“ನಟ ಭಯಂಕರ’ ಸೆಟ್ನಲ್ಲಿ ಅಭಿಷೇಕ್
Team Udayavani, Jul 1, 2019, 3:00 AM IST
ಬಿಗ್ಬಾಸ್ ಖ್ಯಾತಿಯ ಪ್ರಥಮ್ ನಟಿಸಿ, ನಿರ್ದೇಶಿಸುತ್ತಿರುವ “ನಟ ಭಯಂಕರ’ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಇತ್ತೀಚೆಗೆ ಚಿತ್ರದ ಸೆಟ್ಗೆ ಭೇಟಿ ನೀಡಿದ ನಟ ಅಭಿಷೇಕ್ ಅಂಬರೀಶ್, ಕೆಲಕಾಲ ಚಿತ್ರತಂಡದ ಜೊತೆ ಸಮಯ ಕಳೆದರು.
ಚಿತ್ರದ ಕಥೆ, ಚಿತ್ರದಲ್ಲಿ ಬರುವ ಸಂಭಾಷಣೆಗಳು, ದೃಶ್ಯಗಳ ಬಗ್ಗೆ ತಿಳಿದುಕೊಂಡ ಅಭಿಷೇಕ್ ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು. ಅಲ್ಲದೆ “ನಟ ಭಯಂಕರ” ಚಿತ್ರದ ಕೆಲ ದೃಶ್ಯಗಳನ್ನು ತಾವೇ ನಿರ್ದೇಶಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಚಿತ್ರದ ನಾಯಕ ನಟ ಕಂ ನಿರ್ದೇಶಕ ಪ್ರಥಮ್, ನಟಿ ನಿಹಾರಿಕಾ, ಪವನ್, ಓಂ ಪ್ರಕಾಶ್ ರಾವ್ ಸೇರಿದಂತೆ ಚಿತ್ರದ ಕಲಾವಿದರು ತಂತ್ರಜ್ಞರು ಹಾಜರಿದ್ದರು.