ಈಡೇರದ ಭದ್ರಾ ಮೇಲ್ದಂಡೆ; ಶಾಶ್ವತ ಕಾಮಗಾರಿ ಸುಧಾರಣೆ

ಆಂಧ್ರ ಗಡಿ ಸೋದೇನಹಳ್ಳಿ ಹುಚ್ಚಯ್ಯನ ಮನೆಯಲ್ಲಿ ಎ‍ಚ್ಡಿಕೆ ವಾಸ್ತವ್ಯ • ತಂಗಿದ್ದ ಮನೆಗೇ ಸಹಾಯಧನ ಬಿಡುಗಡೆ ಇನ್ನೂ ಆಗಿಲ್ಲ

Team Udayavani, Jun 19, 2019, 12:46 PM IST

tk-tdy-1..

ಮಧುಗಿರಿ: ಹಿಂದೆ 50:50 ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಯವರು ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಆಂಧ್ರ ಗಡಿಗ್ರಾಮವಾದ ಸೋದೇನಹಳ್ಳಿಯಲ್ಲಿ ( ಅಂದಿನ ಬೆಳ್ಳಾವಿ ಕ್ಷೇತ್ರ )ಗ್ರಾಮ ವಾಸ್ತವ್ಯ ಮಾಡಿದ್ದು, ಈಗಿನ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಕೆಲ ಶಾಶ್ವತ ಕಾರ್ಯಗಳು ನಡೆದು ನೀರಾವರಿ ಯೋಜನೆಗಳು ಭರವಸೆಯಾಗಿಯೇ ಉಳಿದಿವೆ.

ಮಧುಗಿರಿಯ ಈ ಸೋದೇನಹಳ್ಳಿಯಲ್ಲಿ ಜು.7, 2007 ರಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಈಗಿನ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಅಂದು ತಾವು ನೀಡಿದ್ದ ಭರವಸೆಯಲ್ಲಿ ಸಾಕಷ್ಟು ಈಡೇರಿಸಿದ್ದು, ನೀರಾವರಿ ಯೋಜನೆಗಳ ಭರವಸೆ ಹಾಗೆಯೇ ಉಳಿದಿವೆ. ಅಂದು ಸ್ಥಳೀಯ ಶಾಸಕರು ನಿರ್ಲಕ್ಷ್ಯವಹಿಸಿದ ಪರಿಣಾಮ ಈಗ ವಾಸ್ತವ್ಯ ಹೂಡಿದ್ದ ಮನೆ ಸ್ಥಿತಿ ಮಂಕಾಗಿದೆ. ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ಸರ್ಕಾರಿ ಶಾಲೆಯೂ ಸುಭದ್ರ ವಾಗಿದ್ದು, ಆರ್‌ಐಡಿಎಫ್ 10ನೇ ಹಣಕಾಸು ಯೋಜನೆಯಡಿ ತಾವೇ ಉದ್ಘಾಟಿಸಿದ್ದ ಫ್ರೌಢಶಾಲೆ ನೂತನ ಕೊಠಡಿಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಅಂದು ಆರಂಭಿಸಿದ ಶೌಚಾಲಯ ಇಂದಿಗೂ ಸುಸ್ಥಿತಿಯಲ್ಲಿದೆ.

ಹರಳೆಣ್ಣೆ ಮಾರುತ್ತಾ ಜೀವನ: ನಾರಾಯಣಪ್ಪನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ, ಈ ಜನಾಂಗದ ನಾರಾಯಣಪ್ಪ ಅವರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡುವಂತೆ ಅಂದಿನ ಸ್ಥಳೀಯ ಶಾಸಕ (ಬೆಳ್ಳಾವಿ ಕ್ಷೇತ್ರ) ಕೆ.ಎನ್‌.ರಾಜಣ್ಣನವರಿಗೆ ಸೂಚಿಸಿದ್ದರು. ಆದರೆ ಅದು ಕುಮಾರಸ್ವಾಮಿ ಬೆಂಗಳೂರಿಗೆ ತಲು ಪಿದಾಗ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ನಾರಾಯಣಪ್ಪನಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ಸಿಗಲಿಲ್ಲ. ಈಗ ನಾರಾಯಣಪ್ಪ ವಯೋ ಸಹಜವಾಗಿ ಮೃತ ಪಟ್ಟಿದ್ದು, ನಂತರ ಪೊಲೀಸ್‌ ಪೇದೆಯಾಗಿ ಕರ್ತವ್ಯದಲ್ಲಿದ್ದ ಪುತ್ರ ನರಸಿಂಹಯ್ಯ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಈಗ ಮನೆಯನ್ನು ನರಸಿಂಹಯ್ಯ ಕುಟುಂಬ ನೂತನವಾಗಿ ನಿರ್ಮಿಸಿಕೊಂಡಿದ್ದು, ಮೃತ ನಾರಾಯಣಪ್ಪನ ಮಡದಿ ಅಂಜಮ್ಮ ಈಗಲೂ ಹರಳೆಣ್ಣೆ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

ಈ ಗ್ರಾಮದಲ್ಲಿ ಹೆಚ್ಚಾಗಿ ಪ.ಜಾತಿ, ಪ.ಪಂಗಡದ ಸಮುದಾಯವಿದ್ದು ಭದ್ರಾ ಮೇಲ್ದಂಡೆ ಬದಲಾಗಿ ಎತ್ತಿನಹೊಳೆ ಜಾರಿ ಯಾಗುತ್ತಿದೆ. ಇದು ಈಡೇರಿದರೆ ಕ್ಷೇತ್ರದ ನೀರಾವರಿ ಭೂಮಿ ಹೆಚ್ಚಾಗಿ ಕೃಷಿ ಕ್ರಾಂತಿ ಹೆಚ್ಚಾಗಲಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ಗುರುಸ್ವಾಮಿ ಎಂಬವರು ಹಿಂದೆ ಕುಮಾರಸ್ವಾಮಿ ವಾಸ್ತವ್ಯ ಮಾಡಿದ್ದಾಗ ನೀಡಿದ್ದ ಮಾತಿನಂತೆ ವಸತಿ ನಿಲಯ, ಶಿವನಗೆರೆಗೆ ಪ್ರೌಢಶಾಲೆ, ಬಡವನಹಳ್ಳಿಗೆ ಪೊಲೀಸ್‌ ಠಾಣೆ ಮಂಜೂರು ಮಾಡಿದ್ದಾರೆ. ಆದರೆ, ಅಧಿಕಾರ ಕಳೆದುಕೊಂಡ ಕಾರಣ ಕ್ಕಾಗಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಯಾದ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲಿಲ್ಲ ಎಂದರು.

 

● ಮಧುಗಿರಿ ಸತೀಶ್‌

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.