ವಾಯು ಮಾಲಿನ್ಯ : ಭಾರತದ 5ನೇ ಅತಿ ದೊಡ್ಡ ಕೊಲೆಗಾರ

ವಿಶ್ವ ಪರಿಸರ ದಿನ

Team Udayavani, Jun 5, 2019, 6:10 AM IST

air-pollution

ಜಗತ್ತು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ವಾಯು ಮಾಲಿನ್ಯವೂ ಒಂದು. ವಿಶ್ವದಾದ್ಯಂತ ಸಂಭವಿಸುವ ಸಾವಿಗೆ ವಾಯು ಮಾಲಿನ್ಯವೂ ಪ್ರಮುಖ ಕಾರಣವಾಗಿದೆ ಎನ್ನುತ್ತದೆ ಸಂಶೋಧನೆ. ವಿಷಕಾರಿ ರಾಸಾಯನಿಕ ತುಂಬಿದ ಮಲಿನ ಗಾಳಿಯನ್ನು ಶ್ವಾಸಕೋಶದ ಒಳಗೆ ಎಳೆದುಕೊಂಡಾಗ ಅದು ಹಲವು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತದೆ.

ರಾಜಧಾನಿಯೂ ಹೊರತಲ್ಲ
2018ರಲ್ಲಿ ಸ್ವಿಸ್‌ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜಗತ್ತಿನ ಅತ್ಯಂತ ಹೆಚ್ಚು ವಾಯು ಮಾಲಿನ್ಯ ನಗರಗಳಲ್ಲಿ ಭಾರತದ ಗುರುಗ್ರಾಮ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಗಾಜಿಯಾಬಾದ್‌ ಇದ್ದರೆ ಪಾಕಿಸ್ಥಾನದ ಫೈಸಲಾಬಾದ್‌ ಮೂರನೇ ಸ್ಥಾನದಲ್ಲಿದೆ. ದಿಲ್ಲಿಗೆ ಈ ಪಟ್ಟಿಯಲ್ಲಿ 11ನೇ ಸ್ಥಾನ. ಆದರೆ, ಗರಿಷ್ಠ ಮಾಲಿನ್ಯವಾದ ರಾಜಧಾನಿ ಎಂಬ ಹಣೆಪಟ್ಟಿ ಕಳವಳಕಾರಿ.

ಆತಂಕಕಾರಿ ಬೆಳವಣಿಗೆ
ವಾಯು ಮಾಲಿನ್ಯ ಕಾರಣದಿಂದ ಪ್ರತಿ ವರ್ಷ ಜಗತ್ತಿನಾದ್ಯಂತ 7 ಮಿಲಿಯನ್‌ ಮಂದಿ ಸಾವನ್ನಪ್ಪುತ್ತಿದ್ದಾರೆ. ವಾಯು ಮಾಲಿನ್ಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು ಮಾತ್ರವಲ್ಲ ಹವಾಮಾನ ಬದಲಾವಣೆ, ನೀರಿನ ಸಹಜ ಗುಣದ ಮೇಲೆ ದುಷ್ಪರಿಣಾಮ ಮತ್ತು ಆಹಾರ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಉಷ್ಣಾಂಶ ಹೆಚ್ಚಳ
ಉಷ್ಣಾಂಶ ಹೆಚ್ಚಳಕ್ಕೂ ವಾಯು ಮಾಲಿನ್ಯದ ಕೊಡುಗೆ ಅಪಾರ. ಇಂಧನದ ಉತ್ಪಾದನೆ ಮತ್ತು ಬಳಕೆ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ. ಪಳೆಯುಳಿಕೆ ಇಂಧನ ಉರಿಸಿದಾಗ ಅದು ಗ್ಯಾಸ್‌ ಮತ್ತು ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತದೆ. ಇದು ವಾತಾವರಣದ ಉಷ್ಣಾಂಶ ಹೆಚ್ಚಿಸುತ್ತದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಸಂಶೋಧಕರು. ಹಿಮಗಡ್ಡೆ ಕರಗಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿ ಅಪಾಯ ಎರುರಾಗುವ ಸಾಧ್ಯತೆ ಇದೆ.

ದುಷ್ಪರಿಣಾಮ
1 ಮಲಿನ ವಾಯು ಆಸ್ತಮಾಕ್ಕೆ ಕಾರಣವಾಗುತ್ತದೆ.
2 ಶ್ವಾಸಕೋಶದ ಸಾಮರ್ಥ್ಯ ಕುಗ್ಗುತ್ತದೆ.
3 ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆ
4 ಕೆಮ್ಮು ಮತ್ತು ಉಬ್ಬಸ.
5 ರೋಗ ನಿರೋಧಕ ಮತ್ತು ಸಂತಾನೋತ್ಪತ್ತಿ ಶಕ್ತಿ ಕುಂಠಿತ
6 ಅತಿಯಾದ ವಾಯು ಮಾಲಿನ್ಯ ಹೃದ್ರೋಗಕ್ಕೂ ಕಾರಣವಾಗಬಲ್ಲದು.

ಮಾಲಿನ್ಯಕ್ಕೆ ಕಾರಣವಾದ ಅಂಶಗಳು
ಶೇ. 45 ಧೂಳು ಮತ್ತು ನಿರ್ಮಾಣ ಕಾಮಗಾರಿ
ಶೇ. 17 ತ್ಯಾಜ್ಯಗಳನ್ನು ಉರಿಸುವುದರಿಂದ
ಶೇ. 14 ವಾಹನಗಳು
ಶೇ. 9 ಡೀಸೆಲ್‌ ಜನರೇಟರ್‌
ಶೇ. 8 ಕಾರ್ಖಾನೆಗಳು
ಶೇ. 7 ಅಡುಗೆ ತಯಾರಿ

ಭಾರತದಲ್ಲಿ…
ಭಾರತದಲ್ಲೂ ವಾಯು ಮಾಲಿನ್ಯ ಬೀರುವ ಪರಿಣಾಮ ಭೀಕರವಾಗಿದೆ. ಈ ಕಾರಣದಿಂದ ದೇಶದಲ್ಲಿ ಪ್ರತಿ ವರ್ಷ 1.5 ಮಿಲಿಯನ್‌ ಜನ ಸಾಯುತ್ತಿದ್ದಾರೆ. ಇದು ಐದನೇ ಅತಿ ದೊಡ್ಡ ಕೊಲೆಗಾರ ಎನಿಸಿದೆ. ಆಸ್ತಮಾ ಸಹಿತ ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆಯೂ ಭಾರತದಲ್ಲೇ ಅಧಿಕ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.

ಟಾಪ್ ನ್ಯೂಸ್

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Tollywood: ಪ್ರಶಾಂತ್‌ ನೀಲ್‌ – Jr. NTR ಸಿನಿಮಾಕ್ಕೆ ಈ ಟೈಟಲ್‌ ಫಿಕ್ಸ್?

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

17

ಕಾರ್ತಿಕ್‌ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Udupi: ಲೈಂಗಿಕ ದೌರ್ಜನ್ಯ ಬಿಡುಗಡೆಗೆ ಆದೇಶ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

MLC Election; ಕಣದಿಂದ ಹಿಂದೆ ಸರಿಯಲಾರೆ: ರಘುಪತಿ ಭಟ್‌

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಹೊಟೇಲಿಗೆ ಬೆಂಕಿ; ನಂದಿಸಲು ಬಂದ ಅಗ್ನಿಶಾಮಕ ವಾಹನದಲ್ಲಿ ನೀರೇ ಇಲ್ಲ!

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

Udupi ಲೈಂಗಿಕ ದೌರ್ಜನ್ಯ: ಆರೋಪಿಗಳಿಬ್ಬರಿಗೆ ಜೈಲು ಶಿಕ್ಷೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Minchu

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.