ಸಿಖ್ಬರ ಕೃಪಾಣ್‌ ಬಳಕೆಗೆ ಯು.ಕೆ ಅಸ್ತು

Team Udayavani, May 19, 2019, 6:00 AM IST

ಲಂಡನ್‌: ಯು.ಕೆ.ಯಲ್ಲಿರುವ ಸಿಖ್‌ ಸಮುದಾಯದ ವ್ಯಕ್ತಿಗಳು ಕೃಪಾಣ್‌ಗಳನ್ನು (ಧಾರ್ಮಿಕ ಮಹತ್ವವುಳ್ಳ ಕತ್ತಿಗಳು) ತಮ್ಮೊಂದಿಗೆ ಕೊಂಡೊಯ್ಯಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಅವುಗಳನ್ನು ಬಳಸಲು ಅಲ್ಲಿನ ಸರ್ಕಾರ ಅನುವು ಮಾಡಿ ಕೊಟ್ಟಿದೆ. ಇದಕ್ಕಾಗಿ, ತನ್ನ ಶಸ್ತ್ರಾಸ್ತ್ರ ಕಾಯ್ದೆಗೆ ಯು.ಕೆ. ಸರ್ಕಾರ ತಿದ್ದುಪಡಿ ತಂದಿದೆ.

ಇದಕ್ಕಾಗಿ ಇತ್ತೀಚೆಗೆ ಯು.ಕೆ. ಸಂಸತ್ತಿನಲ್ಲಿ ಮಂಡಿಸಲಾಗಿದ್ದ “ದ ಅಫೆನ್ಸಿವ್‌ ವೆಪನ್ಸ್‌ ಮಸೂದೆ’ಗೆ ಅಲ್ಲಿನ ರಾಜಮನೆತನದ ಅಧಿಕೃತ ಮೊಹರು ಬಿದ್ದಿದೆ.

ಅಸಲಿಗೆ, ಈ ಕಾಯ್ದೆಯು ಯು.ಕೆ.ಯಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಚಾಕು ಇರಿತ ಪ್ರಕರಣಗಳನ್ನು ಹತ್ತಿಕ್ಕುವ ಕುರಿತದ್ದಾಗಿದೆಯಾದರೂ, ಸಿಖ್‌ ಸಮುದಾಯಕ್ಕೆ ಈ ಕಾನೂನಿನಿಂದ ಯಾವುದೇ ತೊಂದರೆಯಾಗದಂಥ ಅಂಶವನ್ನೂ ಸೇರಿಸಲಾಗಿದೆ.

ಹೊಸ ಕಾಯ್ದೆ ಜಾರಿಯಾದಾಗ ಕೃಪಾಣ್‌ಗೆ ವಿನಾಯ್ತಿ ನೀಡುವಂತೆ ಬ್ರಿಟನ್‌ನ ಸಿಖ್ಬರ ಸರ್ವಪಕ್ಷ ಸಂಸದೀಯ ತಂಡದ ನಿಯೋಗವು ಯುಕೆ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು. ಅವರ ಮನವಿಗೆ ಈಗ ಮನ್ನಣೆ ದೊರೆತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ