ಫೇಸ್ಬುಕ್ ಪರಿಚಯ: ವೈದ್ಯರಿಗೆ ಪಂಗನಾಮ ಹಾಕಿದ “ವೈದ್ಯೆ’!
Team Udayavani, May 3, 2019, 10:29 AM IST
ಸಾಂದರ್ಭಿಕ ಚಿತ್ರ
ಉಡುಪಿ: ಫೇಸ್ಬುಕ್ನಲ್ಲಿ ಪರಿಚಯವಾದ “ವೈದ್ಯೆ’ಗೆ ಹಣ ನೀಡಿ ವೈದ್ಯರೋರ್ವರು ವಂಚನೆಗೊಳಗಾಗಿದ್ದಾರೆ.
ಬ್ರಹ್ಮಾವರ ಹಂದಾಡಿಯ ಡಾ| ಪ್ರವೀಣ್ ಕುಮಾರ್(43)ಗೆ ಫೇಸ್ಬುಕ್ನಲ್ಲಿ ಲಂಡನ್ನ ಕಮಿಲ್ಲಾ ಗಂಪಿ ಎಂದು ಪರಿಚಯಿಸಿಕೊಂಡಿದ್ದ ಮಹಿಳೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ತನ್ನನ್ನು ವೈದ್ಯೆ ಎಂದು ಪರಿಚಿಯಿಸಿಕೊಂಡಿದ್ದರು. ಹಾಗಾಗಿ ಪ್ರವೀಣ್ ಕುಮಾರ್ ಫ್ರೆಂಡ್ಶಿಪ್ ರಿಕ್ವೆಸ್ಟ್ ಸ್ವೀಕರಿಸಿದ್ದರು. ಎ.30ರಂದು ಕರೆ ಮಾಡಿದ್ದ ಆ ಮಹಿಳೆ “ನಾನು ದಿಲ್ಲಿ ಏರ್ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳಿಂದ ತೊಂದರೆ ಗೊಳಗಾಗಿದ್ದು, ತುರ್ತು 2 ಲ.ರೂ. ಬೇಕು. ನನ್ನಲ್ಲಿ ಪೌಂಡ್ಸ್ ಇದೆ. ಆದರೆ ಅಧಿಕಾರಿಗಳು ಅದನ್ನು ಸ್ವೀಕರಿಸುತ್ತಿಲ್ಲ. ನನಗೆ ಭಾರತೀಯ ರೂಪಾಯಿ 2 ಲ.ರೂ. ಬೇಕು’ ಎಂದು ವಿಂತಿಸಿದರು.
ಇದನ್ನು ನಂಬಿದ ಪ್ರವೀಣ್ ಕುಮಾರ್ ಸಿಂಡಿಕೇಟ್ ಬ್ಯಾಂಕ್ ಮೊಬೈಲ್ ಆ್ಯಪ್ ಮೂಲಕ 50,000 ರೂ. ಕಳುಹಿಸಿಕೊಟ್ಟರು. ಉಳಿದ 1, 45,700 ರೂ.ಗಳನ್ನು ಆರ್ಟಿಜಿಎಸ್ ಮೂಲಕ ವರ್ಗಾಯಿಸಿದರು. ಅನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಪ್ರವೀಣ್ ಕುಮಾರ್ ಅವರು ಉಡುಪಿ ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ