ಮುಂಗಾರು: ಕೊಂಕಣ ರೈಲು ಪ್ರಯಾಣ ಪರಿಷ್ಕೃತ ವೇಳಾಪಟ್ಟಿ ಪ್ರಕಟ


Team Udayavani, Jun 11, 2019, 9:23 AM IST

konkan

ಮಂಗಳೂರು: ಮುಂಗಾರು ಹಿನ್ನೆಲೆಯಲ್ಲಿ ಕೊಂಕಣ ರೈಲಿನ ಪ್ರಯಾಣದ ವೇಳಾಪಟ್ಟಿ ಜೂ. 10ರಿಂದ ಹೊಸದಾಗಿ ಜಾರಿಗೆ ಬಂದಿದ್ದು, ಅ. 31ರ ವರೆಗೂ ಚಾಲ್ತಿಯಲ್ಲಿರಲಿದೆ.

ಕೊಂಕಣ ರೈಲ್ವೇ ಮೂಲಕ ಸಂಚರಿಸುವ ರೈಲುಗಳಿಗೆ ಇದು ಅನ್ವಯ ವಾಗಲಿದೆ. ಈ ವೇಳಾಪಟ್ಟಿಯ ಪ್ರಕಟನೆೆಗೆ ಮೊದಲೇ ಟಿಕೆಟ್‌ ಪಡೆದಿರುವ ಪ್ರಯಾಣಿಕರು ತಮ್ಮ ರೈಲುಗಳ ವ್ಯತ್ಯಯವಾದ ವೇಳೆಯನ್ನು ಗಮನಿಸಬೇಕಾಗಿದೆ.

ನಂ.12617 ಎರ್ನಾಕುಳಂ ಜಂಕ್ಷನ್‌- ನಿಜಾಮುದ್ದೀನ್‌ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ಮಂಗಳೂರು ಜಂಕ್ಷನ್‌ನಿಂದ ರಾತ್ರಿ 9.30ರ ಬದಲು ಸಂಜೆ 7.15ಕ್ಕೆ ಹೊರಡಲಿದೆ. ನಿಜಾಮುದ್ದೀನ್‌ ನಿಲ್ದಾಣವನ್ನು ನಿಗದಿತ 1.15ಕ್ಕೆ ತಲುಪಲಿದೆ.

ಮಂಗಳೂರು ಸೆಂಟ್ರಲ್‌-ಲೋಕಮಾನ್ಯ ತಿಲಕ್‌ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ನಂ. 12620 ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.25ರ ಬದಲು 12.50ಕ್ಕೆ ಹೊರಡಲಿದ್ದು, ಎಂದಿನಂತೆ ಬೆಳಗ್ಗೆ 6.35ಕ್ಕೆ ಮುಂಬಯಿ ತಲಪಲಿದೆ.
ನಂ.70106 ಮಂಗಳೂರು ಸೆಂಟ್ರಲ್‌-ಮಡಗಾಂವ್‌ ಪ್ಯಾಸೆಂಜರ್‌ ರೈಲು ಮಂಗಳೂರು ಸೆಂಟ್ರಲ್‌ನಿಂದ 2.55ರ ಬದಲು 10 ನಿಮಿಷ ಬೇಗ, 2.45ಕ್ಕೆ ಹೊರಡಲಿದೆ. ಮಡಗಾಂವ್‌ಗೆ ರಾತ್ರಿ 10.30ಕ್ಕೆ ತಲುಪಲಿದೆ.

ನಂ.10215 ಮಡಗಾಂವ್‌-ಎರ್ನಾಕುಳಂ ಸಾಪ್ತಾಹಿಕ ರೈಲು ಮಡಗಾಂವ್‌ನಿಂದ ರಾತ್ರಿ 9.30ರ ಬದಲು 30 ನಿಮಿಷ ಬೇಗ 9ಕ್ಕೆ ಹೊರಡಲಿದ್ದು ಎಂದಿನಂತೆ ಮರುದಿನ 10.55ಕ್ಕೆ ಎರ್ನಾಕುಳಂ ತಲುಪಲಿದೆ.

ನಂ.22635 ಮಡಗಾಂವ್‌-ಮಂಗಳೂರು ಸೆಂಟ್ರಲ್‌ ಇಂಟರ್‌ಸಿಟಿ ರೈಲು ಮಡಗಾಂವ್‌ನಿಂದ ಸಂಜೆ 4.15ರ ಬದಲು 4ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 11ಕ್ಕೆ ತಲುಪಲಿದೆ.

12134 ಮಂಗಳೂರು ಜಂಕ್ಷನ್‌-ಮುಂಬಯಿ ಸಿಎಸ್‌ಟಿ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1.55ರ ಬದಲು ಸಂಜೆ 4.45ಕ್ಕೆ ಹೊರಡಲಿದೆ. ಮುಂಬಯಿಗೆ ಮರುದಿನ ಬೆಳಗ್ಗೆ 10.33ಕ್ಕೆ ತಲುಪಲಿದೆ.

ನಂ.16524 ಕಾರವಾರ ಮಂಗಳೂರು ಸೆಂಟ್ರಲ್‌-ಕೆಎಸ್‌ಆರ್‌ ಬೆಂಗಳೂರು (ವಯಾ ಮೈಸೂರು)ವಾರಕ್ಕೆ 3 ಬಾರಿ ಸಂಚರಿಸುವ ರೈಲು ಕಾರವಾರದಿಂದ  2.40ರ ಬದಲು 2.55ಕ್ಕೆ ಹೊರಟು ಬೆಂಗಳೂರು ಕೆಎಸ್‌ಆರ್‌ಗೆ ಯಾವುದೇ ಬದಲಾಗದ ಸಮಯ 8ಕ್ಕೆ ತಲುಪಲಿದೆ.

ನಂ.16514 ಕಾರವಾರ-ಮಂಗಳೂರು ಸೆಂಟ್ರಲ್‌ ಕೆಎಸ್‌ಆರ್‌ ರೈಲು (ವಯಾ ನೆಲಮಂಗಲ) ಕಾರವಾರದಿಂದ 2.40ರ ಬದಲು 2.55ಕ್ಕೆ ಹೊರಟು ಮರುದಿನ ಯಾವುದೇ ಬದಲಾಗದ ಸಮಯ 8ಕ್ಕೆ ಬೆಂಗಳೂರು ತಲಪಲಿದೆ. ನಂ. 56641 ಮಡಗಾಂವ್‌ ಮಂಗಳೂರು ಸೆಂಟ್ರಲ್‌ ಪ್ಯಾಸಂಜರ್‌ ರೈಲು ಮಡಗಾಂವ್‌ನಿಂದ ಮಧ್ಯಾಹ್ನ 1 ಗಂಟೆ ಬದಲು 2 ಗಂಟೆಗೆ ಹೊರಟು ರಾತ್ರಿ 10ಕ್ಕೆ ತಲುಪಲಿದೆ.

16346 ತಿರುವನಂತಪುರ ಕುರ್ಲಾ ನೇತ್ರಾವತಿ ರೈಲು ರಾತ್ರಿ 11.20ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.