ಬಿಹಾರದಲ್ಲಿ ಮಕ್ಕಳ ಸಾವಿನ ಸಂಖ್ಯೆ 100 ಕ್ಕೆ ಏರಿಕೆ; ಆತಂಕ
ಪರಿಸ್ಥಿತಿ ಬಗ್ಗೆ ತಿಳಿಯಲು ಪಾಟ್ನಾಗೆ ಆಗಮಿಸಿದ ಕೇಂದ್ರ ಆರೋಗ್ಯ ಸಚಿವ
Team Udayavani, Jun 16, 2019, 10:15 AM IST
ಪಾಟ್ನಾ: ಬಿಹಾರದ ಮುಜಾಫರಪುರದಲ್ಲಿ ಮಿದುಳು ಜ್ವರದಿಂದ ಸಾವನ್ನಪ್ಪಿರುವ ಮಕ್ಕಳ ಸಂಖ್ಯೆ ಭಾನುವಾರ 100 ದಾಟಿದೆ.
ಸಾವನ್ನಪ್ಪಿರುವ ಎಲ್ಲಾ ಮಕ್ಕಳೂ 10 ವರ್ಷಕ್ಕಿಂತ ಕೆಳಗಿನವರಾಗಿದ್ದು, ಭಾನುವಾರವೇ
ಮುಜಾಫರಪುರದಲ್ಲಿನ ಎರಡು ಆಸ್ಪತ್ರೆಯಲ್ಲಿ 14 ಮಕ್ಕಳು
ಸಾವನ್ನಪ್ಪಿದ್ದಾರೆ.
ವೈಶಾಲಿಯಲ್ಲಿ 10 ಮಕ್ಕಳು , ಮೋತಿಹಾರಿಯಲ್ಲಿ ಇಬ್ಬರು ಮತ್ತುಬೇಗುಸೆರಾಯ್ನಲ್ಲಿ ಒಂದು ಮಗು ಸಾವನ್ನಪ್ಪಿದೆ.
ಕಳೆದ ಜೂನ್ 1 ರಿಂದ 197 ಮಕ್ಕಳು ಎಸ್ಕೆಎಂಸಿಎಚ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು 91 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಎಲ್ಲ ಮಕ್ಕಳೂ ಹೈಪೋ ಗ್ಲೆ„ಸೀಮಿಯಾದಿಂದ ಬಳಲು ತ್ತಿದ್ದಾರೆ.
ಪರಿಸ್ಥಿತಿ ಬಗ್ಗೆ ತಿಳಿಯಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಪಾಟ್ನಾಗೆ ಆಗಮಿಸಿದ್ದುಮುಜಾಫರಪುರಕ್ಕೆ ಭೇಟಿ ನೀಡಲಿದ್ದಾರೆ.