ಯೇತಿ ಹೆಜ್ಜೆ ಗುರುತು! ಭಾರತೀಯ ಸೇನೆಯಿಂದ ಬಹಿರಂಗ
Team Udayavani, May 1, 2019, 6:00 AM IST
ಹೊಸದಿಲ್ಲಿ: ಜನಸಾಮಾನ್ಯರಿಗೆ, ವಿಜ್ಞಾನಿಗಳಿಗೆ ದಶಕಗಳಿಂದ ನಿಗೂಢವಾಗಿರುವ “ಯೇತಿ’ (ಮಾನವನನ್ನು ಹೋಲುವ ದೈತ್ಯ ಜೀವಿ) ಹೆಜ್ಜೆಯ ಗುರುತೊಂದು ಪತ್ತೆಯಾಗಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ.
ನೇಪಾಲದ ಮಕಾಲು ಬೇಸ್ ಕ್ಯಾಂಪ್ನಲ್ಲಿದ್ದ ಭಾರತೀಯ ಸೇನೆಯ ಪರ್ವತಾರೋಹಿಗಳುಳ್ಳ ತಂಡವೊಂದಕ್ಕೆ ಎ. 9ರಂದು ಈ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಪ್ರತಿ ಗುರುತು 32 ಇಂಚು ಉದ್ದ ಹಾಗೂ 15 ಇಂಚು ಅಗಲವಿದೆ ಎಂದು ಭಾರತೀಯ ಸೇನೆ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಜತೆಗೆ ಆ ಗುರುತುಗಳ ಚಿತ್ರವನ್ನೂ ಪ್ರಕಟಿಸಿದೆ.
ಹಿಮಾಚ್ಛಾದಿತ ಪ್ರದೇಶಗಳಲ್ಲಿ ಮನುಷ್ಯನನ್ನು ಹೋಲುವ ದೈತ್ಯಾಕಾರದ ದ್ವಿಪಾದಿ ಪ್ರಾಣಿಯೊಂದು ಹಲವರಿಗೆ ಕಾಣಿಸಿ ಕೊಂಡಿರುವ ಬಗ್ಗೆ ಹಲವಾರು ವದಂತಿಗಳು ದಶಕಗಳಿಂದ ಚಾಲ್ತಿಯಲ್ಲಿದೆ. ಆದರೆ ಸೂಕ್ತ ಫೋಟೋ, ವೀಡಿಯೋಗಳಂಥ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ.
ಟ್ವಿಟರ್ನಲ್ಲಿ ಟೀಕೆ: ಭಾರತೀಯ ಸೇನೆಯು ಮಾಡಿರುವ ಯೇತಿ ಕುರಿತಾದ ಟ್ವೀಟ್, ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಚುನಾವಣ ಪರ್ವದಲ್ಲಿರುವ ಭಾರತದಲ್ಲಿ ಇದು ಸಾಮಾಜಿಕ ಜಾಲತಾಣದಲ್ಲಿ ಟೀಕಾಸ್ತ್ರವಾಗಿ ಪ್ರಯೋಗವಾಗಿದೆ. ಇದನ್ನು ಪ್ರಧಾನಿ ಮೋದಿ ವಿರುದ್ಧದ ಟೀಕೆಗೆ ಬಳಸಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಅಖೀಲೇಶ್ ಯಾದವ್, “ಮೋದಿಯವರ ಅಚ್ಛೇದಿನ್ಗಳು ಯೇತಿಗಿಂತಲೂ ನಿಗೂಢವಾಗಿವೆ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ