ಹೊಸಮಠ ಸೇತುವೆ ತಿರುವಿಗೆ ರಿಫ್ಲೆಕ್ಟರ್‌ ಅಳವಡಿಕೆ

ಸಂಪರ್ಕ ರಸ್ತೆಗೆ ಹಳದಿ ಬಣ್ಣದ ಪಟ್ಟಿ, ಸೂಚನ ಫಲಕ; ಹಂಪ್‌ ನಿರ್ಮಾಣಕ್ಕೂ ಕ್ರಮ

Team Udayavani, May 20, 2019, 6:00 AM IST

b-15

ಹೊಸಮಠ ನೂತನ ಸೇತುವೆಯ ಸಂಪರ್ಕರಸ್ತೆಯಲ್ಲಿನ ಅಪಾಯಕಾರಿ ತಿರುವಿನಲ್ಲಿ ಸೂಚನ ಫಲಕ, ಹಳದಿ ಬಣ್ಣದ ಪಟ್ಟಿ ಅಳವಡಿಸಲಾಗಿದೆ.

ಕಡಬ: ಹೊಸಮಠದ ಹೊಸ ಸೇತುವೆಯ ಕಡಬ ಭಾಗದ ಸಂಪರ್ಕ ರಸ್ತೆ ಸೇತುವೆಯನ್ನು ಸೇರುವಲ್ಲಿ ದೊಡ್ಡ ತಿರುವಿನಿಂದ ಕೂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎನ್ನುವ ಉದಯವಾಣಿ ಸುದಿನ ವರದಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಅಧಿಕಾರಿಗಳು ಸ್ಪಂದಿಸಿದ್ದು, ಸಂಪರ್ಕ ರಸ್ತೆಗೆ ಹಳದಿ ಪಟ್ಟಿ, ತಿರುವಿನ ರಸ್ತೆಗೆ ಹಾಗೂ ತಡೆಬೇಲಿಗೆ ರಿಫ್ಲೆಕ್ಟರ್‌ ಅಳವಡಿಸಿ ಅಪಾಯ ಸಂಭವಿಸದಂತೆ ಸೂಚನ ಫಲಕಗಳನ್ನು ನೆಟ್ಟಿದ್ದಾರೆ.

ಉದಯವಾಣಿ ಎಚ್ಚರಿಸಿತ್ತು…
ನೂತನ ಸೇತುವೆ ಹಾಗೂ ಸಂಪರ್ಕ ರಸ್ತೆಯ ಕಾಮಗಾರಿ ಉತ್ತಮವಾಗಿ ಪೂರ್ಣಗೊಂಡಿದ್ದರೂ ಸಂಪರ್ಕ ರಸ್ತೆ ಕಡಬ ಭಾಗದಿಂದ ಸೇತುವೆಯನ್ನು ಸೇರುವಲ್ಲಿನ ತಿರುವು ಅಪಾಯಕಾರಿಯಾಗಿರುವ ಬಗ್ಗೆ ಉದಯವಾಣಿ ಸುದಿನ ತನ್ನ ಮೇ 7ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ನಿಗಮದ ಅಧಿಕಾರಿಗಳ ಗಮನ ಸೆಳೆದಿತ್ತು. ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ರಸ್ತೆ ಆಗಿರುವುದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸಂಚಾರ ಇದ್ದು, ಅಪಘಾತ ಸಂಭವಿಸುವ ಸಾಧ್ಯತೆಗಳ ಬಗ್ಗೆ ವರದಿಯಲ್ಲಿ ಎಚ್ಚರಿಸಲಾಗಿತ್ತು.

ಮುಂದೆ ತಿರುವು ಹಾಗೂ ಸೇತುವೆ ಇದೆ ಎನ್ನುವ ಮುನ್ನೂಚನೆ ನೀಡುವ ಫಲಕ ಅಳವಡಿಸುವುದರೊಂದಿಗೆ ಹೊಸಮಠ ಪೇಟೆಯಿಂದ ಸೇತುವೆಯ ಹತ್ತಿರ ತಿರುವು ಆರಂಭವಾಗುವ ಮೊದಲು ಸಣ್ಣಮಟ್ಟಿನ ರಸ್ತೆ ಉಬ್ಬು ನಿರ್ಮಿಸಿ ದೂರದಿಂದಲೇ ರಸ್ತೆ ಉಬ್ಬು ವಾಹನ ಚಾಲಕರಿಗೆ ಕಾಣಿಸುವಂತೆ ಅದಕ್ಕೆ ಬಣ್ಣ ಬಳಿದು ರಿಫ್ಲೆಕ್ಟರ್‌ ಅಳವಡಿಸಿದರೆ ಉತ್ತಮ ಎನ್ನುವುದು ಸ್ಥಳೀಯರ ಅಭಿಪ್ರಾಯವನ್ನು ಉಲ್ಲೇಖೀಸಲಾಗಿತ್ತು. ವರದಿಗೆ ಸ್ಪಂದಿಸಿದ ನಿಗಮದ ಎಇಇ ಮಂಜುನಾಥ್‌ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.

 ಕ್ರಮ ಕೈಗೊಳ್ಳಲಾಗಿದೆ
ಹೊಸಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ರಸ್ತೆಯ ಇಕ್ಕೆಲೆಗಳಲ್ಲಿ ಮತ್ತು ಮಧ್ಯದಲ್ಲಿ ಬಣ್ಣದ ಪಟ್ಟಿ ಹಾಕಲಾಗಿದೆ. ಸೇತುವೆಯಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಿದ ಫುಟ್‌ಪಾತ್‌ಗೊàಡೆಗಳಿಗೂ ರಿಫ್ಲೆಕ್ಟರ್‌ ಅಳವಡಿಸಿದೆ. ಸಂಪರ್ಕ ರಸ್ತೆ ಸೇತುವೆಗೆ ಸೇರುವಲ್ಲಿ ಹಾಗೂ ಸಂಪರ್ಕ ರಸ್ತೆಯ ತಿರುವಿನಲ್ಲಿ ಝೀಬ್ರಾ ಕ್ರಾಸ್‌ ರೀತಿಯಲ್ಲಿ ಹಳದಿ ಬಣ್ಣದ ಪಟ್ಟಿ ಹಾಕಿ ಅದಕ್ಕೂ ರಿಫ್ಲೆಕ್ಟರ್‌ ಅಳವಡಿಸಿದೆ. ವಾಹನಗಳ ವೇಗ ನಿಯಂತ್ರಿಸಲು ರಸ್ತೆ ಉಬ್ಬು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
– ಮಂಜುನಾಥ್‌, ಎಇಇ, ಕೆಆರ್‌ಡಿಸಿಎಲ್‌

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.