ಮೈಸೂರಿನಲ್ಲಿ ನೂರಕ್ಕೆ ನೂರರಷ್ಟು ಗೆಲುವು ನಮ್ದೇ : ಸಿದ್ದರಾಮಯ್ಯ
ಮಂಡ್ಯದಲ್ಲಿ ಜೆಡಿಎಸ್ ಗೆಲುವು ಖಚಿತ
Team Udayavani, May 5, 2019, 5:28 PM IST
ಮೈಸೂರು:ಈ ಬಾರಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಮಯ್ಯ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಜಿ.ಟಿ .ದೇವೇಗೌಡ ಅವರು ನಿಜ ಹೇಳಿದ್ದಾರೆ. ಉದ್ಭೂರಿನಲ್ಲಿ ಜೆಡಿಎಸ್ನವರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ,ಆದರೆ ಅದು ಇಡೀ ಕ್ಷೇತ್ರಕೆ ಅನ್ವಯಿಸುವುದಿಲ್ಲ ಎಂದರು.
ಇದೇ ವೇಳೆ ಸುಮಲತಾ ಕರೆದ ಡಿನ್ನರ್ಗೆ ತೆರಳಿದವರ ಮೇಲೆ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿದಾಗ , ಊಟಕ್ಕೆ ಹೋದವರನ್ನು ಪ್ರಶ್ನಿಸುವುದಕ್ಕೆ ಆಗುತ್ತಾ, ಆ ವಿಚಾರವೆಲ್ಲಾ ಮಾತಾಡೋಕೆ ಆಗುತ್ತಾ ಎಂದರು.
ಮಂಡ್ಯದಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲುವು ಖಚಿತ ಎಂದರು.