ಆಸ್ಟ್ರೇಲಿಯಾಗೆ ಮತ್ತೆ ಸ್ಕಾಟ್ ಮಾರಿಸನ್ ಪ್ರಧಾನಮಂತ್ರಿ
Team Udayavani, May 19, 2019, 6:00 AM IST
ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಯಲ್ಲಿ ನಿರೀಕ್ಷೆಯನ್ನೂ ಮೀರಿ ಹಾಲಿ ಪ್ರಧಾನಿ ಸ್ಕಾಟ್ ಮಾರಿಸನ್ ಗೆಲುವು ಸಾಧಿಸಿದ್ದು, ಮತ್ತೂಮ್ಮೆ ಅಧಿಕಾರಕ್ಕೇರಿದ್ದಾರೆ. ವಿಪಕ್ಷ ಲೇಬರ್ ಪಾರ್ಟಿಯ ಮುಖ್ಯಸ್ಥ ಬಿಲ್ ಶಾರ್ಟನ್ ಸೋಲಿನ ಹೊಣೆ ಹೊತ್ತು, ಹುದ್ದೆಗೆ ರಾಜೀ ನಾಮೆ ನೀಡಿದ್ದಾರೆ. ಇದು ಅತ್ಯಂತ ಅಚ್ಚರಿಯ ನಿರ್ಧಾರ ಎಂದು ಸ್ಕಾಟ್ ಮಾರಿಸನ್ ಹೇಳಿಕೆ ನೀಡಿದ್ದಾರೆ. ಅಲ್ಲದೆ, ರಾಜಕೀಯ ವಿಶ್ಲೇಷಕರೂ ಕೂಡ ಸ್ಕಾಟ್ ಮಾರಿಸನ್ ಮತ್ತೂಮ್ಮೆ ಗೆಲುವು ಸಾಧಿಸುವುದು ಅನುಮಾನ ಎಂದೇ ಊಹಿಸಿದ್ದರು. ಶನಿವಾರ ಸಂಜೆ ಶೇ.70 ಮತ ಎಣಿಕೆ ನಡೆ ದಿದ್ದು, ಬಹುಮತಕ್ಕೆ ಅಗತ್ಯ ಸ್ಥಾನಗಳಲ್ಲಿ ಮಾರಿಸನ್ ಲಿಬರಲ್ ಮೈತ್ರಿಕೂಟ ಮುಂಚೂಣಿಯಲ್ಲಿರುವುದು ಕಂಡುಬಂದಿದೆ.