ವಿದ್ಯಾರ್ಥಿಗಳಿಂದ ಹಲಸು, ಮಾವು ತಿನಿಸಿನ ಮೇಳ

ಸುಮಾರು 50 ಬಗೆಯ ವಿವಿಧ ತಿನಿಸುಗಳನ್ನು ತಯಾರಿಸಿದ ಶಾಲಾ ಮಕ್ಕಳು

Team Udayavani, Jun 24, 2019, 11:02 AM IST

hasan-tdy-2..

ಚನ್ನರಾಯಪಟ್ಟಣ ಜ್ಞಾನ ಸಾಗರ ಇಂಟರ್‌ ನ್ಯಾಷನಲ್ ಶಾಲಾ ವಿದ್ಯಾರ್ಥಿಗಳಿಂದ ಹಲವು-ಮಾವು ತಿನಿಸುಗಳ ಮೇಳ ನಡೆಯಿತು.

ಚನ್ನರಾಯಪಟ್ಟಣ: ಪಟ್ಟಣದ ಹೊರವಲಯಲ್ಲಿರುವ ಜ್ಞಾನ ಸಾಗರ ಇಂಟರ್‌ ನ್ಯಾಷನಲ್ ಪಬ್ಲಿಕ್‌ ಶಾಲೆಯ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಲಸು-ಮಾವು ತಿನಿಸಿನ ಮೇಳೆ ಆಯೋಜನೆ ಗೊಂಡಿದ್ದು ಸುಮಾರು 50 ಬಗೆಯ ವಿವಿಧ ತಿನಿಸುಗಳನ್ನು ತಯಾರಿಸಿದರು.

ಮುಂಗಾರಿನಲ್ಲಿ ಮಾವು ಹಾಗೂ ಹಲಸಿದ ಹಣ್ಣುಗಳು ಹೇರಳವಾಗಿ ದೊರೆಯುವುದರಿಂದ ವಿದ್ಯಾರ್ಥಿಗಳಿಗೆ ಈ ಹಣ್ಣುಗಳಿಂದ ತಯಾರು ಮಾಡುವ ವಿವಿಧ ಖಾದ್ಯಗಳನ್ನು ಪರಿಚಯಿಸುವ ದೃಷ್ಟಿಯಿಂದ ಶಿಕ್ಷಣ ಸಂಸ್ಥೆ ಮೇಳವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳೇ ಹಲವು ಬಗೆಯ ತಿನಿಸುಗಳನ್ನು ತಯಾರಿಸಿದ್ದರು. ಇದಕ್ಕೆ ಪೋಷಕರೂ ಸಹಕಾರ ನೀಡಿದ್ದರು. ತಮ್ಮ ಮಕ್ಕಳಿಗೆ ಸಹಕಾರ ನೀಡಲು ಪಾಲಕರೂ ಸಹ ಅನೇಕ ತಿನಿಸುಗಳನ್ನು ತಯಾರು ಮಾಡಿಕೊಟ್ಟಿದ್ದರು.

ಗಮನ ಸೆಳೆದ ಮಾವಿನ ಖಾದ್ಯಗಳು: ಮಾವಿನ ಚಿತ್ರನ್ನ, ಮಾವಿನ ಹಣ್ಣಿನ ಜ್ಯೂಸ್‌, ಉಪ್ಪಿನಕಾಯಿ, ಮ್ಯಾಂಗೋಮಸ್ತಾನಿ, ಮ್ಯಾಂಗೋ ಮಿಲ್ಕ್ಶೇಕ್‌ ಮ್ಯಾಂಗೋ ಪ್ಯೂರಿ, ಮ್ಯಾಂಗೋ ಹಲ್ವಾ, ಮಾವಿನ ಹಣ್ಣಿನ ಕೇಸರಿಬಾತ್‌, ಮ್ಯಾಂಗೋ ಪೇಡಾ, ಮ್ಯಾಂಗೋ ಜಾಮ್‌, ಮಾವಿನ ಹಣ್ಣಿನ ರಸಾಯನ, ಹಲಸಿನ ಹಾಗೂ ನೇರಳೆ ಹಣ್ಣಿನಿಂದ ಅನೇಕ ಬಗೆಯ ಜ್ಯೂಸ್‌ಗಳನ್ನು ತಯಾರಿಸಿ ಶಾಲಾ ಶಿಕ್ಷಕರಿಗೆ ನೀಡಿಲ್ಲದೇ ಕಾರ್ಯಕ್ರಮದ ಗಣ್ಯರಿಗೂ ಸವಿಯಲು ವಿದ್ಯಾರ್ಥಿಗಳು ನೀಡಿದರು.

80 ವಿದ್ಯಾರ್ಥಿಗಳು ಭಾಗಿ: 4ರಿಂದ 10ನೇ ತರಗತಿಯವರೆಗೆ ಸುಮಾರು 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಪ್ರತಿ ಶಾಲೆಯ ಪ್ರತಿ ವಿಭಾಗಕ್ಕೆ ನಾಲ್ಕು ಮಂದಿಯ ಒಂದು ತಂಡ ರಚನೆ ಮಾಡಿದ್ದರಿಂದ ಒಂದು ತಂಡದಲ್ಲಿ ಕನಿಷ್ಠ 15 ಬಗೆಯ ತಿನಿಸನ್ನು ತಯಾರಿಸಿದ್ದರು. 8ನೇ ತರಗತಿ ಹರ್ಷಿತಾ ಹಾಗೂ ರಿಷಾ ಉದಯವಾಣಿಯೊಂದಿಗೆ ಮಾತನಾಡಿ, ಮಾವಿನ ಮೇಳದಿಂದ ನಮಗೆ ಹೊಸ ಅನುಭವ ದೊರೆಯುತ್ತಿರುವುದಲ್ಲದೇ ಅಂತರ್ಜಾಲದ ಮೂಲಕ ಮಾವಿನ ತಿನಿಸು ತಯಾರಿಸುವುದನ್ನು ನೋಡಿ ನಾವೇ ತಯಾರು ಮಾಡಿದ್ದೇವೆ, ಹಣ್ಣಿನ ತಿನಿಸುಗಳಿಂದ ನಮಗೆ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹ ಕಾರಿಯಾಗಿವೆ ಎಂದು ಹೇಳಿದರು.ನಾಗೇಶ್‌ ಎಜು ಕೇಷನ್‌ ಟ್ರಸ್ಟಿನ ಕಾರ್ಯದರ್ಶಿ ಡಾ.ಭಾರತಿ ಸುದ್ದಿ ಗಾರರೊಂದಿಗೆ ಮಾತನಾಡಿ ಮಕ್ಕಳಲ್ಲಿನ ಕ್ರಿಯಾ ಶೀಲವನ್ನು ಬೆಳೆಸಲು ಈ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ. ಮಾವು ಹಾಗೂ ಹಲಸಿದ ಖಾದ್ಯ ಗಳನ್ನು ರುಚಿಯಾಗಿ ತಯಾರು ಮಾಡಿ ಉತ್ತಮ ವಾಗಿ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು ಎಂದರು. ಮಕ್ಕಳ ಸಾಹಿತ್ಯ ಪರಿ ಷತ್ತಿನ ರಾಜ್ಯಾಧ್ಯಕ್ಷ ಸಿ.ಎನ್‌.ಅಶೋಕ್‌, ಪದಾಧಿ ಕಾರಿಗಳಾದ ನೀಲಾ, ಅಭಿ, ಶಿಕ್ಷಣ ಸಂಸ್ಥೆ ಡೀನ್‌ ಡಾ. ಸುಜಾಫಿಲಿಪ್‌ ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.