿಂಪಿಕ್ ಕೋಟಾ ಸಂಪಾದಿಸಿದರೆ, ಶನಿವಾರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಅಭಿಷೇಕ್ ವರ್ಮ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಭಾರತಕ್ಕೆ 2ನೇ ಒಲಿಂಪಿಕ್ ಕೋಟಾ ದೊರಕಿಸಿಕೊಟ್ಟರು.
ಅಗ್ರಸ್ಥಾನದಲ್ಲಿ ಭಾರತ
3 ಚಿನ್ನ, ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. 2 ಚಿನ್ನ, 2 ಬೆಳ್ಳಿ, ಒಂದು ಕಂಚು ಜಯಿಸಿರುವ ಚೀನ ದ್ವಿತೀಯ ಸ್ಥಾನಿಯಾಗಿದೆ. ಒಂದು ಚಿನ್ನ, 3 ಬೆಳ್ಳಿ, 3 ಕಂಚು ಗೆದ್ದಿರುವ ರಶ್ಯ 3ನೇ ಸ್ಥಾನ ಪಡೆದಿದೆ.
ಪದಕ ರಹಿತ ಕೊನೆ ದಿನ
ಕೂಟದ ಕೊನೆಯ ದಿನವಾದ ರವಿವಾರ ಭಾರತಕ್ಕೆ ಯಾವುದೇ ಪದಕ ಒಲಿಯಲಿಲ್ಲ. ಒಲಿಂಪಿಕ್ ಕೋಟಾ ಕೂಡ ಸಿಗಲಿಲ್ಲ. ಭಾರತೀಯ ಶೂಟರ್ಗಳು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು. ವನಿತೆಯರ 50 ಮೀ. ರೈಫಲ್ 3ಪಿ ಸ್ಪರ್ಧೆಯಲ್ಲಿ ಗಾಯತ್ರಿ, ಸುನಿಧಿ ಚೌಹಾಣ್ ಮತ್ತು ಕಾಜಲ್ ಸೈನಿ; 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್, ರಾಹಿ ಸನೊìಬತ್ ಮತ್ತು ಚಿಂಕಿ ಯಾದವ್ ಫೈನಲ್ ಪ್ರವೇಶಿಸುವಲ್ಲಿ ಎಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ