ಹೊಯ್ಸಲಕಟ್ಟೆಗೆ ಬಂದಿಗೆ ಹೊಯ್ಸಳ ಎಕ್ಸ್‌ಪ್ರೆಸ್‌ ಟ್ರೇನು!

ಸರ್ಕಾರಿ ಶಾಲೆಗೆ ಟ್ರೇನ್‌ ಮಾದರಿಯಲ್ಲಿ ಬಣ್ಣ, ಮಕ್ಕಳನ್ನು ಸೆಳೆಯಲು ಸರ್ಕಾರದ ವಿನೂತನ ಶೈಲಿ

Team Udayavani, Jun 5, 2019, 4:31 PM IST

5-June-40

ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆಯ ಸರ್ಕಾರಿ ಶಾಲೆಯ ಕೊಠಡಿ ರೈಲಿನ ಬೋಗಿಯ ರೀತಿಯಲ್ಲಿ ಬಣ್ಣ ಬಳಿದುಕೊಂಡು ಈ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ಹುಳಿಯಾರು: ಹೋಬಳಿಯ ಹೊಯ್ಸಲಕಟ್ಟೆ ಗ್ರಾಮಕ್ಕೆ ಹೊಸದಾಗಿ ಕೇರಳದಿಂದ ಟ್ರೈನು ಬಂದಿದ್ದು ಈ ಟ್ರೇನ್‌ಗೆ ಹೊಯ್ಸಳ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡಲಾಗಿದೆ.

ನಿತ್ಯ ಈ ಟ್ರೇನ್‌ನಲ್ಲಿ ಮಕ್ಕಳು ಹತ್ತಿ ಇಳಿದು ಸಂಭ್ರಮಿಸುತ್ತಿದ್ದಾರೆ. ಗ್ರಾಮಸ್ಥರೂ ಸಹ ಬಂದಿರುವ ಹೊಸ ಟ್ರೇನ್‌ ಬಗ್ಗೆ ಮೆಚ್ಚುಗೆಯ ಮಾತನಾಡು ತ್ತಿದ್ದಾರೆ. ಅಚ್ಚರಿಯಾದರೂ ಇದು ಸತ್ಯ. ಕೇರಳ ದಿಂದ ಹೊಯ್ಸಲ ಕಟ್ಟೆಗೆ ಹೊಸ ಟ್ರೇನ್‌ ಬಂದಿದೆ ಯಾದರೂ ಅದು ಹಳಿ ಮೇಲೆ ಚಲಿಸುವ ನಿಜವಾದ ಟ್ರೇನ್‌ ಅಲ್ಲ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಅರ್ಕರ್ಷಿಸುವ ಟ್ರೇನ್‌ ಮಾದರಿಯಲ್ಲಿ ಬಣ್ಣ ಬಳಿಯಲಾಗಿದೆ. ಕೇರಳ ಸರ್ಕಾರ ಜಾರಿಗೆ ತಂದಿರುವ ರೈಲು ಬೋಗಿಯ ಶಾಲಾ ಕೊಠಡಿಯ ಪೇಂಟಿಂಗ್‌ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳ ಕೊಠಡಿಗಳಲ್ಲಿ ಅಲಂಕರಿಸಿರುವಂತೆ ಹೊಯ್ಸಲಕಟ್ಟೆ ಶಾಲೆಗೂ ಪ್ರವೇಶಿಸಿದೆ.

ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹೊಯ್ಸ ಲಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಥೇಟ್ ರೈಲಿನ ಮಾದರಿಯಲ್ಲೇ ಬಣ್ಣ ಬಳಿಯಲಾಗಿದೆ. ಶಾಲೆಯಲ್ಲಿ 2 ಕೊಠಡಿಗಳಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು, ಕಿಟಕಿ ಬಾಗಿಲು ಗಳನ್ನು ಪಕ್ಕಾ ರೈಲು ಬೋಗಿಯ ದೃಶ್ಯದಂತೆ ಪೇಂಟ್ ಮಾಡಲಾಗಿದೆ. ರೈಲನ್ನೇ ನೋಡಿದ ಈ ಭಾಗದ ಮಕ್ಕಳು ಈಗ ಟ್ರೇನ್‌ ಮಾದರಿ ಶಾಲೆಗೆ ಫಿದಾ ಆಗಿದ್ದಾರೆ.

ಶಾಲೆಯ ಅನುದಾನದ ಜೊತೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಆರ್ಥಿಕ ಸಹಕಾರ ದೊಂದಿಗೆ ಶಾಲಾ ಕೊಠಡಿಗೆ ಹೊಸ ರೂಪ ಕೊಟ್ಟಿದ್ದು ರಜೆಯನ್ನು ಮುಗಿಸಿ ಶಾಲೆಗೆ ವಾಪಸ್ಸಾದ ವಿದ್ಯಾರ್ಥಿ ಗಳಿಗೆ ಮತ್ತು ಹೊಸದಾಗಿ ಸೇರಿದ ಚಿಕ್ಕ ಮಕ್ಕಳಿಗೆ ಮೊದಲ ದಿನ ಅಚ್ಚರಿಯ ಜೊತೆಗೆ ಖುಷಿಯೋ ಖುಷಿಯಾಗಿದೆ. ಶಾಲೆಗೆ ಕಾಲಿಟ್ಟ ಹುಡುಗರು ರೈಲಿನ ರೀತಿಯಲ್ಲಿರುವ ಶಾಲೆಯ ಬಣ್ಣ ನೋಡಿ ಅಚ್ಚರಿ ಪಡುವುದರ ಜೊತೆಗೆ ಸಂಭ್ರಮಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಪರಶಿವಮೂರ್ತಿ ಹೇಳಿ ದ್ದಾರೆ.

ಒಟ್ಟಿನಲ್ಲಿ ಉಚಿತ ಸಮವಸ್ತ್ರ, ಪುಸ್ತಕ, ಪೆನ್ನು ಊಟ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖಮಾಡುವಂತೆ ಮಾಡಲಾಗುತ್ತಿದೆ. ಜತೆಗೆ ಈಗ ಶಾಲೆಯ ವಿನ್ಯಾಸವನ್ನೇ ಬದಲಾಯಿಸುವ ಹೊಸ ಕೆಲಸಕ್ಕೆ ಕೈ ಹಾಕಿ ಎಲ್ಲರಿಂದ ಪ್ರಶಂಸೆ ಪಡೆಯುತ್ತಿದೆ. ಅಲ್ಲದೆ ರೈಲುಗಾಡಿಯಂತೆ ರೂಪು ಗೊಂಡು ಜನಾಕರ್ಷಣೆಯೊಂದಿಗೆ ಪೋಷಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ನಿಂತು ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿ ಸೆಲ್ಫಿ ತೆಗೆದುಕೊಳ್ಳುವಂತ್ತಾಗಿದೆ.

ಶಾಲೆಗೆ ಹೊಸ ರೂಪ ಕೊಡಬೇಕೆನ್ನುವುದು ಶಾಲಾಭಿವರದ್ಧಿ ಸಮಿತಿ ಹಾಗೂ ಸ್ಥಳೀಯ ಶಿಕ್ಷಣ ಪ್ರೇಮಿಗಳ ನಿರ್ಧಾರ ಹಾಗೂ ಅವರ ಸಹಾಯ, ಸಹಕಾರದ ಕೊಡುಗೆಯಿಂದ ಶಾಲೆಗೆ ಹೊಸ ಬಣ್ಣ ಬಳಿದು ಶಾಲೆಯ ಕೊಠಡಿಗಳ ಮುಂಭಾಗದ ಚಿತ್ರಣವನ್ನು ಒಂದು ರೈಲು ಬೋಗಿಯಂತೆ ಚಿತ್ರಿಸಿ ಬಣ್ಣ ಬಳಿಯಲಾಗಿದೆ. ಶಾಲೆಯನ್ನು ಆಕರ್ಷಕ ರೈಲಿನಂತೆ ಮಾಡುವುದರಿಂದ ಶಾಲೆಯ ಮಕ್ಕಳ ಹಾಜರಾತಿ ಹೆಚ್ಚುತ್ತಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.