ಪೈಲಟ್ ಆರೋಪ ಸಾಬೀತು
Team Udayavani, May 23, 2019, 6:00 AM IST
ವಾಷಿಂಗ್ಟನ್: 15ರ ಬಾಲಕಿ ಜತೆ ಲೈಂಗಿಕ ಚಟುವಟಿಕೆ ನಡೆಸಿದ ಪ್ರಕರಣದಲ್ಲಿ, ಸ್ಟೀಫನ್ ಬ್ರಾಡ್ಲೆ ಮಿಲ್ (53) ಎಂಬ ಪೈಲಟ್ನ ಅಪರಾಧ ಸಾಬೀತಾಗಿದ್ದು, 5 ವರ್ಷಗಳ ಕಠಿನ ಶಿಕ್ಷೆ ವಿಧಿಸುವ ನಿರೀಕ್ಷೆಯಿದೆ. ಈತ ತನ್ನದೇ ಆದ ಪುಟಾಣಿ ವಿಮಾನ ಹೊಂದಿದ್ದು, ಮಕ್ಕಳಿಗೆ ಪೈಲಟ್ ತರಬೇತಿ ನೀಡುತ್ತಿದ್ದ. 2017ರಲ್ಲಿ ಈತನ ಬಳಿ ಪೈಲಟ್ ತರಬೇತಿಗೆ ಬಂದ 15 ವರ್ಷದ ಬಾಲಕಿಗೆ ತರಬೇತಿ ನೀಡುವಾಗ ಆಗಸದ ಮಧ್ಯೆಯೇ ವಿಮಾನವನ್ನು ಆಟೋ ಪೈಲಟ್ ಮೋಡ್ಗೆ ಹಾಕಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿತ್ತು.