ಬರವಣಿಗೆಗೆ ದಿಗ್ಬಂಧನ ಹಾಕಲಾಗದು

Team Udayavani, May 14, 2019, 2:50 PM IST

hav-6

ಹಾನಗಲ್ಲ: ಈಗ ಮಹಿಳಾ ಸಾಹಿತ್ಯವೇ ಕನ್ನಡ ಸಾಹಿತ್ಯವನ್ನು ಆಳುತ್ತಿದೆ ಎನ್ನುವಷ್ಟರ ಮಟ್ಟಿಗೆ ಮಹಿಳಾ ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಸೋಮವಾರ ಹಾಗನಲ್ಲಿನಲ್ಲಿ ಕವಿವೃಕ್ಷ ಬಳಗ, ಸೃಜನಶೀಲ ಕನ್ನಡ ಸಾಹಿತ್ಯ ಬಳಗ, ಸ್ಪಂದನ ಮಹಿಳಾ ಮಂಡಳ, ಸ್ನೇಹಾ ಮಹಿಳಾ ಮಂಡಳ ಸರಸ್ವತಿ ಮಹಿಳಾ ಮಂಡಳಗಳ ಆಶ್ರಯದಲ್ಲಿ ಪಾರ್ವತಿಬಾಯಿ ಕಾಶೀಕರ ಅವರ ‘ಅಂತರಂಗದ ಅಲೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕವಿಗೆ ತನ್ನ ಬರವಣಿಗೆ ಮೇಲೆ ನಂಬಿಕೆ ಇರಬೇಕು. ಸಂವೇದನೆಗಳನ್ನು ಅಭಿವ್ಯಕ್ತಿಸುವ ಸೃಜನಶೀಲತೆ ಬೇಕು. ಬರವಣಿಗೆಗೆ ಯಾರೂ ದಿಗ್ಬಂಧನ ಹಾಕಲು ಸಾಧ್ಯವಿಲ್ಲ. ಸದಾ ಬರಹಕ್ಕೆ ಮನಸ್ಸನ್ನು ಒಡ್ಡಿಕೊಳ್ಳಬೇಕು ಎಂದ ಅವರು, ಹಾನಗಲ್ಲು ಪುಸ್ತಕ ಸಾಹಿತ್ಯ ಸಂಸ್ಕೃತಿಯನ್ನು ಜೀವಂತವಾಗಿರಿಸಿದ ಸೃಜನಶೀಲ ಸಾಹಿತ್ಯದ ನಾಡಾಗಿದೆ ಎಂದರು.

ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ‘ಅಂತರಂಗದ ಅಲೆ’ ಕೃತಿ ವಿಮರ್ಶಿಸಿ ಮಾತನಾಡಿ, ಪಾರ್ವತಿಬಾಯಿ ಕಾಶೀಕರ ಅವರ ಕಾವ್ಯ ಹಿತಮಿತ ಮೃದುವಚನವಿದ್ದಂತೆ. ವಾಸ್ತವಕ್ಕೆ ಹತ್ತಿರವಾಗಿ ತೆರೆದುಕೊಂಡ ಬೋಧಪ್ರದ ಪದ್ಯಗಳಾಗಿವೆ. ಕಾವ್ಯದಲ್ಲೆಲ್ಲೂ ಅಹಂಭಾವ, ಆಕ್ರೋಶಗಳಿಲ್ಲ. ಸಂಪ್ರದಾಯಸ್ಥ ಧಾರ್ಮಿಕ ಆಚಾರದ ಕುಟುಂಬದಲ್ಲಿ ಬೆಳೆದ ಇವರು ಮಾನವೀಯ ನೆಲೆಯಲ್ಲಿ ಎಲ್ಲವನ್ನು ಕಾಣಬಯಸಿದ ಭರವಸೆಯ ಲೇಖಕಿ ಎಂದರು.

ಹಿರಿಯ ಕವಿ ಗಂಗಾಧರ ನಂದಿ ಮಾತನಾಡಿ, ಸಾಹಿತಿಗಳ ಕೃತಿಗಳು ವಿಮರ್ಶೆಗೊಳಗಾಗಬೇಕು. ಕವಿತೆ ಜಾಳವಾದರೆ ಧ್ವನಿ ಕ್ಷೀಣಗೊಳ್ಳುತ್ತದೆ. ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ಮೊದಲು ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಬೇಕಾಗಿದೆ. ಇದು ಯಾರೊಬ್ಬರ ಪ್ರಯತ್ನವಲ್ಲ. ಸಾಮೂಹಿಕ ಜವಾಬ್ದಾರಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಉದಯ ನಾಸಿಕ, ಹಾನಗಲ್ಲಿನ ಸಾಂಸ್ಕೃತಿಕ ವೈಭವ ಪುನರುತ್ಥಾನವಾಗಬೇಕು. ಇಲ್ಲಿನ ಸಾಹಿತ್ಯ ಸಂಸ್ಕೃತಿಗೆ ಹೊಸ ಚೇತನ ನೀಡಬೇಕು. ಪಾರ್ವತಿಬಾಯಿ ಕಾಶೀಕರ ಅವರ ಕಾವ್ಯದಲ್ಲಿ ಪಂಡಿತ ಕುಟುಂಬದೊಳಗಿಂದ ಹತ್ತು ಹಲವು ಸಾಮಾಜಿಕ ನ್ಯಾಯಗಳನ್ನು ಕಟ್ಟಿಟ್ಟಿದ್ದಾರೆ. ಸಮಾಜವನ್ನು ಮುಕ್ತವಾಗಿ ನೋಡಿದ ಅವರಿಗೆ ಇದು ಸಾಧ್ಯವಾಗಿದೆ ಎಂದರು.

ಕವಯತ್ರಿ ಪಾರ್ವತಿಬಾಯಿ ಕಾಶೀಕರ ವೇದಿಕೆಯಲ್ಲಿದ್ದರು. ಸರಸ್ವತಿ ಮಹಿಳಾ ಮಂಡಳದ ಗೌರವಾಧ್ಯಕ್ಷೆ ನೀಲಮ್ಮತಾಯಿ ಉದಾಸಿ, ಕವಿವೃಕ್ಷ ಬಳಗದ ರಾಜ್ಯಾಧ್ಯಕ್ಷ ಪ್ರೊ| ವೀರೇಶ ಹಿತ್ತಲಮನಿ, ಶಂಕರಶಾಸ್ತ್ರಿ ಕಾಶಿಕರ, ಸೃಜನಶೀಲ ಬಳಗದ ಜಿಲ್ಲಾಧ್ಯಕ್ಷ ಸಂತೋಷ ಬಿದರಗಡ್ಡಿ, ವಿಶ್ರಾಂತ ಪ್ರಾಚಾರ್ಯ ಎಲ್.ಎಂ.ದೇಸಾಯಿ, ಮುಖ್ಯೋಪಾಧ್ಯಾಯ ಕೆ.ಕೆ. ರೂಪಶ್ರೀ, ಮಧುಮತಿ ಪೂಜಾರ, ಸುಧಾಬಾಯಿ ದೇಶಪಾಂಡೆ, ನಂದೀಶ ಲಮಾಣಿ, ದಾವಲ್ಮಲಿಕ್‌ ಇಂಗಳಕಿ ಅತಿಥಿಗಳಾಗಿದ್ದರು.

ಗಣ್ಯರಾದ ಪ್ರಾಚಾರ್ಯ ಅನಿತಾ ಹೊಸಮನಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ, ಪ್ರೊ| ನಾಗರಾಜ ಧಾರೇಶ್ವರ, ಕೆ.ಎಲ್.ದೇಶಪಾಂಡೆ, ಘನಶ್ಯಾಮ ದೆಶಪಾಂಡೆ, ಗಂಗಾಧರಶಾಸ್ತ್ರೀ ಕಾಶೀಕರ, ವಿ.ಜಿ.ಶಾಂತಪೂರಮಠ, ಬದರಿನಾಥ ಕುಲಕರ್ಣಿ, ಮಹೇಶ ಕಾಗಿನೆಲ್ಲಿ, ಶಾರದಾ ಉದಾಶಿ, ವಿಜಯಕ್ಕ ಗುಡಗುಡಿ, ಪುಷ್ಪಾ ಬಸ್ತಿ, ಸುಶಿಲಕ್ಕ ಕುಲಕರ್ಣಿ, ಬನುತಾಯಿ ಚಿನ್ನಮುಳಗುಂದ, ವಾರುಣಿ ದೇಶಪಾಂಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಾರ್ವತಿಬಾಯಿ ಕಾಶೀಕರ ಅವರ ಪದ್ಯಗಳನ್ನು ಕಲಾವಿದರಾದ ಅಕ್ಕಮ್ಮ ಸುಗಾವಿ, ಛಾಯಾ ದೇಶಪಾಂಡೆ, ದಮಯಂತಿ ದೇಶಪಾಂಡೆ, ಲೀಲಾ ಭಟ್ ವಿದ್ಯಾ ಕಾಶೀಕರ ಹಾಡಿದರು.

ಟಾಪ್ ನ್ಯೂಸ್

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.